ಹಲವು ಧರ್ಮ, ಜಾತಿ ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದರು ಭಾವೈಕ್ಯದ ಸೊಬಗಿನಿಂದ ತುಂಬಿಕೊಂಡು ರಾಷ್ಟ್ರದ ಬದುಕಿಗೆ ಅಪೂರ್ವ ಕೊಡುಗೆಯನ್ನು ನೀಡಿರುವ ಕೊಂಕಣಿ ಜನರ ಒಗ್ಗಟ್ಟಿನ ಸಿರಿಯನ್ನು ಪ್ರದರ್ಶಿಸುವ ಅಪೂರ್ವ ಕಾರ್ಯಕ್ರಮ ಕೊಂಕಣಿ ಲೋಕೋತ್ಸವ ಇಂದು ದಿನಾಂಕ 10-02-2017 ರ ಪೂರ್ವಾಹ್ನ ಮಂಗಳೂರು ಪುರಭವನದಲ್ಲಿ ವರ್ಣಮಯ ಆರಂಭ ಕಂಡಿತು. ಮೂರುದಿನಗಳ ಕಾಲ ನಡೆಯಲಿರುವ ಈ ಕೊಂಕಣಿ ಸಂಸ್ಕøತಿ, ಸಾಹಿತ್ಯ, ಭಾಷೆ, ಪರಂಪರೆ ಮತ್ತು ಶಿಕ್ಷಣದ ಮಹಾಸಂಭ್ರಮದ ಉದ್ಘಾಟನೆಯನ್ನು ಹಲವು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.

ಮುಂಜಾವಿನ ಎಂಟರಿಂದಲೇ ಹೊನ್ನಾವರದ ಮದರ್ ತೆರೇಜಾ ಬ್ಯಾಂಡ್ ಪಂಗಡದಿಂದ ಮನಸೆಳೆಯುವ ಬ್ಯಾಂಡ್ ಬಾರಿಸುತ್ತಾ ದೂರದೂರಗಳಿಂದ ಬರುತ್ತಿದ್ದ ಅತಿಥಿ ಅಭ್ಯಾಗತರನ್ನು ಸಭಾಸ್ಥಳದತ್ತ ಎಳೆಯತೊಡಗಿತು. ಪುರಭವನದ ಮುಂಬಾಗಿಲಿನಲ್ಲಿ ಹಾಕಲಾಗಿದ್ದ  ವೇದಿಕೆಯ ಮೇಲೆ  ಹಳಿಯಾಳದ ಸಿದ್ಧಿ ಪಂಗಡದವರ ಮನೋರಂಜಕ ಧಫ್ ಕುಣಿತ ನೆರೆದ ಸಾವಿರಾರು ಜನರ ಮನ ಸೆಳೆಯಿತು. ಮುಂಡಗೋಡಿನ ಸಿದ್ಧಿ ಜನರ  ದಮ್ಮಾಮ್ ಕುಣಿತದ ಸೊಬಗು ಸುತ್ತಣ ತುಂಬಿದ್ದ ಕಣ್ಮನ ತಣಿಸಿತು. ಆ ನಂತರ ಯಲ್ಲಾಪುರದ ಸಿದ್ಧಿ ಜನರ ಪುಗುಡಿ ನರ್ತನ ರಸಿಕರ ಮನಸ್ಸಿಗೆ ಹಬ್ಬದೂಟವೇ ಆಗಿತ್ತು. ಸಾವಿರಾರು ಜನರ ಮನಗಳಿಗೆ ಮುದ ನೀಡಿದ ಆ ನರ್ತನದ ನಂತರ ಶಿರಸಿಯ ಸಿದ್ಧಿಗಳ ಝಕಾಯ್ ಪಂಗಡದವರಿಂದ ನಡೆದ ಝಕಾಯ್ ನರ್ತನ ಕೊಂಕಣಿಯ ನಾಟ್ಯ ವೈವಿಧ್ತೆಯನ್ನು ಪ್ರಕಟಪಡಿಸಿತು.

 

 

 

 

ಕೊಂಕಣಿ ಅಕಾಡಮಿಯು ಪುರಭವನದ ಮುಂದೆ ವ್ಯವಸ್ಥೆ ಮಾಡಿದ್ದ ಭವ್ಯ ಚಪ್ಪರದಲ್ಲಿಯ ವ್ಯಾಪಾರ ಮಳಿಗೆಗಳನ್ನು ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ಒಟ್ಟಾಗಿ ರೂಪಿಸಿದ್ದ ವಸ್ತು ಪ್ರದರ್ಶನವನ್ನು ಮಂಗಳೂರು ಪೋಲೀಸ್ ಆಯುಕ್ತರಾದ ಶ್ರೀ ಎಮ್ ಚಂದ್ರಶೇಖರ್, ಭಾ ಪೋ ಸೆ,  ಮಂಗಳೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ಕೆ ಹರಿನಾಥ್ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಮಹಾಗುರುಗಳಾದ ಸ್ವಾಮಿ ಡೆನಿಸ್ ಪ್ರಭು  ಅವರು ಭತ್ತ ಬೇಯಿಸುವ ಹಂಡೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿದರು.  

ನೂರಕ್ಕೂ ಮೀರಿ ಸಂಗೀತಗಾರರು ಮಾಂಡ್ ಸೊಭಾಣ್ ಖ್ಯಾತಿಯ ಶ್ರೀ ಎರಿಕ್ ಒಝೇರಿಯೊ ಹಾಗೂ ಶ್ರೀಮತಿ ವಸಂತಿ ಆರ್ ನಾಯಕ್  ನಾಯಕತ್ವದಲ್ಲಿ ಲೋಕೋತ್ಸವದ ಧ್ಯೇಯಗೀತೆ ಹಾಗೂ ‘ಶತಮಾನಾಂ ಥಾವ್ನ್ ಕೊಂಕಣಿ’ ಎನ್ನುವ ಸಂಕಲ್ಪ ಗೀತೆ ಮತ್ತು ‘ಕೊಂಕಣಿ ಆವ್ಸುಕ್ ಜಯ್ ಮ್ಹಣುಂಯಾ’ ಹಾಡುಗಳನ್ನು ಹಾಡುವ ಮೂಲಕ ಉದ್ಘಾಟನೆಯ ಸಭಾ ಕಾರ್ಯಕ್ರಮಕ್ಕೆ ಸುಂದರ ಮುನ್ನುಡಿ ಹಾಡಿದರು. ಶ್ವೇತಾ ಕಾಮತ್ ಮತ್ತು ಬಳಗದವರು ಮನಮೋಹಕ ಸ್ವಾಗತ ನೃತ್ಯ ಮಾಡಿ ನೆರೆದ ಸಭಿಕರ ಮನ ರಂಜಿಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಶ್ರೀ ರೊಯ್ ಕಾಸ್ತೆಲಿನೊನ್ ಅವರು ಸರ್ವರಿಗೂ ಸ್ವಾಗತ ನೀಡುತ್ತಾ ಧರ್ಮ ಜಾತಿಯ ಕೊಂಕಣಿಗರು ತಮ್ಮ ನಡುವಿನ ಜಾತಿ ಧರ್ಮಗಳ ಎಲ್ಲಾ ಭಿನ್ನತೆಗಳನ್ನು ಮರೆತು ‘ನಾವು ಕೊಂಕಣಿಗರು’ ಎಂದು ಹೆಮ್ಮೆಯಿಂದ ಘೋಷಿಸುವಂತೆ ಕರೆ ನೀಡಿದರು. ‘ಕೊಂಕಣಿಯು ಭಾರತದ ವಿವಿಧತೆಯ ಸಂಪತ್ತನ್ನು ಸೂಕ್ತವಾಗಿ ಬಿಂಬಿಸುವ ಭಾಷೆಯಾಗಿದೆ ನಮ್ಮ ಮಾತೃಭಾಷೆಯ ಸಕಲ ಸಂಪತ್ತನ್ನು ಪ್ರತಿಬಿಂಬಿಸಲು ಬಂದಿರುವ ಸರ್ವರಿಗೂ ಅವರು ಹಾರ್ಧಿಕ ಸ್ವಾಗತ ಬಯಸಿದರು.  
ಕೊಂಕಣಿ ಜನರ ಬದುಕಿನ ಖಾಸಾ ಭಾಗವಾಗಿರುವ ಸುಂದರ ಗುಮಟೆಯ ಒಳಸುಳಿಯನ್ನು ಬಿಚ್ಚಿ ರಂಗುರಂಗಿನ ಎಸಳುಗಳನ್ನು ಹೊರತರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಮೂರು ದಿನಗಳ ಹಬ್ಬಕ್ಕೆ ಚಾಲನೆ ನೀಡಿದ ಪೂಜ್ಯ ಮೇಯರ್ ಶ್ರೀ ಹರಿನಾಥರವರು ಕೊಂಕಣಿ ಜನರು ಭಾರತದ ಒಟ್ಟಾರೆ ನಾಡು ನುಡಿ ಹಾಗೂ ಸಾಮಾಜಿಕ ಸಾಂಸ್ಕøತಿಕ ಬದುಕಿಗೆ ನೀಡಿದ ಕೊಡುಗೆಯನ್ನು ಕೊಂಡಾಡಿದರು ಹಾಗೂ ಲೋಕೋತ್ಸವ ಕಾರ್ಯಕ್ರಮ ಕೊಂಕಣಿ ಭಾಷೆ-ಸಂಸ್ಕøತಿಯ ನಿಜ ಸಂಪತ್ತನ್ನು ಹೊರಹೊಮ್ಮಿಸಲಿ ಎಂದು ಶುಭ ಹಾರ್ಯೆಸಿದರು. ಕೊಂಕಣಿಗರು ಯಾವ ಬೆಟ್ಟದ ಮೇಲೆ ಗಿಡ ನೆಟ್ಟರೆ ಅದು ಚಿಗುರುತ್ತದೆ ಎಂಬ ಪ್ರತೀತಿಯಿದೆ ಆದುದರಿಂದ ಕೊಂಕಣಿ ಜನರು ನಾಡನ್ನು ನಮ್ಮ ಪರಿಸರವನ್ನು ಅಪಾರವಾಗಿ ಶ್ರೀಮಂತಗೊಳಿಸಿದ್ದಾರೆ ಎನ್ನಬಹುದು ಎಂದು ಅವರು ಅಭಿಪ್ರಾಯಿಸಿದರು.

 

 

 

 

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರರವರು ಅಕಾಡಮಿಯ ವತಿಯಿಂದ ಪ್ರಕಟಿಸಲಾದ ಶ್ರೀಮತಿ ಗ್ಲ್ಯಾಡಿಸ್ ಕ್ವಾಡ್ರಸ್ ಪೆರ್ಮುದೆಯವರ ‘ಸುಟ್ಕೆ ಝುಜಾಂತ್ ಸ್ತ್ರೀಯೊ’ (ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು) ಎಂಬ ಪುಸ್ತಕವನ್ನು ಹಾಗೂ ಶ್ರೀಮತಿ ಕ್ಯಾಥರಿನ್ ರೊಡ್ರಿಗಸ್ ಕಟ್ಪಾಡಿಯವರ ‘ಆಜ್ ತಾಕಾ ಫಾಲ್ಯಾಂ ತುಕಾ’ (ಇಂದು ಅವನಿಗೆ ನಾಳೆ ನಿನಗೆ) ಎಂಬ ಎರಡು ಪುಸ್ತಕಗಳ ಲೋಕಾರ್ಪಣೆ ಮಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಕೊಂಕಣಿಗರು  ದೇಶದ ನಿರಂತರ ಪ್ರಗತಿಗೆ ತಮ್ಮ ಅದಮ್ಯ ಚೇತನವನ್ನು ಧಾರೆ ಎರೆದಿದ್ದಾರೆ ಆದರೆ ಆಧುನಿಕ ಯುಗದಲ್ಲಿ ಇತರ ಭಾಷಾವರ್ಗದವರಿಗೆ ಇಂಗ್ಲೀಷಿನ ಪೆಡಂಭೂತ ಕಾಟ ಕೊಡುವಂತೆ ಕೊಂಕಣಿಗರಿಗೂ ಕೂಡಾ ಇಂಗ್ಲೀಷಿನ ಆಕರ್ಷಣೆ ಹಾಗೂ ವ್ಯಾಮೋಹ ಸೆಳೆಯುತ್ತಿದೆ, ಇದನ್ನು ಎದುರಿಸಲು ಎಲ್ಲಾ ಕೊಂಕಣಿ ಜನರು ಸಂಘಟನೆಗಳು ಕಟಿಬದ್ಧರಾಗಬೇಕೆಂದು ಕರೆ ನೀಡಿದರು. ಒಬ್ಬ ಅಧಿಕಾರಿ, ಒಬ್ಬ ರಾಜಕೀಯ ಮುತ್ಸದ್ಧಿ, ಒಬ್ಬ ಧಾರ್ಮಿಕ ನಾಯಕ ತನ್ನ ತನ್ನ ಮಾತೃಭಾಷೆಯಲ್ಲಿ ಸಂವಹನ ನಡೆಸುವ ಮೂಲಕ ಮಾತೃಭಾಷೆಯನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದ ಎಂದು ಅವರು ತಿಳಿಸಿದರು. ಆಧುನಿಕ ತಾಂತ್ರಿಕತೆಯ ಬಲದಿಂದ ಯಾವುದೇ ಮಾತೃಭಾಷೆ ಒತ್ತಡಕ್ಕೆ ಒಳಗಾಗಬೇಕಿಲ್ಲ ಹಾಗೂ ಜನರು ತಮ್ಮ ಮೂಲಸ್ವರೂಪ ಬಿಟ್ಟುಬಿಡದೆ ಜನರು ಮುಂದುವರಿಯಬಹುದು ಎನ್ನುವುದಕ್ಕೆ ಈ ಲೋಕೋತ್ಸವ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅತಿ ವಂದನೀಯ ಡೆನಿಸ್ ಪ್ರಭು ಅವರು ‘ಕೊಂಕಣಿಯು ಕೊಂಕಣಿಗರ ಪಾಲಿಗೆ ಸ್ವರ್ಗಭಾಷೆಯೇ ನಿಜ. ನಮ್ಮ ಬದುಕಿನ ಸುಖದುಃಖಗಳ ಎಲ್ಲಾ ಹಂತಗಳಲ್ಲಿ ಕೊಂಕಣಿ ಭಾಷೆಯು ನಮ್ಮನ್ನು ಒಗ್ಗಟ್ಟಾಗಿ ಇಟ್ಟಿದೆ ಹಾಗೂ ಮುಂದೆಯೂ ಅದು ನಮ್ಮನ್ನು ಒಂದಾಗಿ ಇಡುವುದು ಖಂಡಿತ ಎಂದು ಅಭಿಮಾನದಿಂದ ತಿಳಿಸಿದರು. ನಿಜವಾದ ಕೊಂಕಣಿಗರು ಜಾತಿ ಧರ್ಮ ಬೇಧ್ವಿಲ್ಲದೆ ನವಾಯತ, ಕುಡುಮಿ, ಪ್ರಭು, ಕಾಮತ್ ಶೆಣಯ್, ಪೊರ್ಬುಗಳೆಲ್ಲರೂ ಒಟ್ಟು ಸೇರಿ ಕೊಂಕಣಿ ಭಾಷೆ ಮಾತನಾಡುವಾಗ ಭಾವನಾತ್ಮಕವಾಗಿ ಮನಸ್ಸಿಗೆ ಮುದವನ್ನು ನೀಡುತ್ತದೆ. ಕೊಂಕಣಿ ಭಾಷೆಗೆ ಈ ಎಲ್ಲರೂ ತಾಯಿಯ ಸ್ಥಾನವನ್ನು ನೀಡುತ್ತಾರೆ. ಕೊಂಕಣಿಗರು ಬರೇ ಶಾಂತಿ ಪ್ರಿಯರು ಮಾತ್ರವಲ್ಲ ಶಾಂತಿಸಾಧಕರೂ ಆಗಿದ್ದಾರೆ, ನಿಜವಾಗಿಯೂ ಕೊಂಕಣಿ ಸಾಮಾಜಿಕ ಗೌರವ ತರುವ ಭಾಷೆಯಾಗಿದೆ ಎಂದು ಹೇಳಿದರು.

 

 

 

 

 

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಶ್ರೀ  ಚಂದ್ರಶೇಖರ್ ಅವರು ಕೊಂಕಣಿಗರು ವಿಶ್ವದ ವಿವಿಧ ಭಾಗಗಳಲ್ಲಿ, ವಿವಿಧ ಧರ್ಮಗಳಲ್ಲಿ ಹರಿದು ಹಂಚಿ ಹೋಗಿರುವವರಾಗಿದ್ದರು ತಮ್ಮ ಐಕ್ಯವನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಕೊಂಕಣಿ ಜನರು ಯಾವುದೇ ಕಠಿಣ ಕೆಲಸವನ್ನು ಸೂಕ್ತವಾಗಿ ಹಾಗೂ ನಿಷ್ಠಾವಂತ ಪ್ರವೃತ್ತಿಯಿಂದ ನಿಭಾಯಿಸುವ ಸಾಮಥ್ರ್ಯವುಳ್ಳವರು. ಯಾವುದೇ ಜಟಿಲ, ದ್ವೇಷದ ಹಾಗೂ ತಿಕ್ಕಾಟದ  ಪರಿಸ್ಥಿಯನ್ನು ನಗುನಗುತ್ತಾ ಪರಿಹಾರ ಮಾಡುವ ಅವರ ಗುಣ ಇಂದಿನ ಕಾಲದಲ್ಲಿ ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಈ ಕಾರ್ಯಕ್ರಮ ಇತರ ಭಾಷಾಸಮುದಾಯದ ಜನರಿಗೆ ಮಾದರಿಯಾಗಿದೆ, ಕೊಂಕಣಿ ಭಾಷಿಗರ ವ್ಯಕ್ತಿತ್ವದಲ್ಲಿನ  ನಮ್ಯತೆ ಹಾಗೂ ಸೌಮ್ಯತೆ ಅವರತ್ತ ಎಲ್ಲರೂ ಆಕರ್ಷಿತರಾಗುವಂತೆ ಮಾಡಿದರು. ಈ ಜನರ ಸ್ವಭಾವದ ಮುಂದೆ ಕ್ಲಲು ಕೂಡಾ ಕರಗುತ್ತದೆ ಎನ್ನುವ ಅಭಿಮಾನದ ಮಾತನ್ನು ಅವರು ಹೇಳಿದರು.

ತದನಂತರ ಅಕಾಡಮಿಯ ಸದಸ್ಯರಿಗೆ ಶಾಲು ಹೊದೆಸಿ ಸನ್ಮಾನಿಸಲಾಯ್ತು.

ಶ್ರೀ ವೆಂಕಟೇಶ್ ಬಾಳಿಗಾ ಅವರು ಉದ್ಘಾಟನಾ ಸಭಾಕಾರ್ಯಕ್ಕೆ ವಂದನಾರ್ಪಣೆ ಸಲ್ಲಿಸಿದರು.  

ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ಎಮ್ ಆರ್ ಕಾಮತ್ ನಡೆಸಿಕೊಟ್ಟರು.

 

 

 

 

 

'ಕೊಂಕಣಿ ಲೋಕೋತ್ಸವ್' ಸಂಭ್ರಮಾಚಿ ಸುರ್ವಾತ್

ಭಾರತಾಚ್ಯಾ ಸಾಂಸ್ಕøತಿಕ್ ವಿವಿಧತೆಕ್ ಸಾಕ್ಸ್ ಮ್ಹಣ್ಚೆಪರಿಂ ಸಭಾರ್ ಧರ್ಮ್ ಜಾತಿ ಪಂಗ್ಡಾಂನಿ ವಾಂಟುನ್ ಗೆಲ್ಲೊ ಕೊಂಕಣಿ ಲೋಕ್ ಆಪ್ಲ್ಯಾ ಎಕ್ವಟಾಕ್ ಆಂವ್ಡೆತಾ. ದೆಶಾಚ್ಯಾ ವಾಡಾವಳಿಕ್ ಮಹತ್ವಾಚಿ ದೆಣ್ಗಿ ದಿಲ್ಲೊ ಹೊ ಲೋಕ್ ಭಾರತಾಚ್ಯಾ ಪಡ್ಲಾ ಕರಾವಳಿಂತ್ ಶಿಂಪಡ್ಲಾ ತರಿ ಆಪ್ಲ್ಯಾ ಸಾಂಸ್ಕøತಿಕ್ ವಯ್ಭವಾಕ್ ಧಾ ಜಣಾಂ ಮುಕಾರ್ ವೆದಿಕ್ ಹಾಡ್ಚ್ಯಾಂತ್ ಆನಿ ಆಪ್ಲ್ಯಾ ಮಾಂಯ್‍ಭಾಶೆಚ್ಯಾ ಬಳಾಂತ್ ಸಂಸ್ರಾ ಮುಕಾರ್  ಆಪ್ಲೆಂ ಖರೆಂ ವ್ಹಡ್ಪಣ್ ಉಗ್ಡಾಪಿತ್ ಕರುಂಕ್ ಕಿತೆಂಚ್ ದಾಕ್ಷೆನಾ. ಅಸಲ್ಯಾ ಸಂಭ್ರಮಾಕ್ ಸರ್ವ್ ಸಕ್ಡಾಂ ಮುಕಾರ್ ಪರ್ಗಟ್ಚೆಂ ತೀನ್ ದಿಸಾಂಚೆಂ ರಂಗಾಳ್ ಫೆಸ್ತಾ ಕಾರ್ಯೆಂ ಫೆಬ್ರೆರ್ 10, 11 ಆನಿ 12 ವೆರ್ ಕೊಡ್ಯಾಳ್ಚ್ಯಾ ಟಾವ್ನ್‍ಹಾಲಾಂತ್  ಕರ್ನಾಟಕ ಕೊಂಕಣಿ ಸಾಹಿತ್ ಅಕಾಡಮಿನ್ ಮಾಂಡುನ್ ಹಾಡ್‍ಲ್ಲೆಂ

ಹಾರಿಂಹಾರಿಂನಿ ಕೊಂಕಣಿ ಲೋಕ್ ಹ್ಯಾ ಕಾರ್ಯಾಂತ್ ವಾಂಟೆಲಿ ಜಾಂವ್ಕ್ ಆತುರಾಯೆನ್ ಆನಿ ಆಶೆನ್ ಅಕಾಡಮಿನ್ ಟಾವ್ನ್‍ಹಾಲಾಂತ್ ಆಸಾ ಕೆಲ್ಲ್ಯಾ ತತ್ಕಾಲ್ ದಫ್ತರಾಚ್ಯಾ ಸಿಬ್ಬಂದಿ ಮುಕಾರ್ ಆಪ್ಲೆಂ ನಾಂವ್ ನೋಂದ್ ಕರುಂಕ್ ಯೆತಾಲೊ.

ಹೊನ್ನಾವರ್ಚ್ಯಾ ಫಾಮದ್ ಮದರ್ ತೆರೇಜಾ ಬ್ಯಾಂಡಾನ್ ಆಪ್ಲ್ಯಾ ಸುಮಧುರ್ ವ್ಹಾಜೊವ್ಣೆನ್ ಸಕಾಳಿಂ ಥಾವ್ನ್‍ಂಚ್ ಸರ್ವ್ ಸಯ್ರ್ಯಾಂಚಿಂ ಮನಾಂ ಭುಲಯ್ಲಿಂ.

ಹಳಿಯಾಳ್ಚ್ಯಾ ಸಿದ್ಧಿ ಪಂಗ್ಡಾನ್ ಧಫ್ ನಾಚಾನ್ ಪಯ್ಶಿಲ್ಯಾ ಲಾಗ್ಶಿಲ್ಯಾಂಚಿಂ ಕಾಳ್ಜಾಂ ಜಿಕ್‍ಲ್ಲಿಂಚ್ ಮುಂಡಗೋಡ್ಚ್ಯಾ ಸಿದ್ದ್ಯಾಂನಿ ಆಪ್ಲ್ಯಾ ದಮ್ಮಾಮ್ ನಾಚಾನ್ ಸಕ್ಕಡ್ ಕೊಂಕಣಿ ಲೊಕಾಂ ಹುಜಿರ್ ಆಪ್ಲೆಂ ನಾಚ್ಪಾ ತಾಲೆಂತ್ ಪರ್ಗಟ್ ಕೆಲೆಂ. ತ್ಯಾ ಉಪ್ರಾಂತ್ ಯಲ್ಲಾಪುರ್ಚ್ಯಾ ಸಿದ್ಧಿ ಪಂಗ್ಡಾಥಾವ್ನ್ ಪುಗುಡಿ ನಾಚ್ ಸೊಭ್ಲೊ ಆನಿ ಹಜಾರಾಂನಿ ಲೊಕಾಂಚೆಂ ಮನ್ ಪಿಸಾಂವ್ಕ್ ಸಕ್ಲೊ. ಹ್ಯಾಚ್ ವೆಳಿಂ ಶಿರ್ಸಿಚ್ಯಾ ಝಕಾಯ್ ಸಿಧಿ ಪಂಗ್ಡಾಥಾವ್ನ್ ಝಾಕಾಯ್ ನಾಚ್ ಚಲ್ಲೊ ಆನಿ ನವೆಂಚ್ ಸಂಭ್ರಮಾಚೆಂ ವಾತಾವರಣ್ ಭೊಂವ್ತಿಂ ಉಬೆಂ ಕರುಂಕ್ ಸಕ್ಲೊ.

 

 

 

 

 

ಕೊಂಕ್ಣಿ ಅಕಾಡಮಿನ್ ಟಾವ್ನ್‍ಹಾಲಾ ಮುಕಾರ್ ಘಾಲ್ಲ್ಯಾ ವಯ್ಭವಿಕ್ ಮಾಟ್ವಾಂತ್ ಉಬೆಂ ಕೆಲ್ಲ್ಯಾ ಸಾಂತೆಂತ್ಲ್ಯಾ ಆಂಗ್ಡಿಸಾಳಿಂಚೆ ಆನಿ ಸಭಾರ್ ಸಂಘಟನಾಂನಿ ತಶೆಂಚ್ ವೆಕ್ತಿಂನಿ ಸಂಗಿಂ ಮೆಳುನ್ ಉಬೆಂ ಕೆಲ್ಲೆಂ ಉಗ್ಡಾಸಾವಸ್ತುಂಚ್ಯಾ ಸಾಂಟ್ಯಾಚೆಂ (ವಸ್ತು ಪ್ರದರ್ಶನಾಚೆಂ) ಉದ್ಘಾಟನ್ ಮಂಗ್ಳುರ್ಚೆ ಪೋಲಿಸ್ ಕಮೀಶನರ್  ಶ್ರೀ ಎಮ್ ಚಂದ್ರಶೇಖರ್, ಭಾ ಪೋ ಸೆ,  ಮಂಗ್ಳುರ್ ಶಹರ್ ಪಾಲಿಕಾಚೊ ಮೇಯರ್ ಶ್ರೀ ಕೆ ಹರಿನಾಥ್ ತಶೆಂಚ್ ಮಂಗ್ಳುರ್ ದಿಯೆಸೆಜಿಚೊ ವಿಗಾರ್ ಜೆರಾಲ್ ಭೋವ್ ಮಾನಾಧಿಕ್ ಡೆನಿಸ್ ಪ್ರಭು ಬಾಪಾಂನಿ ಭಾತ್ ಉಕಡ್ಚ್ಯಾ ಭಾಣಾಕ್ ಭಾತ್ ವೊತುನ್ ಚಲಯ್ಲೆಂ.

ಶೆಂಭೊರಾಂ ವಯ್ರ್ ಸಂಗೀತ್‍ಗಾರಾಂನಿ  ಮಾಂಡ್ ಸೊಭಾಣ್ ಖ್ಯಾತೆಚ್ಯಾ ಶ್ರೀ ಎರಿಕ್ ಒಝೇರಿಯೊ ಆನಿ ನಾಮ್ಣೆಚಿ ಗಾಯಕಿ ಶ್ರೀಮತಿ ವಸಂತಿ ಆರ್ ನಾಯಕ್ ಹಾಂಚ್ಯಾ ಮುಕೇಲ್ಪಣಾಂತ್  ಲೋಕೋತ್ಸವಾಚೆಂ  ಧ್ಯೇಯಗೀತ್ ತಶೆಂಚ್ ‘ಶತಮಾನಾಂ ಥಾವ್ನ್ ಕೊಂಕಣಿ’ ಮ್ಹಣ್ಚೆಂ ಸಂಕಲ್ಪ್ ಗೀತ್ ಆನಿ ‘ಕೊಂಕಣಿ ಆವ್ಸುಕ್ ಜಯ್ ಮ್ಹಣುಂಯಾಂ’ ಅಭಿಮಾನ್ ಗೀತ್ ಗಾವ್ನ್  ಉದ್ಘಾಟನಾಚ್ಯಾ ಸಭಾ ಕಾರ್ಯಾಕ್ ಸೊಭಿತ್ ಸುರ್ವಾತ್ ದಿಲಿ.  ಶ್ವೇತಾ ಕಾಮತ್ ಆನಿ ಪಂಗ್ಡಾಚ್ಯಾಂನಿ ಸೊಭಿತ್ ಸ್ವಾಗತ್‍ನಾಚಾ ಧ್ವಾರಿಂ ಜಮ್ಲಲ್ಯಾಂಚಿ ಮನಾಂ ವ್ಹಯ್ ಕೆಲಿಂ.

ಕರ್ನಾಟಕ ಕೊಂಕಣಿ ಸಾಹಿತ್ ಅಕಾಡಮಿಚ್ಯಾ ಅಧ್ಯಕ್ಷ್ ಶ್ರೀ ರೊಯ್ ಕಾಸ್ತೆಲಿನೊನ್ ಸರ್ವಾಂಕ್ ಬರೊ ಯೆವ್ಕಾರ್ ಮಾಗ್ಲೊ ಆನಿ ಆಮಿ ಕೊಂಕಣಿ ಲೊಕಾನ್ ಸರ್ವ್ ಭೆದ್ ಆನಿ ವಿವಿಂಗಡ್ಪಣ್ ವಿಸ್ರುನ್ ಆಮಿ ಕೊಂಕಣಿ ಮ್ಹಣ್ ವ್ಹಡ್ ಅಭಿಮಾನಾನ್ ನಾರೊ ಘಾಲುಂಕ್ ಉಲೊ ದಿಲೊ. ಕೊಂಕಣಿ ಲೋಕ್ ಭಾರತಾಚ್ಯಾ ವಿಶ್ವಬಂಧುತ್ವ ಚಿಂತ್ಪಾಕ್ ಆನಿ ಸರ್ವ್ ವಿವಿಂಗಡ್ಪಣಾಕ್ ಅರ್ತಾಭರಿತ್ ರಿತಿನ್ ಉಕಲ್ನ್ ಧರ್ತಾ ಮ್ಹಣ್ ತಾಣೆಂ ಸಾಂಗ್ಲೆಂ ಆನಿ ಜಮ್ಲಲ್ಯಾ ಸಮೇಸ್ತಾಂಕ್ ಬರೊ ಯೆವ್ಕಾರ್ ಮಾಗ್ಲೊ.

ಕೊಂಕಣಿ ಲೊಕಾಚ್ಯಾ ಜಿವಿತಾಚೊ ತಾಂಚ್ಯಾ ಸಂಗೀತಾಚೊ ಮಹತ್ವಾಚೊ ವಾಂಟೊ ಜಾವ್ನಾಸ್ಚೆಂ ‘ಗುಮಟ್’ ಬಡೊವ್ನ್ ತಾಚ್ಯಾ ಗರ್ಭಾಂತ್ಲ್ಯಾನ್ ರಂಗ್‍ರಂಗಾಳ್ ಫಿಂತಾಂ ಭಾಯ್ರ್ ಹಾಡ್ನ್  ಸೊಭಿತ್ ರಿತಿನ್ ಕಾರ್ಯಾಚೆಂ ಉದ್ಘಾಟನ್ ಕರ್ನ್ ಆಪ್ಲೆಂ ಉದ್ಘಾಟನ್ ಭಾಶಣ್ ಕೆಲೆಂ. ಆಪ್ಲ್ಯಾ ಉಲೊವ್ಪಾಂತ್ ತಾಣೆ ಕೊಂಕಣಿ ಲೋಕ್ ದೆಶಾಚ್ಯಾ ಆರ್ತಿಕ್, ಸಾಮಾಜಿಕ್ ಆನಿ ಸಾಂಸ್ಕøತಿಕ್ ವಾಡವಳಿಂತ್ ಮಹತ್ವಾಚೊ ವಾವ್ರ್ ಕರುಂಕ್ ಸಕ್ಲಾ. ತಾಂಚ್ಯಾ ಬರ್ಯಾಪಣಾನ್ ದೆಶಾಚಿ ಪರಿಸ್ಥಿತಿ ಬರಿ ಜಾಲ್ಯಾ ಮ್ಹಣ್ ಕಳಯ್ಲೆಂ. ಕೊಂಕಣಿ ಲೋಕ್ ಖಂಚ್ಯಾ ಗುಡ್ಯಾಬೆಟಾರ್ ವಚುನ್ ಝಾಡಾಂ ಲಾಯ್ತ್ ತರಿ ತಾಂಚೆ ಥಾವ್ನ್ ಗಿರೆಸ್ತ್ ಸಾಗೊಳಿ ಕರುಂಕ್ ಜಾತಾ ಆನಿ ತ್ಯಾ ನಿಮ್ತಿಂ ದೆಶಾಚಿ ಆರ್ತಿಕ್ ಪರಿಗತ್ ಎಕ್ದಮ್ ಸುಧ್ರಾತಾ ಮ್ಹಣ್ ತಾಚೊ ಅಭಿಪ್ರಾಯ್ ಆಸ್‍ಲ್ಲೊ.

 

 

 

 

 

ಹ್ಯಾ ವಿವಿಧ್ ಆಯಾಮಾಂಚ್ಯಾ ಕಾರ್ಯಾವೆಳಿಂ ಮಾನೆಸ್ತಿಣ್ ಗ್ಲ್ಯಾಡಿಸ್ ಕ್ವಾಡ್ರಸ್ ಪೆರ್ಮುದೆಚೊ ‘ಸುಟ್ಕೆ ಝುಜಾಂತ್ ಸ್ತ್ರೀಯೊ’ ಆನಿ ಮಾನೆಸ್ತಿಣ್ ಕ್ಯಾಥರಿನ್ ರೊಡ್ರಿಗಸ್ ಕಟ್ಪಾಡಿ ಹಿಚೊ ‘ಆಜ್ ತಾಕಾ ಫಾಲ್ಯಾಂ ತುಕಾ’ ಪುಸ್ತಕ್ ಕಾರ್ಯಾಚೊ ಸಯ್ರೊ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತೆಚೊ ಅಧ್ಯಕ್ಷ್ ಮಾನೆಸ್ತ್ ಪ್ರದೀಪ್ ಕುಮಾರ್ ಕಲ್ಕೂರಾನ್ ಲೊಕಾರ್ಪಣ್ ಕೆಲೆ. ಆಪ್ಲ್ಯಾ ಭಾಶಣಾಂತ್ ತಾಣೆ ಕೊಂಕಣಿ ಲೊಕಾನ್ ದೆಶಾಚ್ಯಾ ನಿರಂತರ್ ವಾಡಾವಳಿಕ್ ಆಪ್ಲಿ ವರ್ತಿ ದೆಣ್ಗಿ ದಿಲ್ಯಾ. ತರಿ ಆತಾಂ ಜಾಗತೀಕರಣಾಚ್ಯಾ ವಾಡಾವಳಿನ್ ಕೊಂಕಣಿ ಭಾಶೆ ಸಂಸ್ಕøತೆಚೆರ್ ಎಕ್ದಮ್ ಜಡಾಯ್ ಘಾಲ್ಯಾ ಹಾಕಾ ಫುಡ್ ಕರುಂಕ್ ಸರ್ವ್ ಕೊಂಕಣಿ ಲೊಕಾನ್ ಆನಿ ತಾಂಚ್ಯಾ ಸಂಸ್ಥ್ಯಾಂನಿ ವಾವುರಿಜೆ ಮ್ಹಣ್ ಉಲೊ ದಿಲೊ. ಎಕಾ ಅಧಿಕಾರ್ಯಾನ್, ಎಕಾ ರಾಜಕೀ ಮುಕೆಲ್ಯಾನ್ ಆನಿ ಎಕಾ ಧಾರ್ಮಿಕ್ ಮುಕೆಲ್ಯಾನ್ ಆಪ್ಲ್ಯಾ ಮಾಂಯ್‍ಭಾಶೆಂತ್ ಉಲೊಂವ್ಚ್ಯಾ ವಗ್ತಾ ತಾಕಾ ಆನಿ ತಾಚ್ಯಾ ಪಾಟ್ಲಾವ್ಯಾಂಕ್ ವ್ಹಡ್ ಅಭಿಮಾನ್ ಭೊಗ್ತಾ ತ್ಯಾ ದೆಕುನ್ ಅಧಿಕಾರಾರ್ ಆಸ್ಚ್ಯಾ ಸರ್ವಾಂನಿ ಆಪ್ಲ್ಯಾ ಮಾಂಯ್‍ಭಾಶೆಕ್ ಗವ್ರವಾನ್ ಲೆಕಿಜೆ ಮ್ಹಣ್ ತಾಣೆ ಉಲೊ ದಿಲೊ.

ಕಾರ್ಯಾಚೊ ಸಯ್ರೊ ಜಾವ್ನಾಸ್‍ಲ್ಲ್ಯಾ ಭೋವ್ ಮಾನಾಧಿಕ್ ಡೆನಿಸ್ ಪ್ರಭು ಬಾಪಾಂನಿ ‘ಕೊಂಕಣಿ ಆಮ್ಚ್ಯಾ ವಾಂಟ್ಯಾಕ್ ದೇವ್‍ಭಾಸ್ ಜಾಯ್ಜೆ, ಕೊಂಕಣಿನ್ ಆಮ್ಚ್ಯಾ ಲೊಕಾಂಕ್ ತಾಂಚ್ಯಾ ಕಷ್ಟಾಸುಖಾಚ್ಯಾ ಸರ್ವ್ ಹಂತಾಂನಿ ಎಕ್ವಟಿತ್ ದವರ್ಲ್ಯಾ ಆನಿ ಮುಕಾರ್ ಸದಾಂ ಸರ್ವದಾಂ ಕೊಂಕಣಿ ಆಂಚ್ಯಾ ಮೊಗಾಚಿ ಭಾಸ್ ಜಾವ್ನ್ ಉರ್ತಲಿ’ ಮ್ಹಣ್ ಅಭಿಮಾನಾನ್ ಸಾಂಗ್ಲೆಂ. ಖರ್ಯಾ ಕೊಂಕಣಿ ಸ್ಪಿರಿತಾನ್ ಭರ್‍ಲ್ಲೊ ಜಾಂವ್ ತೊ ಕುಡ್ಮಿ, ನವಾಯ್ತಿ, ಖಾರ್ವಿ, ಸಾರಸ್ವತ್ ವಾ ಕ್ರಿಸ್ತಾಂವಾಂಚೊ ಕೊಂಕ್ಣೊ  ಆಪ್ಲ್ಯಾ ಮಾಂಯ್‍ಭಾಶೆಂತ್ ಉಲಯ್ತಾನಾ ಕಾಳಿಜ್ ಅಭಿಮಾನಾನ್ ಫುಮಾರ್ ಜಾತಾ ಮ್ಹಣ್ ತಾಣೆ ಸಾಂಗ್ಲೆಂ.

ಕಾರ್ಯಾಚೊ ಅನ್ಯೇಕ್ ಮುಕೆಲ್ ಸಯ್ರೊ ಮಂಗ್ಳುರ್ಚೊ ಪೋಲಿಸ್ ಕಮೀಶನರ್ ಶ್ರೀ  ಚಂದ್ರಶೇಖರಾನ್ ಕೊಂಕ್ಣಿ ಲೋಕ್ ಸಂಸ್ರಾಚ್ಯಾ ವಿವಿಂಗಡ್ ಭಾಗಾಂನಿ ಶಿಂಪ್ಡುನ್ ಗೆಲಾ ತರಿ ಎಕ್ವಟಿತ್ ಜಾವ್ನ್ ಆಪ್ಲೊ ವಾವ್ರ್ ಕರ್ತಾ. ಆಯ್ಚ್ಯಾ  ಕಾಳಾರ್ ಎಕಾಮೆಕಾ ದುಸ್ಮಾನ್ಕಾಯ್ ಆನಿ ತಿಕ್ಕಾಟ್ ದಿಸುನ್ ಯೆತಾನಾ ಕೊಂಕಣಿ ಲೋಕ್ ಹಾಸುನ್ ಹಾಸುನ್ ಸಮಾಧಾನೆನ್ ಸರ್ವ್ ಸಂಕಟ್ ಪರಿಹಾರ್ ಕರ್ತಾ ಹೊ ಸಂಯ್ಭ್ ಭೋವ್ ಮಹತ್ವಾಚೊ ಮ್ಹಣ್ ತಾಣೆ ಶಾಭಾಸ್ಕಿ ಪಾಟಯ್ಲಿ. ಕೊಂಕಣಿ ಲೊಕಾಂಚ್ಯಾ ಸಂಯ್ಭಾಂತ್ ಆಸ್ಚಿ ಮೊವಾಳಾಯ್ ಆನಿ ಮಯ್ಪಾಸಾಯ್ ಕಸಲ್ಯಾ ಕಠಿಣ್ ಕಾಳ್ಜಾಚ್ಯಾಕೀ ಥಂಡ್ ಕರ್ತಾ ಮ್ಹಣ್ ತಾಣೆ ಸಾಂಗ್ಲೆಂ.

ಹ್ಯಾ ವೆಳಿಂ ಅಕಾಡಮಿಚ್ಯಾ ಸರ್ವ್ ಸಾಂಧ್ಯಾಂಕ್ ಶಾಲ್ ಪಾಂಗ್ರುನ್ ಸನ್ಮಾನ್ ಕೆಲೊ.

ಮಾನೆಸ್ತಿಣ್ ಆಯ್ರಿನ್ ರೆಬೆಲ್ಲೊ ಆನಿ ಮಾನೆಸ್ತ್ ಎಮ್ ಆರ್ ಕಾಮತ್ ಹಾಣಿ ಕಾರ್ಯೆಂ ಚಲಯ್ಲೆಂ.  ಶ್ರೀ ವೆಂಕಟೇಶ ಬಾಳಿಗಾನ್ ಸಭಾಕಾರ್ಯಾಕ್ ವಂದನಾರ್ಪಣ್ ದಿಲೆಂ

 

 

 

 

 

Colorful Start to 'Konkani Lokotsav'

Konkani, proud mother tongue of people belonging to various religious groups, creeds  and castes. Her speakers are spread all over the western coast of India. The ‘Konkanigas’ also known as the ‘konknni lok’ though a very heterogeneous group of people  have richly contributed to the national life of India as well as to the universal well being. The Karnataka Konkani Sahitya Akademy established by the Govt of Karnataka in the year 1993 has been trying hard to spread the richness of Konkani to all people. The Academy organized the three days Konkani fest starting from 10 February at Town Hall Mangalore.

The three days bonanza of Konkani language, literature, heritage and culture was given a meaningful start with the band and dance troops performing in the stage put up in front of the Town Hall. Mother Theresa band from Honnavar was the first to showcase its rich musical talents. Siddi Daff dance group from Haliyal, Siddi Dammam group from Mundgod, Pugudi Dance group from Yellapur  and the Zakai Dance troop from Sirsi presented their colourful dances which won the hearts of thousands.

At the very outset of the days programme, honourable guests of the day Shri M Chandrashekar IPS, Commissioner of Police, Mangalore, Worshipful Mayor Shri K Harinath and Rt Rev Msgr Denis Prabhu, Vicar General of the diocese of Mangalore inaugurated the Lokotsava Stalls put up in the ‘Matov’ of Karnataka Konkani Sahitya Akademy in front of the Town Hall.

The stage programme was given a very beautiful kick start by the hundred more singers led by Shri Eric Ozario of Mandd Sobhann fame and renowned singer Smt Vasanti R Nayak singing  the theme song of the ‘Lokotsav’ and other relevant songs.Shwetha Kamath and team presented the heart winning welcome dance.

 

 

 

 

 

 

Shri Roy Castelino, President Karnataka Konkani Sahitya Academy in his welcome address proposed that the Konkani people are given a platform to openly and strongly declare themselves as belonging to the one and only Konkani identity. He asked the all gathered to shout out ‘Jai Konkani’ with all pride and prestige.

Shri Harinath, Worshipful Mayor inaugurated the Lokotsav by playing and the ‘Gumatt’ Konkani traditional drum. As he played  at the ‘Gumatt ‘beautiful ribbons hushed out and the hall was filled with applauses. In his inaugural address Shri Harinath stressed on the services rendered by the Konkani people. ‘The Konkani native speakers, even when they are pushed to carner are capable of giving their best and therefore heave played a very important role in the progression of India’ he said.

Shri Pradeep Kumar Kalkura, President Dakshina Kannada unit of Kannada Sahitya Parishat released two books, ‘Sutkaye Zujant Sthriyo’ by Smt. Gladis Quadros Permude and ‘Aaj Taka-Phalyan Thuka’ by Smt. Catherine Rodrigues Katpadi. He spoke of the success of Konkani people in facing challenges put up by the Globalization and the inflow of strong pro English move. When a political leader, Religious head or an officer of high rank uses Konkani it creates an atmosphere of self respect and pride among the native speakers.

Msgr Denis Prabhu, Vicar General of the Diocese of Mangalore said that ‘Konkani is in no way less than the heavenly language to her beloved children. The native speakers of Konkani have protected and preserved their linguistic identity and it is very sure that they will continue to keep us their mother tongue richness. All minds will be happy and joyful when Konkani speakers belonging to various backgrounds like  Kharvi, Kudmi, Navayati, Siddi, Saraswat or Christian background join together and share their views in their mother tongue.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Commissioner of Police Shri M Chandrashekar I P S in his address stressed on the nature of Konkani people. He said that due to the kindness and sweet mildness of these people they have always won the hearts of the millions. Though divided geographically they could achieve the emotional unity with all rich diversity because of the positive spirit of mind they possess. In the present day scenario where hatred and tension is ruling large the Konkani spirit of acceptance and regard is very much needed’ he said,

During the occasion the members of the Academy were felicitated. Shri Venkatesh Baliga proposed the vote of thanks. Smt Irene Rebello and Shri M R Kamath compered the programme.

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]