Print

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿನ್ 2017, ಫೆಬ್ರೆರ್ 10, 11 ಆನಿ 12 ವೆರ್ ಮಂಗ್ಳುರ್ಚ್ಯಾ ಟಾವ್ನ್‌ಹೊಲಾಂತ್ ಮಾಂಡುನ್ ಹಾಡುಂಕ್ ಯೆವ್ಜಿಲ್ಲ್ಯಾ ಕೊಂಕಣಿ ಲೋಕೋತ್ಸವ್ ಹಾಚೆಂ ಲಾಂಛನ್ ತಶೆಂಚ್ ಪ್ರದರ್ಶನ್ ಆನಿ ವಿಕ್ರ್ಯಾ ಥಳಾಂಕ್ ಆಪೊವ್ಣ್ಯಾ ಪತ್ರ್ ಮೆಕ್ಳಿಕ್ ಕಾರ್ಯೆಂ 02.12.2016 ವೆರ್ ಪ್ರೆಸ್ ಕ್ಲಬಾಂತ್ ಚಲ್ಲೆಂ. ಲಾಂಛನ್ ಲೊಕಾರ್ಪಣ್ ಕೆಲ್ಲ್ಯಾ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತೆಲಿನೊನ್ ಮಾಧ್ಯಮಾಂ ಮುಕಾಂತ್ರ್ ಸರ್ವ್ ಕೊಂಕ್ಣಿ ಲೊಕಾಂಚೊ ಸಹಕಾರ್ ಮಾಗ್ಲೊ.

 

ಲಾಂಛನ್ :
ಕೊಂಕಣಿಂತ್ 3 ಧರ್ಮಾಂಚೊ 41 ಸಮುದಾಯಾಂಚೊ ಲೋಕ್ ಆಸಾ. ಕೊಂಕಣಿ ಲೊಕಾಚೊ ಸಂಕೇತ್ ಜಾವ್ನ್ ಜಾಂಬ್ಳಿ ರಂಗ್, ಆಮಿ ಸರ್ವ್ ಭಾರತೀಯ್ ಮ್ಹಳ್ಳ್ಯಾ ಅರ್ಥಾರ್ ತ್ರಿವರ್ಣ್ ಉದೆಲ್ಯಾತ್. ಕೊಂಕಣಿಚೆಂ ಖಾಶೆಲೆಂ ಸಂಗೀತ್ ಸಾಧನ್ ಗುಮಟ್, ಚಂದ್ರ್, ಮಾಡ್ ಆನಿ ದರ್ಯೊ ಕೊಂಕಣ್ ಕರಾವಳಿಚೆಂ ಪ್ರತೀಕ್ ತರ್, ಹೊಡೆಂ ಕೊಂಕ್ಣಿ ಲೊಕಾಚ್ಯಾ ವಾವ್ರಾಚೊ ಸಂಕೇತ್. ಕಾವಿ ಬಣ್ ಕೊಂಕಣಿಚೊ ಸಾಂಪ್ರದಾಯಿಕ್ ಕಲಾ `ಕಾವಿಕಲಾ' ಆನಿ ತಾಂತುಂ ಉದೆಲ್ಲಿ ಲಿಖ್ಣಿ ಕೊಂಕಣಿ ಸಾಹಿತ್ಯ್ ತಶೆಂಚ್ ಪಾಂಚ್ ಕಲಾಕಾರ್ ಕೊಂಕಣಿಚ್ಯಾ ವೆವೆಗ್ಳ್ಯಾ ಲೋಕ್‌ವೇದ್ ಸಂಸ್ಕೃತಿಚೆಂ ಗಿರೇಸ್ತ್‌ಪಣ್ ದಾಕಯ್ತಾತ್. ಕೊಂಕಣಿಚ್ಯಾ ಹ್ಯಾ ಸರ್ವ್ ಸಾಹಿತಿಕ್, ಸಾಂಸ್ಕೃತಿಕ್ ಸೊಭಾಯೆಕ್ ತಾಚ್ಯಾ ಸರ್ವ್ ವಿವಿಧತಾಯೆ ಸವೆಂ ದಾಕೊಂವ್ಚೊ ವ್ಹಡ್ ಸಂಭ್ರಮ್‌ಚ್ ಕೊಂಕಣಿ ಲೋಕೋತ್ಸವ್.

ಹೆಂ ಲಾಂಛನ್ ಪ್ರಖ್ಯಾತ್ ಕಲಾಕಾರ್ ಶ್ರೀ ವಿಲ್ಸನ್ ಜೆ.ಪಿ. ಡಿಸೋಜ ಕಯ್ಯಾರ್ ಹಾಣೆಂ ರಚ್ಲಾಂ.

 

ಪ್ರದರ್ಶನ್ ಆನಿ ವಿಕ್ರ್ಯಾ ಥಳಾಂ:
ಕೊಂಕಣಿಂತ್ ವಿವಿಧ್ ಖಾಣಾಂ-ಜೆವ್ಣಾಂ, ವಿಶಿಶ್ಟ್ ಪರಿಕರಾಂ, ವಿಭಿನ್ನ್ ಆಚರಣಾಂ ಆಸಾತ್. ಹಾಂಚೆಂ ಪ್ರದರ್ಶನ್ ಕರುಂಕ್, ಲೊಕಾಕ್ ಮಾಹೆತ್ ದೀಂವ್ಕ್ ಆನಿ ವಿಕ್ರೊ ಕರುಂಕ್ ಕೊಂಕಣಿ ಲೋಕೋತ್ಸವಾಚ್ಯಾ ತೀನ್‌ಯಿ ದಿಸಾ ಟಾವ್ನ್‌ಹೊಲಾ ಭೊಂವಾರಿಂ ವಿಕ್ರ್ಯಾ ಥಳಾಂಕ್ (stalls) ಆವ್ಕಾಸ್ ರಚುನ್ ದಿಲಾ.

ಅ.    ಕೊಂಕಣಿ ವಿಭಾಗ್ :

೧.    ಕೊಂಕಣಿಚಿಂ ವಿವಿಧ್ ಲೋಕ್‌ವೇದ್ ಕಲಾ ದಾಕೊಂವ್ಕ್.
೨.    ಕೊಂಕಣಿ ಲೊಕಾಜೀವನ್, ಪರಿಸರ್ ದಾಕೊಂವ್ಚಿಂ ಜೀವಂತ್ ಪ್ರಾತ್ಯಕ್ಷಿತಾ
೩.    ವಿವಿಧ್ ಕೊಂಕಣಿ ಪರಿಕರಾಂ, ಸಂಗೀತ್ ಸಾಧನಾಂ
೪.    ಕೊಂಕಣಿ ಪುಸ್ತಕಾಂ ಆನಿ ಸಿಡಿ ವಿಕ್ರೊ
೫.    ಕೊಂಕಣಿ ಖಾಣಾಂ ಜೆವ್ಣಾಂ

ಆ. ಹೆರ್ ವಿಭಾಗ್ : ವಾಣಿಜ್ಯ್ ವಿಕ್ರ್ಯಾ ಥಳಾಂ
    * ಖೆಳ್ಚ್ಯೊ ವಸ್ತು * ವಸ್ತರಾಂ * ಐಸ್‌ಕ್ರೀಮ್ * ವಿವಿಧ್ ರಿತಿಚಿಂ ಖಾಣಾಂ-ಜೆವ್ಣಾಂ * ಗೊಡ್ಶೆಂ-ಮಿಠಾಯ್ ಆನಿ ಹೆರ್  stalls

ಪತ್ರಿಕಾ ಗೋಷ್ಟಿಂತ್ ಅಕಾಡೆಮಿ ಸಾಂದೆ ಲಾರೆನ್ಸ್ ಡಿಸೋಜ, ಶೇಖರ ಗೌಡ, ಕೆ. ದೇವದಾಸ ಪೈ, ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ ಆನಿ ಲೇಖಕ್ ವಿತೊರಿ ಕಾರ್ಕಳ್ ಹಾಜರ್ ಆಸ್‌ಲ್ಲೆ.


ಚಡಿತ್ ಮಾಹೆತಿಕ್ :
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ್ ಪಾಲಿಕಾ ಬಾಂದಪ್, ಲಾಲ್‌ಭಾಗ್, ಮಂಗ್ಳುರ್-3

ಫೊನ್: 0824 2453167 ಹಾಂಗಾ ಸಂಪರ್ಕ್ ಕರ್ಯೆತಾ.ಕೊಂಕಣಿ ಲೋಕೋತ್ಸವ ಲಾಂಛನ ಬಿಡುಗಡೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2017, ಫೆಬ್ರವರಿ 10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ನಡೆಸಲುದ್ದೇಶಿಸಿದ ಕೊಂಕಣಿ ಲೋಕೋತ್ಸವದ ಲಾಂಛನ ಹಾಗೂ ಮಳಿಗೆಗಳಿಗೆ ಆಹ್ವಾನವನ್ನು ದಿನಾಂಕ 02.12.2016 ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅನಾವರಣಗೊಳಿಸಲಾಯಿತು. ಅನಾವರಣಗೊಳಿಸಿದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಸಮಸ್ತ ಕೊಂಕಣಿಗರ ಸಹಕಾರವನ್ನು ಕೋರಿದರು.

 

ಲಾಂಛನ : ಕೊಂಕಣಿಯಲ್ಲಿ 3 ಧರ್ಮಗಳ 41 ಸಮುದಾಯಗಳ ಜನರಿದ್ದಾರೆ. ಕೊಂಕಣಿಗರನ್ನು ಸಂಕೇತಿಸುವ ನೇರಳೆ ವರ್ಣ, ನಾವೆಲ್ಲರೂ ಭಾರತೀಯರು ಎಂಬರ್ಥದ ತ್ರಿವರ್ಣ ಮೂಡಿ ಬಂದಿದೆ. ಕೊಂಕಣಿಯ ಅನನ್ಯ ಸಾಂಸ್ಕøತಿಕ ವಾದನ ಗುಮಟೆಯನ್ನು ಮೇಲ್ಭಾಗದಲ್ಲಿ ರಚಿಸಲಾಗಿದೆ. ಪೂರ್ಣ ಚಂದಿರ, ತೆಂಗಿನ ಮರಗಳು ಮತ್ತು ಸಮುದ್ರ ಕೊಂಕಣ ಕರಾವಳಿಯನ್ನು ಪ್ರತಿಬಿಂಬಿಸುತ್ತವೆ. ಕಾವಿವರ್ಣವು ಕೊಂಕಣಿಗರ ಸಾಂಪ್ರದಾಯಿಕ ಕಲೆಯಾದ ಕಾವಿಕಲೆಯನ್ನೂ ಮತ್ತು ಎಡಭಾಗದಲ್ಲಿ ಕಾವಿವರ್ಣದಲ್ಲಿ ಮೂಡಿಬಂದ ಲೇಖನಿ ಕೊಂಕಣಿಯ ಸಮಗ್ರ ಸಾಹಿತ್ಯವನ್ನೂ ಹಾಗೂ 5 ಮಂದಿ ಕಲಾವಿದರು ವಿವಿಧ ಜನಪದ ಸಂಸ್ಕøತಿಗಳ ಬಾಹುಳ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಕೊಂಕಣಿಯ ಈ ಎಲ್ಲಾ ಸಾಹಿತ್ಯಕ, ಸಾಂಸ್ಕøತಿಕ ಸೊಗಡನ್ನು ಅದರ ಎಲ್ಲಾ ವೈವಿಧ್ಯಗಳೊಡನೆ ಲೋಕಕ್ಕೆ ಪಸರಿಸುವ ಬಹು ದೊಡ್ಡ ಸಂಭ್ರಮವೇ ಕೊಂಕಣಿ ಲೋಕೋತ್ಸವ.

ಈ ಲಾಂಛನವನ್ನು ಪ್ರಖ್ಯಾತ ಕಲಾವಿದರಾದ ಶ್ರೀ ವಿಲ್ಸನ್ ಜೆ.ಪಿ. ಡಿಸೋಜ ಕಯ್ಯಾರ್ ಇವರು ರಚಿಸಿದ್ದಾರೆ.

 

ಮಳಿಗೆಗಳು : ಕೊಂಕಣಿಯಲ್ಲಿ ವಿವಿಧ ತಿಂಡಿ ತಿನಿಸುಗಳು, ಆಹಾರ ವಿವಿಧತೆಗಳು, ವಿಶಿಷ್ಟ ಪರಿಕರಗಳು, ವಿಭಿನ್ನ ಆಚರಣೆಗಳು ಇವೆ. ಇವೆಲ್ಲವನ್ನು ಪ್ರದರ್ಶಿಸಲು, ಜನರಿಗೆ ಮಾಹಿತಿ ನೀಡಲು, ಪ್ರದರ್ಶನ ಮತ್ತು ಮಾರಾಟಕ್ಕಾಗಿ ಕೊಂಕಣಿ ಲೋಕೋತ್ಸವದ ಮೂರು ದಿನವೂ ಪುರಭವನದ ಸುತ್ತ, ವಿವಿಧ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅ.    ಕೊಂಕಣಿ ವಿಭಾಗ :

1.    ಕೊಂಕಣಿಯ ವಿವಿಧ ಜನಪದ ಕಲೆಗಳನ್ನು ಬಿಂಬಿಸುವ ಮಳಿಗೆಗಳು.
2.    ಕೊಂಕಣಿ ಜನಜೀವನವನ್ನು, ಪರಿಸರವನ್ನು ಬಿಂಬಿಸುವ ಜೀವಂತ ಪ್ರಾತ್ಯಕ್ಷಿತೆ ಮಳಿಗೆಗಳು
3.    ವಿವಿಧ ಕೊಂಕಣಿ ಪರಿಕರಗಳು, ಸಂಗೀತ ಸಾಧನಗಳು
4.    ಕೊಂಕಣಿ ಪುಸ್ತಕ ಮತ್ತು ಸಿಡಿ ಮಾರಾಟ ಮಳಿಗೆಗಳು
5.    ಕೊಂಕಣಿ ತಿಂಡಿ ತಿನಿಸು, ಊಟೋಪಚಾರ ಮಳಿಗೆಗಳು

ಆ.    ಇತರೆ ವಿಭಾಗ : ವಾಣಿಜ್ಯ ಮಳಿಗೆಗಳು

•    * ಆಟೋಟದ ವಸ್ತುಗಳು * ಬಟ್ಟೆಬರೆ * ಐಸ್‍ಕ್ರೀಮ್ * ವಿವಿಧ ಶೈಲಿಯ ತಿಂಡಿ ತಿನಿಸುಗಳು, ಊಟ     * ಸಿಹಿ ತಿಂಡಿಗಳು ಹಾಗೂ ಇತರೆ.

 

ಕೊಂಕಣಿ ಸಾಂಸ್ಕøತಿಕ ಕಾರ್ಯಕ್ರಮ ನೀಡಲು ತಂಡಗಳಿಗೆ ಆಹ್ವಾನ:

ಈ ಮಹಾಸಮ್ಮೇಳನದ ವೇದಿಕೆಯ ಮೇಲೆ ಮೂರೂ ದಿನಗಳಲ್ಲಿ ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ - ಮೂರು ವಿಭಾಗಗÀಳಿಂದ ಅಂದರೆ  (1) ಕಾಲೇಜು ವಿದ್ಯಾರ್ಥಿಗಳು, (2) ಮಹಿಳಾ ಮತ್ತು ಮಕ್ಕಳು, (3) ಇತರ ಕಲಾವಿದರುಗಳಿಂದ ತಂಡಗಳಲ್ಲಿ ಗಾಯನ-ನೃತ್ಯ-ಅಭಿನಯ ಮಿಶ್ರಿತ 15 ನಿಮಿಷಗಳ ಕಾರ್ಯಕ್ರಮ ಹಾಗೂ (4) ಜನಪದ ಕಲಾವಿದ ಪಂಗಡಗಳಿಂದ ಒಂದು ನಿರ್ದಿಷ್ಠ ನೃತ್ಯ ಪ್ರಕಾರದ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, ತಮ್ಮ ತಂಡದ ವಿವರವನ್ನು ದಿ. 12.12.2016 ರ ಒಳಗಾಗಿ ಕಳುಹಿಸಬಹುದು. ಆಹ್ವಾನಿತ ತಂಡಗಳಿಗೆ ಸೂಕ್ತ ಗೌರವವಧನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಛೇರಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‍ಭಾಗ್, ಮಂಗಳೂರು-575003 ದೂರವಾಣಿ : 0824 2453167 ಇಲ್ಲಿ ಸಂಪರ್ಕಿಸಬಹುದೆಂದು ಅಕಾಡೆಮಿ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ತಿಳಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಅಕಾಡೆಮಿ ಸದಸ್ಯರಾದ ಲಾರೆನ್ಸ್ ಡಿಸೋಜ, ಶೇಖರ ಗೌಡ, ಕೆ. ದೇವದಾಸ ಪೈ ಮತ್ತು ಲೇಖಕ ವಿತೊರಿ ಕಾರ್ಕಳ ಉಪಸ್ಥಿತರಿದ್ದರು.