15-01-2017: "ಸರಕಾರವು ಸಾಹಿತಿ, ಕಲಾವಿದರಿಗೆ ಹಲವಾರು ಸವಲತ್ತುಗಳನ್ನು ನೀಡುತ್ತದೆ. ಕನ್ನಡ ಮತ್ತು ಸಂಸ್ತøತಿ ಇಲಾಖೆ ಅಡಿಯಲ್ಲಿ ಹಲವಾರು ಅಕಾಡೆಮಿಗಳು, ಪ್ರಾಧಿಕಾರಗಳು ಇವೆ. ವಿವಿಧ ಸವಲತ್ತುಗಳೂ ಇವೆ. ಆದರೆ ಸೂಕ್ತ ದಾಖಲೆಗಳನ್ನು ನೀಡಿ ಅವನ್ನು ಪಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಸಂಘಟನೆಯ ಮುಖಾಂತರ ಮಾಹಿತಿ ಮತ್ತು ಸವಲತ್ತಿನ ಅಗತ್ಯವಿರುವ ಕಲಾವಿದರನ್ನು ತಲುಪಬಹುದು. ಈ ಉದ್ದೇಶದಿಂದ ಇಂದು ನಕ್ತಿರಾಂ – ಕೊಂಕಣಿ ಸಾಹಿತಿ ಮತ್ತು ಕಲಾವಿದರ ಒಕ್ಕೂಟವನ್ನು ಸ್ಥಾಪಿಸಲು ಹರ್ಷಿಸುತ್ತೇನೆ. ನಕ್ತಿರಾಂ ಎಂದರೆ ನಕ್ಷತ್ರಗಳು. ಕೊಂಕಣಿ ಸಮಾಜದ ನಕ್ಷತ್ರಗಳ ಅಗತ್ಯತೆಗಳಿಗೆ ಸ್ಪಂದಿಸಲು ಈ ಸಂಘಟನೆ ಕಾರ್ಯೊನ್ಮುಖವಾಗಲಿ. ಕೊಂಕಣಿಯ ಎಲ್ಲಾ ಪ್ರಬೇಧಗಳ ಸಾಹಿತಿ ಕಲಾವಿದರಿಗೆ ಅಗತ್ಯತೆಗಳಿಗೆ ಸ್ಪಂದಿಸಲಿ. ಸಂಘಟನೆಗಳು ಎಷ್ಟಿದ್ದರೂ ಇರಲಿ. ಕೊಂಕಣಿಯ ಬೆಳವಣಿಗೆಗೆ ಪೂರಕವಾಗಿ ಅವು ದುಡಿಯಲಿ" ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಹೇಳಿದರು.

 

 

 

 

 

ಅವರು ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ 15.01.2017 ರಂದು ನಡೆದ ಕೊಂಕಣಿ ಸಾಹಿತಿ ಮತ್ತು ಕಲಾವಿದರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಸಹಕಾರಿಯಾಗುವ `ನಕ್ತಿರಾಂ’ ಸಂಘಟನೆಯನ್ನು ದೀಪ ಪ್ರಜ್ವಲನೆಗೊಳಿಸಿ, ಸ್ಥಾಪನೆಯನ್ನು ಘೋಷಿಸಿ ಮಾತನಾಡುತ್ತಿದ್ದರು. ಎಲ್ಲಾ ಕಲಾವಿದರು ಸಾಹಿತಿಗಳು ಫೆಬ್ರವರಿಯಲ್ಲಿ ನಡೆಯುವ ಕೊಂಕಣಿ ಲೋಕೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ ಕೊಟ್ಟರು.

ಅಕಾಡೆಮಿ ರಿಜಿಸ್ಟಾರ್ ಡಾ ಬಿ ದೇವದಾಸ ಪೈ ಸಂಘಟನೆಯ ಮುಖಾಂತರ ಪಡೆಯಬಹುದಾದ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಅಗತ್ಯ ದಾಖಲೆಗಳ ಬಗ್ಗೆ ವಿವಿರಿಸಿದರು. ಯಾವ ಕಛೇರಿಯನ್ನು ಹೇಗೆ ಸಂಪರ್ಕಿಸುವುದು ಎಂಬ ಬಗ್ಗೆ ಮಾಹಿತಿ ನೀಡಿ ಸಭಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಸಂಚಾಲಕ ಡೊಲ್ಲಾ ಮಂಗಳೂರು ಸ್ವಾಗತಿಸಿ, ನಾಟಕಕಾರ ಡೊಲ್ಪಿ ಸಲ್ಡಾನ್ಹಾ ಧನ್ಯವಾದವನ್ನಿತ್ತರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯ ಲಾರೆನ್ಸ್ ಡಿಸೋಜ ಉಪಸ್ಥಿತರಿದ್ದರು.ಇತ್ತಿಚೆಗೆ ನಿಧನರಾದ ಹಿರಿಯ ಮುಂದಾಳು ಜುಡಿತ್ ಮಸ್ಕರೇನ್ಹಸ್ ಇವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಪತ್ರಕರ್ತ ರೇಮಂಡ್ ಡಿಕುನ್ಹಾ ಕಾರ್ಯಕ್ರಮ ನಿರ್ವಹಿಸಿದರು.

 

 

 

 

 

 

 

 

 

 

 

 

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]