11-02-2017: ನಗರದ ಪುರಭವನದಲ್ಲಿ ನಡೆಯುತ್ತಿರುವ ಕೊಂಕಣಿ ಲೋಕೋತ್ಸವ ವೇದಿಕೆಯಲ್ಲಿ ನಡೆದ ಸಂಸ್ಕøತಿ ಸೌರಭ ಕಾರ್ಯಕ್ರಮ ತುಂಬಿ ನೆರೆದಿದ್ದ ಜನಸಾಗರದ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯ್ತು. ಕಾರ್ಯಕ್ರಮದ ಆರಂಭದಲ್ಲಿ ನೃತ್ಯ ಸಂಗಮ ತಂಡ ಗಾನ ನೃತ್ಯಾಲಯ ಇವರಿಂದ ವರ್ಣರಂಜಿತ ನೃತ್ಯರೂಪಕ ನಡೆಯಿತು.  ಶಿವಮೊಗ್ಗದ ವಾಗ್ದೇವಿ ಮಹಿಳಾ ಯಕ್ಷಗಾನ ತಂಡದ ಶ್ರೀಮತಿ ಪ್ರತಿಮಾ ನಾಯಕ್ ಅವರ ನಾಯಕತ್ವದಲ್ಲಿ ಮಹಿಳಾ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.  ವೈಷ್ಣವಿ ವಿ ಪ್ರಭು ಗಂಜಿಮಠ ಇವರಿಂದ ಮನೋಕರ್ಷಕ ಭರತನಾಟ್ಯ ಸಾದರಗೊಂಡಿತು. ರಜನಿ ವಿ ಪೈ ಹಾಗೂ ತಂಡದವರಿಂದ ಜನಪದ ಹರಿಕಥೆಯ ಸುಂದರ ನೃತ್ಯ ನಾಟಕ ಸಮೇತದ ಪ್ರದರ್ಶನ ನಡೆಯಿತು. ನಾಡಿನ  ಖ್ಯಾತ  ಕೊಂಕಣಿ ಗಾಯಕಿ ಶ್ರೀಮತಿ ವಸಂತಿ ಆರ್ ನಾಯಶೆಣೈ ಹಾಗೂ ಸಂಗೀತಗಾರರಾದ  ಶ್ರೀ ಮುರಳೀಧರ ಕಾಮತ್ ಇವರ ಜತೆಗಾರಿಕೆಯೊಡನೆ ಗ್ರೀಷ್ಮಾ ಕಿಣಿ, ಝೀನಾ ಪಿರೇರಾ,  ಸಂಗೀತ ಸಂಗಮ ಎಲ್ಲರ ಮನಸ್ಸುಗಳನ್ನು ಮುದಗೊಂಡಿತು.

ಎರಡನೇ ದಿನದ ಆರಂಭದಲ್ಲಿ ಅಂಕೋಲಾದ ಸಿದ್ಧಿ ಜನರ ತಂಡದಿಂದ ದಫ್ಹ್ ನೃತ್ಯ, ಮುಂಡಗೋಡಿನ ಸಿದ್ಧಿಗಳಿಂದ ದಮ್ಮಾಮ್ ನೃತ್ಯ, ಸಾಧನಾ ಬಳಗ ಇದರ  ಭಾವನಾ ಶೆಣೈ ಮತ್ತು ಪಂಗಡದವರಿಂದ ನೃತ್ಯ ರೂಪಕ ಪ್ರದರ್ಶಿತವಾಯ್ತು. ಆನಂತರ ಹಲವು ಗಾಯಕರಿಂದ ಭಾವಗೀತೆಗಳ ಗಾಯನ ನಡೆಯಿತು.

 

 

ಕೊಂಕಣಿ ಸಾಹಿತ್ಯ ಅಕಾಡಮಿ ತನ್ನ ಮೂರು ವರ್ಷಗಳ ಅವಧಿಯಲ್ಲಿ 75 ಪುಸ್ತಕಗಳನ್ನು ಪ್ರಕಟಿಸುವ ಬದ್ಧತೆಯೊಂದಿಗೆ ಶ್ರಮಿಸುತ್ತಿದ್ದು ಅದರಂತೆ ಈ ಲೋಕೋತ್ಸವದಲ್ಲಿ ಮೊದಲನೇ ದಿನ ನಾಲ್ಕು ಪುಸ್ತಕಗಳು ಲೋಕಾರ್ಪಣೆಗೊಂಡಿದ್ದು ಎರಡನೇ ದಿನದ ಮುಂಜಾವಿನಲ್ಲಿ ‘ದುಡ್ವಾ ಜಿವಿತ್’ (ಹಣದ ಜೀವನ) ಮಾಚ್ಚಾ ಮಿಲಾರ್ ಇವರ ಆರ್ಥಿಕ ಮಾಹಿತಿಯ ಲೇಕನ ಸಂಗ್ರಹ, ಡಾ ಜೆರಾಲ್ಡ್ ಪಿಂಟೊ (ಜೆರಿ ನಿಡ್ಡೋಡಿ) ಯವರ ವಿಜ್ಞಾನ ಲೇಖನಗಳನ್ನು ಒಳಗೊಂಡ  ‘ವಿಶ್ವ್ ವಿಜ್ಞಾನ್’ ಡಾಕ್ಟರ್ ಕ್ಲೆರೆನ್ಸ್ ಮಿರಾಂದರವರ  ಕೊಂಕಣಿಯ ಪ್ರಪ್ರಥಮ ಅರ್ಥಶಾಸ್ತ್ರ ಅಧ್ಯಯನ ಪಠ್ಯ ಪುಸ್ತಕ ಹಾಗೂ ಪ್ರೊ ಸ್ಟೀವನ್ ಕ್ವಾಡ್ರಸ್‍ರವರ ಇತಿಹಾಸ ಅಧ್ಯಯನ ಪಠ್ಯ ಪುಸ್ತಕ ಗಳನ್ನು ಬಿಡುಗಡೆ ಮಾಡಲಾಯ್ತು. ಹೀಗೆ ಈಗಾಗಲೇ 69 ಪುಸ್ತಕಗಳನ್ನು ಬಿಡುಗಡೆ ಮಾಡಿದಂತಾಯ್ತು. ಇನ್ನುಳಿದ ಆರು ಪುಸ್ತಕಗಳನ್ನು ಲೋಕೋತ್ಸವದ ಕೊನೆಯ ದಿನ ಬಿಡುಗಡೆ ಮಾಡಲು ಆಯೋಜಿಸಲಾಗಿದೆ.

ಲೋಕೋತ್ಸವದ ಎರಡನೇ ದಿನದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಡಾ. ವಿನ್ಸೆಂಟ್ ಆಳ್ವಾ ಅವರು ಭಾರತೀಯ ಸಾಹಿತ್ಯದಲ್ಲಿ ಭಾಶಾಂತರದ ಮಹತ್ವ ಹಾಗೂ ಡಾ. ಪೂರ್ಣಾನಂದ ಚಾರಿಯವರು ಭಾಶಾಂತರದ ಬೆಳವಣಿಗೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಕುರಿತು ಅಧ್ಯಯನ ಪತ್ರಿಕೆಗಳನ್ನು ಮಂಡಿಸಿದರು. ಭಾಶಾಂತರ ಪ್ರಕ್ರಿಯೆಯ ಮುಖಾಂತರ ಭಾರತೀಯ ಭಾಷೆಗಳು ಅಭಿವೃದ್ಧಿಯುತವಾಗಿ  ಮುಂದುವರಿಯುವುದರಿಂದ ಅದು ಉಪಯುಕ್ತ ಹಾಗೂ ಲಾಭದಾಯಕ ಪ್ರಕ್ರಿಯೆ ಎಂದು ಅಧ್ಯಯನಿಗಳು ವಾದ ಮಂಡಿಸಿದರು.

ಕೊಂಕಣಿ ಲೋಕೋತ್ಸವದ ಎರಡನೇ ದಿನ ಯುವಜನರ ದಿನವೆಂದು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯದ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕೆನರಾ ಕಾಲೇಜು ಮಂಗಳೂರು, ಪಾದುವ ಕಾಲೇಜ್ ಆಫ್ ಕಾಮರ್ಸ್, ಅಲೋಷಿಯಸ್ ಕಾಲೇಜು, ರೊಜಾರಿಯೋ ಕಾಲೇಜು, ಪೊಂಪೆ ಕಾಲೇಜು ಐಕಳ, ಮಿಲಾಗ್ರಿಸ್ ಕಾಲೇಜು ಮಂಗಳೂರು, ಇದರ ವಿದ್ಯಾರ್ಥಿಗಳಿಂದ ಸುಂದರ ಸಾಂಸ್ಕøತಿಕ ವೈವಿಧ್ಯತೆಯ ಪ್ರದರ್ಶನ ನಡೆಯಿತು. ಈ ಸ್ಪರ್ಧೆಗಳಲ್ಲಿ ಪ್ರತಿಭಾವಂತ ತಂಡ ಪ್ರಶಸ್ತಿಯು ಪಾದುವ ಕಾಲೇಜು ಮಂಗಳೂರು, ಅತ್ಯುತ್ತಮ ತಂಡ ಪ್ರಶಸ್ತಿ ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಸಂಪಾದಿಸಿತು ಹಾಗೂ ಉತ್ತಮ ತಂಡ ಪ್ರಶಸ್ತಿಯನ್ನು ಮಿಲಾಗ್ರಿಸ್ ಕಾಲೇಜು ಮಂಗಳೂರು ಪಡೆಯಿತು.

 

ಲೋಕೋತ್ಸವದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಶುಭ ಹಾರೈಕೆ

ಕೊಂಕಣಿ ಲೋಕೋತ್ಸವದ ಸಂಭ್ರಮದಲ್ಲಿ ಭಾಗಿಯಾಗಲು ಮಂಗಳೂರು ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದ ಶ್ರೀ ನಳೀನ್ ಕುಮಾರ್ ಕಟೀಲು ಆಗಮಿಸಿದ್ದರು. ಅಕಾಡಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಹಾಗೂ ರಿಜಿಸ್ಟ್ರಾರ್ ಡಾ ಬಿ ದೇವದಾಸ್ ಪೈ ಅವರು ಸಂಸದರನ್ನು ಹಾಗೂ ಅವರೊಡನಿದ್ದ ನಾಡಿನ ಹಿರಿಯ ಪತ್ರಕರ್ತ ಶ್ರೀ ಮನೋಹರ್ ಪ್ರಸಾದ್ ಹಾಗೂ ಉದ್ಯಮಿ ಶ್ರೀ ವೇದವ್ಯಾಸ್ ಕಾಮತ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಲೋಕೋತ್ಸವದ ಸೊಬಗನ್ನು ಹಾಗೂ ಆ ಸಂದರ್ಭದಲ್ಲಿ ನಡೆಯುತ್ತಿದ್ದ ಸುಂದರ ಸಾಂಸ್ಕøತಿಕ ಸ್ಪರ್ಧೆಗಳನ್ನು ಸವಿದ ಸಂಸದರು ತಮ್ಮ ಸಂದೇಶದಲ್ಲಿ ಕೊಂಕಣಿ ಜನರ ಸೌಮ್ಯತೆ, ಶಿಸ್ತುಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ಬಹುವಾಗಿ ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವ ಕರ್ನಾಟಕ ಕರಾವಳಿಗೆ ಇಂದು ಕೊಂಕಣಿಗರ ಸರ್ವಧರ್ಮ ಸಮನ್ವಯತೆಯ ಚಿಂತನೆ ಅತೀವವಾಗಿ ಅಗತ್ಯವಾಗಿದೆ ಎಂದು ತಿಳಿಸಿದ ಅವರು ಎಲ್ಲಾ ಧರ್ಮ, ಜಾತಿ, ಭಾಷಾಪಂಗಡಗಳ ಜನರು ಒಗ್ಗಟ್ಟಿನಿಂದ ಬದುಕುವಂತಾಗಲು ಈ ಲೋಕೋತ್ಸವ ನಾಂದಿಯಾಗಲಿ ಎಂದು ಅವರು ಹಾರೈಸಿದರು.


ಕೊಂಕಣಿ ಕ್ವಿಜ್

ಯುವಜನರಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತು ಒಲವನ್ನು ಹಾಗೂ ಆಸಕ್ತಿಯನ್ನು ಹುಟ್ಟಿಸಿ ಬೆಳೆಸುವ ಉದ್ದೇಶದಿಂದ ಯುವಜನರಿಗಾಗಿ ಕೊಂಕಣಿ ಹಿರಿಯರು, ಸಾಹಿತ್ಯ ಮತ್ತು ಪರಂಪರೆಯ ಕುರಿತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು, ಬಹುಸಂಖ್ಯೆಯಲ್ಲಿ ಯುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು ಕಂಡು ಬರುತ್ತಿತ್ತು. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿಶ್ವವಿದ್ಯಾಲಯ ಸಂಧ್ಯಾಕಾಲೇಜು ತಂಡ ಪಡೆಯಿತು, ದ್ವಿತೀಯ ಸ್ಥಾನವನ್ನು ಸೈಂಟ್ ಅಲೋಷಿಯಸ್ ಪಿಯು ಕಾಲೇಜು ಹಾಗೂ ತೃತೀಯ ಸ್ಥಾನವನ್ನು ಪೊಂಪೆ ಕಾಲೇಜು ಐಕಳ ಸಂಪಾದಿಸತು. ಹಾಗೂ ತೃತೀಯ ಸ್ಥಾನವನ್ನು  ಅದೇ ರೀತಿ ಕೊಂಕಣಿ ಜನರ ಸಂಸ್ಕøತಿ ಹಾಗೂ ಜೀವನ ಪರಂಪರೆಯ ಕುರಿತು ಆಸಕ್ತಿದಾಯಕ ಮಾಹಿತಿ ನೀಡುವ ರೂಪಕವನ್ನು ಆಡ್ರಿನ್ ಪ್ರೀತ್ ಡಿಕುನ್ಹಾ ಮತ್ತು ಬಳಗದವರು ಪ್ರದರ್ಶಿಸಿದರು. ಆ ನಂತರ ಸಮೃದ್ಧಿ ಮ್ಯೂಜಿಕಲ್ ಪುತ್ತೂರಿನ ಸದಸ್ಯರಿಂದ ಶಿವಾನಂದ ಶೆಣೈ ಅವರ ನಾಯಕತ್ವದಲ್ಲಿ ಹಾಗೂ ಯಂಗ್ ಸಾರಸ್ವತ್ ಬಳಗದವರ ವತಿಯಿಂದ ಸುಗಮ ಸಂಗೀತ ಹಾಗೂ ನೃತ್ಯ ರೂಪಕ ಕಾರ್ಯಕ್ರಮಗಳು ನಡೆದವು

ಕೊಂಕಣಿ ಜನರ ನಡುವೆ ಸಂಗೀತ, ಸಾಹಿತ್ಯದೊಡನೆ ಮನೋರಂಜನೆ ಹಾಗೂ ಹಾಸ್ಯದ ಅರ್ಥಪೂರ್ಣ ಸಮ್ಮಿಳನವನ್ನು ಕಾಣಬಹುದಾಗಿದೆ ಅದರಂತೆ ಲೋಕೋತ್ಸವದ ವೇದಿಕೆಯಲ್ಲಿ ಕೊಮೆಡಿ ಕಜಿನ್ಸ್ ಬಳಗದವರಿಂದ ಹಾಸ್ಯ ಕಾರ್ಯಕ್ರಮ ನೆರವೇರಿತು.

ವಿಜೃಂಬಣೆಯ ಮೆರವಣಿಗೆ:

ಕೊಂಕಣಿ ಲೋಕೋತ್ಸವದ ಪ್ರಯುಕ್ತ ನಡೆಸಲಾದ ಭವ್ಯ ಸಾಂಸ್ಕøತಿಕ ದಿಬ್ಬಣದ ಮೆರವಣಿಗೆಯು ಶಾಂತಿ ನಿಲಯ ಬಲ್ಮಠದಿಂದ ಆರಂಭವಾಯ್ತು. ಆರಂಭದಲ್ಲಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊರವರು ಸಾಂಪ್ರದಾಯಿಕ ಪದ್ಧತಿಯಲ್ಲಿ ತೆಂಗಿನಕಾಯಿ ಒಡೆದು ದಿಬ್ಬಣ ಆರಂಭಿಸಿದರು. ಚಲನಚಿತ್ರ ನಟ ಎಲ್ಟನ್ ಮಸ್ಕರೇನ್ಹಸ್, ಕುಡುಮಿ ಸಮಾಜದ ಹಿರಿಯ ನಾಯಕ ಶ್ರೀ ರಾಮಗೌಡ ಮಿಜಾರ್ ಇವರು ಕೊಂಕಣಿ ಧ್ವಜ ಬೀಸಿ ಮೆರವಣಿಗೆಗೆ ಚಾಲನೆ ನೀಡಿದರು.ಸುಮಾರು ಎರಡು ಗಂಟೆಗಳ ಕಾಲ ಸಾಗಿ ಬಂದ ಈ ಮೆರವಣಿಗೆಯಲ್ಲಿ ಮದರ್ ತೆರೇಜಾ ಬ್ರಾಸ್ ಬ್ಯಾಂಡ್ ಹೊನ್ನಾವರ, ಸಾವೆರ್ ಸಂತಾನ್ ಸಿದ್ಧಿ ನಾಯಕತ್ವದ ದಮಾಮ್ ಪಂಗಡ, ಮಂಜುನಾಥ ಆರ್ ಸಿದ್ಧಿ ನಾಯಕತ್ವದ ದಪ್ಹ್ ಪಂಗಡ, ಅನಂತ ಕೆ ಸಿದ್ಧಿ ನಾಯಕತ್ವದ ಪುಗಡಿ ನೃತ್ಯ ಪಂಗಡ, ಕೇಶವ ಹುಲುಸ್ವಾರ ನಾಯಕತ್ವದ ಸಾಂಪ್ರದಾಯಿಕ ವೃತ್ತಿ ಪಂಗಡ, ಜೋಯ್‍ಸ್ಟಾರ್ ಬ್ರಾಸ್ ಬ್ಯಾಂಡ್ ಪಂಗಡದ ಬ್ರಾಸ್ ಬ್ಯಾಂಡ್, ಸಾವೆರ್ ಸಂತಾನ್ ಸಿದ್ಧಿ ಮತ್ತು ಮಂಜುನಾಥ್ ಆರ್ ಸಿದ್ಧಿಯವರ ನಾಯಕತ್ವದಲ್ಲಿ ಝಕಾಯ್ ನೃತ್ಯ ಪಂಗಡಗಳು, ಮೇರಿ ನೋರ್ಬಟ್ ಗರಿಬಾಚೆ ಅವರ ಪಂಗಡದ ದಫ್ಹ್ ಹಾಗೂ ಫುಗಡಿ ನರ್ತನಗಳು, ಶಾಂತರಾಮ ಸಿದ್ಧಿ ಪಂಗಡದಿಂದ ಸಾಂಗ್ಯಬಾಳೆ ಹಾಗೂ ದಮಾಮ್ ನೃತ್ಯಗಳು, ಗೀತಾ ವಾಗ್ಳೆ ನಾಯಕತ್ವದ ದುರ್ಗಾ ಮಹಿಳಾ ಚೆಂಡೆ ಪಂಗಡದವರಿಂದ ಪ್ರದರ್ಶನ, ಅನಂತ ಕೆ ಸಿದ್ಧಿ ಪಂಗಡದ ಝಕಾಯ್, ರುಕ್ಕಯ್ಯ ಗೌಡ ತಂಡದವರ ಕುಡ್ಮಿ ಕೋಲಾಟ ನೃತ್ಯ, ನಾಕುದ ದಫ್ಹ್ ಮಂಡಳಿಯವರಿಂ ದಫ್ಹ್, ಚಂದ್ರ ನಾಯಕ ಮತ್ತು ತಂಡದವರ ಕುಣುಬಿ ನೃತ್ಯ, ವಿಷ್ಣು ಶಾಬು ರಾಣೆ ಪಂಗಡದಿಂದ ಡೊಳ್ಳುವಾದ್ಯ, ಸುರೇಶ್ ಸಿ ನಾಯ್ಕ ಪಂಗಡದಿಂದ ಗುಮಟೆ ನರ್ತನ, ಮಂಜುನಾಥ್ ಆರ್ ಸಿದ್ಧಿ ನಾಯಕತ್ವದ ಧಮಾಮ್ ನರ್ತನ ಪಂಗಡ, ಸರಸ್ವತಿ ನಾರಾಯಣ ಪಾವಾಸ್ಕರ್ ನಾಯಕತ್ವದ ನರ್ತನ ಪಂಗಡ, ಬಂಗಾರಿ ರಾಮ ಬೋರ್ಕಾರ್ ಅವರ ಮುಖಂಡತ್ವದ ಸಾಂಪ್ರದಾಯಿಕ ನರ್ತನ ಪಂಗಡ, ಸಾವೆರ್ ಸಂತಾನ್ ಸಿದ್ಧಿಯವರ ಶಿಗ್ಮೊ ನರ್ತನ ಪಂಗಡ, ಸರಸ್ವತಿ ನಾರಾಯಣ ಪಾವಸ್ಕರ್ ಅವರ ಮುಖಂಡತ್ವದ ಬೇಡರ ವೇಷದ ನರ್ತನ, ಖಾರ್ವಿ ಕಲಾ ಮಂಡಳಿ ಭಟ್ಕಳ ಇವರ ನಾಯಕತ್ವದ ನರ್ತನಗಳು ಈ ಮೆರವಣಿಗೆಯಲ್ಲಿ ಸಾಗಿ ಬಂದವು ಈ ತಂಡಗಳೊಂದಿಗೆ ಪ್ರಜ್ವಾಲ ಹವ್ಯಾಸಿ ಕನ್ನಡ ಕೊಂಕಣಿ ಸಂಘ ಧಾರವಾಡ, ಮಾಂಡ್ ಸೊಭಾಣ್ ಮಂಗಳೂರು, ಕೊಂಕಣಿ ಪ್ರಚಾರ ಸಂಚಲನ ಮಂಗಳೂರು, ಕೊಂಕಣಿ ಸಾಂಸ್ಕøತಿಕ ಸಂಘ ಮಂಗಳುರು ಇವರ ಆಕರ್ಷಕ ಟ್ಯಾಬ್ಲೋಗಳು ಮೆರವಣಿಗೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದವು.

ಪುರಭವನದಲ್ಲಿ ಮೆರವಣಿಗೆಯ ಸಂಗಮ ನಡೆದ ನಂತರ ವೇದಿಕೆಯಲ್ಲಿ ಕೊಂಕಣಿ ಸಂಸ್ಕøತಿಯ ಸೊಬಗನ್ನು ಬಿಂಬಿಸುವ ಸುಂದರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಬಹುಮುಖ ಪ್ರತಿಭೆಯ ಕುಮಾರಿ ಕಸ್ತೂರಿ ಬಿಕರ್ನಕಟ್ಟೆ ಅವರಿಂದ ಗೀತಾಗಾಯನ, ಸೈಂಟ್ ಆಗ್ನೇಸ್ ಸ್ಪೆಷಲ್ ಸ್ಕೂಲ್ ಬೆಂದುರ್ ಇದರ ವಿಶೇಷ ಸಾಮಥ್ರ್ಯದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಮಾಂಡ್ ಸೊಭಾಣ್ ಪ್ರಾಯೋಜಿತ ನಾಚ್ ಸೊಭಾಣ್ ತಂಡದಿಂದ ಬೈಲಾ ನೃತ್ಯದ ಪ್ರದರ್ಶನ ನಡೆಯಿತು. ಕೊಂಕಣಿ ಜನರನ್ನು ಅತಿಯಾಗಿ ಸೆಳೆಯುವ ಸಂಗೀತ ರಸಮಂಜರಿಯ ತುಣುಕುಗಳನ್ನು ವಿವಿಧ ಸಂಗೀತಗಾರರ ಸಹಕಾರ್ಯದಲ್ಲಿ ನಡೆಸಿಕೊಡಲಾಯ್ತು. ಶ್ರೀ ಲಕ್ಷ್ಮೀ ವೆಂಕಟ್ರಮಣ ಮಹಿಳಾ ಚಂಡೆ ಮದ್ದಳೆ ತಂಡದವರ ಚಂಡೆ ವಾದನ, ಮಸ್ಕಿರಿ ಕಲಾಕಾರ್ ಕುಲ್ಶೇಕರ್ ಇವರಿಂದ ಹಾಸ್ಯ ಪ್ರದರ್ಶನ ನೆರವೇರಿತು.

ಸಂಜೆಯ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಜ್ಯೋತಿ ಬ್ರಿಟ್ಟೊ ಬೆಂಗಳೂರು, ಪ್ರಸನ್ನ ಪ್ರಭು ಭಟ್ಕಳ, ವಿಜೇತ್ ಎಮ್ ವರ್ಣೇಕರ್ ಧಾರವಾಡ, ಸುನಿಲ್ ಹಣಕೋಣ ಕಾರವಾರ, ಶಶಿಭೂಷಣ ಕಿಣಿ ಉಡುಪಿ, ಅವಿಲ್ ಡಿಕ್ರೂಜ್ ಮಂಗಳೂರು, ಸ್ಪರ್ಶಾ ಶೆಣೈ ಮೈಸೂರು, ಸುನಿಲ್ ಅಂತೋನ್ ಸಿದ್ಧಿ ಮುಂಡಗೋಡು, ರಾಜೇಶ್ ಕುಂಬಕೋಡು, ಜಾಸ್ಮಿನ್ ಡಿಸೋಜಾ ಮೈಸೂರು ಹೀಗೆ ಹತ್ತು ಕೊಂಕಣಿ ಯುವ ಸಾಧಕರನ್ನು ಗೌರವಿಸಲಾಯ್ತು. ವೇದಿಕೆಯಲ್ಲಿ ಅಕಾಡಮಿಯ ಅಧ್ಯಕ್ಷರು, ಸದಸ್ಯರು ಹಾಗೂ ರಿಜಿಸ್ಟ್ರಾರ್ ಅವರೊಡನೆ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಶ್ರೀ ಯು ಟಿ ಖಾದರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಯು ಕೆ ಮೋನು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹನೀಫ್ ಅವರೊಡನೆ ಭಾಷಾ ವಿಧ್ವಾಂಸ ಶ್ರೀಯುತ ಮಾಧವ ಪೈ, ಶ್ರೀ ಪಯ್ಯನೂರು ರಮೇಶ್ ಪೈ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಕಲಾಕುಲ್ ನಾಟಕ ರೆಪರ್ಟರಿಯವರಿಂದ ಕೊಂಕಣಿ ನಾಟಕ, ಮಹಾಲೆ ನಾಪಿತ ಸಮಾಜ ಧಾರವಾಡ ಇವರಿಂದ ಕಂಸಾಳೆ ನೃತ್ಯ ಹಾಗೂ ನಾರಾಯಣ ಆಲೂ ಮರಾಠೆ ತಂಡ ಹೊನ್ನಾವರ ಇವರಿಂದ ಯಕ್ಷಗಾನ ಪ್ರದರ್ಶಿತವಾಯ್ತು. 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]