ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಬರುವ ಫೆಬ್ರವರಿಯಲ್ಲಿ ಆಯೋಜಿಸಿದ ಕೊಂಕಣಿ ಲೋಕೋತ್ಸವದ ಬಗ್ಗೆ ಜನರಿಗೆ ಮಾಹಿತಿ ನೀಡಲು ಆಯೋಜಿಸಿದ ಪ್ರಚಾರ ಅಭಿಯಾನದ ಉದ್ಘಾಟನೆ ದಿನಾಂಕ 02.01.2017ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕುಸುಮ ಕಾಮತ್ ಅವರು ನೆರವೇರಿಸಿ ಶುಭ ಹಾರೈಸಿದರು.

ಉಡುಪಿಯ ಎಂ.ಜಿ.ಎಮ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಶ್ರೀ ರೋಯ್ ಕ್ಯಾಸ್ತೆಲಿನೊ ಪ್ರಸ್ತಾವನೆಗೈದು ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಶಶಿ ಭೂಷಣ್ ಕಿಣಿ, ಡಾ. ನಾಗೇಶ್ ಜಿ. ರಾವ್, ಶ್ರೀಮತಿ ಪೂರ್ಣಿಮಾ ಸುರೇಶ್, ಪ್ರಕಾಶ್ ಶೆಣ್ಯೆ, ಅಕಾಡೆಮಿ ಸದಸ್ಯರಾದ ಲಾರೆನ್ಸ್ ಡಿಸೋಜ, ಕಮಲಾಕ್ಷ ಶೇಟ್, ಪ್ರಚಾರ ಸಮಿತಿ ಸದಸ್ಯರಾದ ಪ್ರಕಾಶ್ ನಾಯಕ್, ಜೇಮ್ಸ್ ಡಿಸೋಜ, ಸಂದೀಪ್ ಮೊಂತೇರೊ, ಜೆರೊಮ್ ಡಿಸೋಜ, ಸುನೀಲ್ ಮಣಿಯಂಪಾರೆ ಮುಂತಾದವರು ಹಾಜರಿದ್ದರು. ಅಕಾಡಮಿಯ ರಿಜಿಸ್ಟ್ರಾರ್ ಡಾ. ದೇವದಾಸ ಪೈ ವಂದಿಸಿದರು.

 

 

 

ಪ್ರಚಾರ ಅಭಿಯಾನ ಹಾದು ಹೋಗುವ ಪ್ರಮುಖ ಸ್ಥಳಗಳು:

2017 ಜನವರಿ 2
ಉಡುಪಿ, ಕೋಟ/ಕುಂದಾಪುರ, ಉಪ್ಪುಂದ/ಶಿರೂರು, ಭಟ್ಕಳ, ಶಿರಾಲಿ

2017 ಜನವರಿ 3
ಹೊನ್ನಾವರ, ಹಳದಿಪುರ/ಧಾರೇಶ್ವರ್, ಕುಮಟಾ, ಅಂಕೋಲ, ಆವರ್ಸಾ, ಕಾರವಾರ, ಮಾಬಿಳೆ, ಅಳಗಾ/ಉಳಗಾ, ಜೋಯಿಡಾ

2017 ಜನವರಿ 4
ದಾಂಡೇಲಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ

2017 ಜನವರಿ 5
ಮುಂಡುಗೋಡ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಸಾಗರ

2017 ಜನವರಿ 6
ಶಿವಮೊಗ್ಗ, ಎನ್.ಆರ್ ಪುರ,. ಕೊಪ್ಪ , ಜಯಪುರ, ಬಾಳೆಹೊನ್ನೂರು, ಕಳಸ

2017 ಜನವರಿ 7
ಮೂಡಿಗೆರೆ, ಚಿಕ್ಕಮಗಳೂರು, ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಗುರುವಾಯನಕೆರೆ, ನಾರಾವಿ

2017 ಜನವರಿ 8
ಮಿಯಾರ್, ಕಾರ್ಕಳ, ಸಾಣೂರು, ಮೂಡುಬಿದ್ರೆ, ಮಂಗಳೂರು

2017 ಜನವರಿ 9
ಬಂಟ್ವಾಳ, ಉಪ್ಪಿನಂಗಡಿ, ಸಕಲೇಶಪುರ, ಹಾಸನ -> ಬೆಂಗಳೂರು

2017 ಜನವರಿ 10
ಬೆಂಗಳೂರು, ಮಂಡ್ಯ, ಮೈಸೂರು

2017 ಜನವರಿ 11
ಕುಶಾಲನಗರ, ವಿರಾಜಪೇಟೆ, ಮಡಿಕೇರಿ, ಸುಳ್ಯ, ಸುಬ್ರಹ್ಮಣ್ಯ

2017 ಜನವರಿ12
ಪುತ್ತೂರು, ವಿಟ್ಲ, ಪೆರ್ಲ, ನಾರಂಪಾಡಿ, ಬೇಳ, ಕುಂಬ್ಳಾ

2017 ಜನವರಿ 13
ಕಾಸರಗೋಡು, ಮಂಜೇಶ್ವರ, ತಲಪಾಡಿ, ತೊಕ್ಕೊಟ್ಟು -> ಮಂಗಳೂರು

 

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]