ಲೋಕೋತ್ಸವದ ಮೂರನೇ ದಿನ 12-02-2017 ಪುರಭವನದ ಮುಂಗಟ್ಟೆಯ ವೇದಿಕೆಯ ಮೇಲೆ ವಿವಿಧ ಜನಪದ ಸಾಂಸ್ಕøತಿಕ ನಾಟ್ಯಗಳೊಂದಿಗೆ ಆರಂಭವಾಯ್ತು. ಅಂಕೋಲಾ ಸಿದ್ಧಿ ಧಮಾಮ್ ಪಂಗಡದವರಿಂದ ದಫ್ಹ್ ನೃತ್ಯ, ಮುಂಡಗೋಡ ಸಿದ್ಧಿ ಧಮಾಮ್ ಪಂಗಡದವರಿಂದ ಧಮಾಮ್ ನೃತ್ಯ, ಯಲ್ಲಾಪುರ ಸಿದ್ಧಿ ಫುಗಡಿ ಫೆಲೊಶಿಪ್ ತಂಡದವರಿಂದ ಫುಗಡಿ ನೃತ್ಯ, ಶಿರಸಿ ಸಿಧ್ದಿ ಝುಕಾಯ್ ಫೆಲೊಶಿಪ್ ತಂಡದವರಿಂದ ಝುಕಾಯ್ ನೃತ್ಯ ಇವುಗಳ ಸುಂದರ ಪ್ರಸ್ತುತತಿ ನಡೆಯಿತು. ಸಭಾಂಗಣದ ಒಳಗೆ ಗೌಡಸಾರಸ್ವತ ಬ್ರಾಹ್ಮಣ ತಂಡ ಮಂಗಳೂರು ಇವರಿಂದ ಕಿರು ನಾಟಕ ಮತ್ತು ಸೋಭಾನೆ ಪದಗಳ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು. ನಂತರ ಕೊಂಕಣಿ ಸಾಂಸ್ಕøತಿಕ ಸಂಘ ಇವರಿಂದ ಸಮೂಹ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ಸ್ವರಶ್ರೀ ಕಲಾ ವೇದಿಕೆ ಟ್ರಸ್ಟ್ ಇವರಿಂದ ನೃತ್ಯಗಾಯನ ಹಾಗೂ ಯಕ್ಷಗಾನ ಕಾರ್ಯಕ್ರಮ, ಮೇಸ್ತ ಕಲಾ ತಂಡ ಶೀರೂರು ಇವರಿಂದ ಕೊಂಕಣಿ ಹಾಸ್ಯ ನಾಟಕ, ದುರ್ಗಾಂಬಿಕಾ ಕಲಾ ಕೇಂದ್ರ ಶೀರೂರು ಇವರ ನೃತ್ಯ ನಾಟಕ ಹಾಗೂ ಗಾಯನಗಳು, ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮೈಸೂರು ಇವರಿಂದ ಹಾಸ್ಯ ಹಾಗೂ ಗೀತೆ ಗಾಯನ ಕಾರ್ಯಕ್ರಮ, ಜಿ ಎಸ್ ಬಿ ಮಹಿಳಾ ತಂಡ ಪುತ್ತೂರು ಇದರ ರಜನಿ ಪ್ರಭು ನಾಯಕತ್ವದ ನಾಟಕ ಇವೆಲ್ಲವೂ ಸಭಿಕರ ಮನ ತಣಿಸಿದವು. 

 

 

 

 

 

ಲೋಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಕೊಂಕಣಿಗೆ ನಿರಂತರ ಸೇವೆ ಸಲ್ಲಿಸಿದ ಸ್ವಾಮಿ ಮೈಕಲ್ ಸಾಂತುಮಾಯೊರ್, ಡೊಲ್ಫಿ ಡಿಕುನ್ಹಾ ಮಂಗಳೂರು, ಜೇಮ್ಸ್ ಲೋಪಿಸ್ ಹೊನ್ನಾವರ, ಅರುಣ್ ಉಭಯ್‍ಕರ್ ಕುಮಟಾ, ಲಿಂಗಪ್ಪ ಗೌಡ ಮಂಗಳೂರು, ಆರ್ಗೋಡು ಸುರೇಶ್ ಶೆಣೈ ಹುಬ್ಬಳ್ಳಿ, ಮಹೇಶ್ ನಾಯಕ್ ಮಂಗಳೂರು, ಎ ಎನ್ ನವೀನ್ ಶೇಟ್ ಶಿವಮೊಗ್ಗ, ಹರ್ಷಿದ್ ಹುಸೇನ್ ಕೊಪ್ಪ ಹೀಗೆ ಒಂಬತ್ತು ಜನ ಸಾಧಕರನ್ನು ಸನ್ಮಾನಿಸಲಾಯ್ತು. ವೇದಿಕೆಯಲ್ಲಿ ಕೊಂಕಣಿ ಬೀಷ್ಮ ಎಂದೇ ಖ್ಯಾತರಾದ ಸ್ವಾಮಿ ಮಾರ್ಕ್ ವಾಲ್ಡರ್, ಎಸಿಪಿ ಶ್ರೀ ವೆಲೆಂಟಾಯ್ನ್ ಡಿಸೋಜಾ ಅವರೊಡನೆ ಅಕಾಡಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಹಾಗೂ ರಿಜಿಸ್ಟ್ರಾರ್ ಡಾ. ಬಿ ದೇವದಾಸ ಪೈ ಅವರೊಡನೆ ಎಲ್ಲಾ ಸದಸ್ಯರು ಹಾಜರಿದ್ದರು.

ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ನಂತರ ವಸಂತ ಸೈಲ್ ಅವರ ತಂಡದಿಂದ ಗುಮಟೆ ಸವಾರಿ, ಪ್ರಭಾ ರಾವ್ ದಾಸ್‍ನಾಯಕ್ ಇವರ ತಂಡದಿಂದ ತೊಣಿಯಾಂ ನಾಚ್, ಕುಮುದ ಘಡ್ಕರ್ ಅವರ ಬಳಗದಿಂದ ದೀಪ್‍ಮಾಳಾ ಮಾಟ್ಯ, ವಸಂತ ಬಾಂದೇಕರ್ ಅವರ ಪಂಗಡದ ಸೊಂಗಾ ಖೆಳ್, ಉದಯಕಾಂತ ಅಣ್ವೇಕರ ಅವರ ತಂಡದ ಮುಖವಾಡ ಖೇಳ್ ಸಾಂಸ್ಕøತಿಕ ಸೊಬಗಿನ ಕಾರ್ಯಕ್ರಮಗಳು ನಡೆದವು. ಆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡಮಿ ಪ್ರಕಟಿಸಿದ ಪಾಟಿಂ ದೀಷ್ಟ್ (ಎಡ್ಡಿ ನೆಟ್ಟೊ), ಮ್ಹಾತಾರೊ ಚರ್ಬೆಲಾ ( ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ), ಸುಲಭ್ ಕೊಂಕಣಿ (ಮಂಗಳೂರು ವಿಶ್ವವಿದ್ಯಾಲಯದ ಕೊಂಕಣಿ ಎಮ್ ಎ ವಿದ್ಯಾರ್ಥಿಗಳ ಸಂಗ್ರಹ), ಚಿಕ್ಲಾತೂಲ್ ಫೂಲ್ (ಮಾಮ್ದು ಇಬ್ರಾಹಿಮ್ ಶೀರೂರ್), ಸಾಂಟೊ (ಸ್ವಾಮಿ ಮಾರ್ಕ್ ವಾಲ್ಡರ್), ಮ್ಹಾಕಾ ಭೊಗ್ಶಿ ಮಾಂಯ್ (ವಿ ಡಿ’ಸಿಲ್ವಾ ಕಾಂಜೂರ್‍ಮಾರ್ಗ್) ಕೃತಿಗಳನ್ನು ಲೋಕಾರ್ಪಣೆ ಮಾಡಲಾಯ್ತು. ವೇದಿಕೆಯಲ್ಲಿ ಅಕಾಡಮಿಯ ಅಧ್ಯಕ್ಷರು, ರಿಜಿಸ್ಟ್ರಾರ್ ಹಾಗೂ ಇತರ ಸದಸ್ಯರೊಡನೆ ಮಂಗಳೂರು ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಭಾಷಿನಿ ಶ್ರೀವಾಸ್ತವ ಹಾಗೂ ಕೊಂಕಣಿ ಭಾಷೆಯ ನಿರಂತರ ಪ್ರಗತಿಗಾಗಿ ದುಡಿದ ಪಾವ್ಲ್ ಮೋರಾಸ್ ಉಪಸ್ಥಿತರಿದ್ದರು.

ಅಪರಾಹ್ನದ ನಂತರ ನಡೆದ ಪ್ರಶಸ್ತಿ ವಿಜೇತರೊಡನೆ ಸಂವಾದ ಕಾರ್ಯಕ್ರಮ ನಡೆಯಿತು. ಅಕಾಡಮಿಯ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಕಾಡಮಿಯು ಜೀವಮಾನ ಸಾಧನೆಗಾಗಿ ನೀಡುವ ಅಕಾಡಮಿ ಗೌರವ ಪ್ರಶಸ್ತಿಯನ್ನು ಪಡೆದ ಶ್ರೀ ಸಿರಿಲ್ ಸಿಕ್ವೇರಾ ತಾಕೊಡೆ (ಸಿಜ್ಯೆಸ್ ತಾಕೊಡೆ), ವಾಸುದೇವ ಶ್ಯಾನುಭಾಗ್ ಶಿರಸಿ, ಶ್ರೀಮತಿ ಕ್ಲಾರಾ ಸಿದ್ಧಿ ಯಲ್ಲಾಪುರ ಇವರೊಂದಿಗೂ ಅಕಾಡಮಿ ಪುಸ್ತಕ ಪ್ರಶಸ್ತಿ ವಿಜೇತ ಭಗಿನಿ ಅಗ್ನೇಶಿಯಾ ಫ್ರಾಂಕ್ ಹಾಗೂ ಶ್ರೀ ಉಮೇಶ್ ಗೌತಮ ನಾಯಕ್ ಇವರು ಉಪಸ್ಥಿತರಿದ್ದರು ಇವರ ಪರಿಚಯ ನೀಡುವುದರೊಂದಿಗೆ ಅವರ ವ್ಯಕ್ತಿಗತ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶಿಸಲಾಯ್ತು. ನಂತರ ನೆರೆದ ಮಾತುಕತೆಯಲ್ಲಿ ಸಭಾಸದರು ಪ್ರಶಸ್ತಿ ವಿಜೇತರೊಡನೆ ಸಂವಾದ ನಡೆಸಿದರು.

 

 

 

 

 

ಸಂವಾದ ಕಾರ್ಯಕ್ರಮದ ನಂತರ ಹೆಸರಾಂತ ಕವಿ ಟೈಟಸ್ ನೊರೊನ್ಹಾರವರ ನಾಯಕತ್ವದಲ್ಲಿ 13 ಕವಿಗಳಿಂದ ಕವಿಗೋಷ್ಟಿ ನಡೆಯಿತು ಶ್ರೀಮತಿ ಜುಲಿಯೆಟ್ ಫೆರ್ನಾಂಡಿಸ್, ಶ್ರೀ ಮಹೇಶ್ ಆರ್ ನಾಯಕ್, ಶ್ರೀ ಕಾಸರಗೋಡು ಅಶೋಕ್ ಕುಮಾರ್, ಶ್ರೀ ಇಜಾಕ್ ಡಿಸೋಜಾ (ಯಶವಂತ್ ಡಿ ಎಸ್), ಶ್ರೀಮತಿ ಶಕುಂತಲಾ ಆರ್ ಕಿಣಿ, ಶ್ರೀ ಮಾಮ್ದು ಇಬ್ರಾಹಿಮ್ ಸುಲೇಮಾನ್, ಶ್ರೀ ತಾರಾನಾಥ ಜೆ ಮೇಸ್ತ, ಶ್ರೀ ನಾಗೇಶ್ ಅಣ್ವೇಕರ್, ಶ್ರೀ ಮೋಹನ್ ವರ್ಣೇಕರ್, ಶ್ರೀ ಬಾನುಪ್ರಕಾಶ್ ಎ ಪಿ, ಶ್ರೀ ಆರ್ ಎಸ್ ಭಾಸ್ಕರ್, ಶ್ರೀಮತಿ ಸ್ಮಿತಾ ಆರ್ ಶೆಣೈ ಹಾಗೂ ಶ್ರೀಮತಿ ಜಯಶ್ರೀ ಎಸ್ ಶೇಣೈ ಇವರು ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು. ಕವಿಗೋಷ್ಟಿಯ ನಂತರ ವಿಶಿಷ್ಟ ಕಾವ್ಯ ಕುಂಚ ಕಾರ್ಯಕ್ರಮದಲ್ಲಿ ಹಾಡುಗಾರಿಕೆ, ಮ್ಯಾಜಿಕ್ ಷೋ ಹಾಗೂ ವರ್ಣಚಿತ್ರಣ ಹೀಗೆ ಮುಮ್ಮಡಿ ಪ್ರತಿಭೆಯ ಏಕಕಾಲದ ಪ್ರದರ್ಶನ ನಡೆಯಿತು. ವಿಲ್ಸನ್ ಕಯ್ಯಾರ್ ಅವರ ವರ್ಣಚಿತ್ರಣ, ಪ್ರಸನ್ನ ಪ್ರಭು ಅವರ ಮ್ಯಾಜಿಕ್ ಹಾಗೂ ವಿವಿಧ ಸಂಗೀತಕಾರರ ಗಾಯನ ಒಟ್ಟಾಗಿ ಒಂದು ಸುಂದರ ಕಲಾ ವೈಭವವನ್ನು ಅದು ಸೃಷ್ಟಿಸಿತು.

ಕೊಂಕಣಿ ನಾಡು ನುಡಿಯ ಸೊಬಗನ್ನು ಪರಿಚಯಿಸುವ ವಸ್ತು ಪ್ರದರ್ಶನ:

ಕೊಂಕಣಿ ಭಾಷೆ ಕಳೆದ ಸಾವಿರ ವರ್ಷಗಳಿಂದ ಕನ್ನಡ ನಾಡಿನ ಪಾರಂಪರಿಕ ಬದುಕನ್ನು ಸಂಪದ್ಭರಿತಗೊಳಿಸಿದೆ. ಕನ್ನಡ-ಕೊಂಕಣಿ-ತುಳುವ ಬಾಂಧವ್ಯದ ಬಲವನ್ನು ಹಾಗೂ ವೈಭವವನ್ನು ಸಾರುವ ಸುಂದರ ವಸ್ತು ಪ್ರದರ್ಶನ ಕೊಂಕಣಿ ಲೋಕೋತ್ಸವದ ಅಂಗಣದಲ್ಲಿ ಮಲೆನಾಡು ವಸ್ತು ಪ್ರದರ್ಶನ ಘಟಕ ಶಿವಮೊಗ್ಗ ಇವರಿಂದ ಭಾರತೀಯ ಇತಿಹಾಸ, ಸಂಸ್ಕøತಿ ಮತ್ತು ಪರಂಪರೆಯನ್ನು ಬಿಂಬಿಸುವ ವಸ್ತುಪ್ರದರ್ಶನದ ಮಳಿಗೆಗಳು ವ್ಯವಸ್ಥೆಗೊಳಿಸಲ್ಪಟ್ಟಿದ್ದವು. ಈ ವಸ್ತುಪ್ರದರ್ಶನದಲ್ಲಿ ಪೂರ್ವಿಕರು ಉಪಯೋಗಿಸುತ್ತಿದ್ದ ಸುಂದರವಾದ ಪಾತ್ರೆ ಪಗಡೆಗಳು, ಮರದ ವಸ್ತುಗಳು, ತಂಜಾವೂರಿನ ಬಣ್ಣದ ಚಿತ್ರಗಳು, ದಿನ ಬಳಕೆಯ ಉಪಯೋಗದ ಸಾಮಾಗ್ರಿಗಳು, ಅಂಚೆ ಚೀಟಿಗಳು, ತಾಮ್ರಪತ್ರಗಳು, ರಾಜ ಮಹಾರಾಜರ ಕಾಲದ ನಾಣ್ಯಗಳು, ಭಾರತದ ವಿವಿಧ ಕಾಲದ ಹಣಕಾಸುಗಳು, ಆಯುಧಗಳು, ಆಭರಣಗಳು ಹೀಗೆ ದೇಶದ ವೈವಿಧ್ಯತೆಯನ್ನು ಬಿಂಬಿಸುವ ವಿವಿಧ ವಸ್ತುಗಳ ಪರಿಚಯದ ಈ ವಸ್ತು ಪ್ರದರ್ಶನ ಸಾವಿರಾರು ಜನರ ಮನಸೆಳೆಯಿತು.

 

 

 

 

 

ವೈಭವಯುತ ಸಮಾರೋಪ ಸಂಭ್ರಮ

ಮೂರು ದಿನಗಳ ಕಾಲ ಹಗಲು ಇರುಳು ಸಂಭ್ರಮದಿಂದ ನಡೆದ ಕೊಂಕಣಿ ಲೋಕೋತ್ಸವ ಭಾನುವಾರ ಸಂಜೆ ಅರ್ಥಪೂರ್ಣ ಸಮಾರೋಪ ಕಂಡಿತು. ಸಮಾರೋಪ ಕಾರ್ಯಕ್ರಮದ ಆರಂಭದಲ್ಲಿ ಮಾಂಡ್ ಸೊಭಾಣ್ ಖ್ಯಾತಿಯ ಶ್ರೀ ಎರಿಕ್ ಒಝೇರಿಯೊ ಹಾಗೂ ಖ್ಯಾತ ಗಾಯಕಿ ಶ್ರೀಮತಿ ವಸಂತಿ ಆರ್ ನಾಯಕ್ ಅವರ ನಾಯಕತ್ವದ ನೂರು ಸಂಗೀತಗಾರರುÀ ‘ಕೊಂಕಣಿ ಆವ್ಸುಕ್ ಜಯ ಮ್ಹಣುಂಯಾಂ’ ಗೀತೆ, ಲೋಕೋತ್ಸವದ ಆಶಯ ಗೀತೆ ಹಾಗೂ ಕರ್ನಾಟಕ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಸುಂದರ ಆರಂಭ ನೀಡಿದರು. ಅಕಾಡಮಿಯ ಅಧ್ಯಕ್ಷರಾದ ಶ್ರೀ ರೊಯ್ ಕಾಸ್ತೆಲಿನೊರವರು ಕಾರ್ಯಕ್ರಮಲ್ಲಿ ಹಾಜರಿದ್ದ ಜನಸಾಗರವನ್ನು ಸ್ವಾಗತಿಸಿದರು. ವೇದಿಕೆಯ ಮೇಲೆ ಕರ್ನಾಟಕ ವಿದಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಶ್ರೀ ಐವನ್ ಡಿಸೋಜಾ, ಮಂಗಳೂರು ಉತ್ತರ ವಿದಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ ಎ ಮೊಯ್ದಿನ್ ಅವರು, ಮಂಗಳೂರು ಧರ್ಮಪ್ರಾಂತ್ಯದ ಯಾಜಕ ಪ್ರಧಾನರಾದ ಸ್ವಾಮಿ ಡೆನಿಸ್ ಮೊರಾಸ್ ಅವರು, ಜಿ ಎಸ್ ಬಿ ಸಮಾಜ ಮೈಸೂರು ಇದರ ಗೌರವಾಧ್ಯಕ್ಷರಾದ ಶ್ರೀ ಜಗನ್ನಾಥ ಶೆಣೈಯವರು, ಮುಂಬಯಿಯ ಹಿರಿಯ ಕೊಂಕಣಿ ಮುಖಂಡರಾದ ಡಾ ಸಿ ಎನ್ ಶೆಣೈ, ಕರ್ನಾಟಕರಾಜ್ಯ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಶ್ರೀಮತಿ ಜಾನಕಿ ಬ್ರಹ್ಮಾವರರವರು ಹಾಗೂ ಅಕಾಡಮಿಯ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕರ್ನಾಟಕ ವಿದಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಶ್ರೀ ಐವನ್ ಡಿಸೋಜಾರವರು ಮುಖ್ಯ ಭಾಷಣ ಮಾಡಿ ತಾನು ಶಾಸನ ಪರಿಷತ್ತಿನಲ್ಲಿ ಕೊಂಕಣಿ ಮಾತನಾಡಿದ ಸಂದರ್ಭದ ಅನುಭವವನ್ನು ಹಂಚಿಕೊಂಡರು. ಇಂದು ಕೊಂಕಣಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ಪದವಿ ಶಿಕ್ಷಣದಲ್ಲಿ ತನ್ನ ಪ್ರಸ್ತುತತೆಯನ್ನು ಸಂಪಾದಿಸಿದೆ ಆದಷ್ಟು ಶೀಘ್ರದಲ್ಲಿಯೇ ಅದನ್ನು ಪದವಿ ಪೂರ್ವ ಶಿಕ್ಷಣದಲ್ಲಿ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕೊಂಕಣಿ ಸಾಹಿತ್ಯ ಅಕಾಡಮಿಯ ಹಾಗೂ ಕೊಂಕಣಿ ಭಾಷೆ, ಸಂಸ್ಕøತಿ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಕೊಂಕಣಿ ಭವನದ ನಿರ್ಮಾಣಕ್ಕೆ ಅಗತ್ಯ ಅನುದಾನಗಳನ್ನು ಮುಂದಿನ ಬಜೆಟಿನಲ್ಲಿ ಕಾಯ್ದಿರಿಸಲು ಮುಖ್ಯಮಂತ್ರಿಯವರ ಬಳಿ ಸಮಾಲೋಚಿಸುವುದಾಗಿ ಅವರು ತಿಳಿಸಿದರು.

ನಂತರ ಮಂಗಳೂರು ಉತ್ತರ ವಿದಾನಸಭಾ ಕ್ಷೇತ್ರದ ಶಾಸಕರಾದ ನಾಯಕತ್ವದಲ್ಲಿ ಅತಿಥಿ ಗಣ್ಯರೆಲ್ಲರೂ ಸೇರಿ ಅಕಾಡಮಿ ಗೌರವ ಪ್ರಶಸ್ತಿಯನ್ನು ಪಡೆದ ಶ್ರೀ ಸಿರಿಲ್ ಸಿಕ್ವೇರಾ ತಾಕೊಡೆ (ಸಿಜ್ಯೆಸ್ ತಾಕೊಡೆ), ವಾಸುದೇವ ಶ್ಯಾನುಭಾಗ್ ಶಿರಸಿ, ಶ್ರೀಮತಿ ಕ್ಲಾರಾ ಸಿದ್ಧಿ ಯಲ್ಲಾಪುರ ಅವರನ್ನು ಹಾಗೂ ಅಕಾಡಮಿ ಪುಸ್ತಕ ಪ್ರಶಸ್ತಿ ವಿಜೇತರಾದ ಭಗಿನಿ ಅಗ್ನೇಶಿಯಾ ಫ್ರಾಂಕ್ ಹಾಗೂ ಶ್ರೀ ಉಮೇಶ್ ಗೌತಮ ನಾಯಕ್ ಹಾಗೂ ಕಾಸರಗೋಡು ಚಿನ್ನಾ ಅವರನ್ನು ಸನ್ಮಾನಿಸಿದರು.

 

 

 

 

 

ಸನ್ಮಾನ ಮಾಡಿ ಮಾತನಾಡಿದ ಶ್ರೀ ಬಿ ಎ ಮೊಹಿಯುದ್ದೀನ್ ಅವರು ‘ಮೂರು ವರ್ಷಗಳಿಂದ ಶ್ರೀ ರೊಯ್ ಕ್ಯಾಸ್ತೆಲಿನೊರವರು ಕೊಂಕಣಿ ಅಕಾಡಮಿಯ ನಾಯಕತ್ವ ವಹಿಸಿ ಮಾಡಿದ ಶ್ರಮವನ್ನು ಪ್ರಶಂಸಿಸಿದರು ಹಾಗೂ ಎಲ್ಲಾ ಬಹುಮಾನ ಹಾಗೂ ಪ್ರಶಸ್ತಿ ವಿಜೇತರನ್ನು ಆತ್ಮೀಯವಾಗಿ ಅಭಿನಂದಿಸಿದರು. ನಂತರ ಮಾತನಾಡಿದ ಪೂಜ್ಯ ಡೆನಿಸ್ ಪ್ರಭು ಅವರು ಮಾತನಾಡಿ ಕೊಂಕಣಿ ಭಾಷೆ ನಮ್ಮನ್ನೆಲ್ಲಾ ಐಕ್ಯದಲ್ಲಿಡಲಿ ಎಂದು ಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ವಿಜ್ಞಾನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ನಾಡು ಹಲವು ಭಾಷೆಗಳ ಜನರ ತವರೂರು ಕನ್ನಡದ ಬಲಶಾಲಿ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಕರ್ನಾಟಕ ಸರ್ಕಾರ ಉಳಿದ ಭಾಷೆಗಳಿಗೂ ಅಪಾರ ಬೆಂಬಲ ನೀಡುತ್ತಿದೆ ಆ ಬೆಂಬಲವನ್ನು ಅದು ಇನ್ನೂ ಮುಂದುವರೆಸಲಿದೆ ಎಂದು ತಿಳಿಸಿದರು.

 

ಕ್ಷಣಕ್ಷಣಕ್ಕೂ ಬೆಲೆಯಿದೆ.

ಲೋಕೋತ್ಸವದ ಕಾರ್ಯಕ್ರಮದ ವೇದಿಕೆಯ ಮೇಲೆ ಸಾವಿರಾರು ಸುಂದರ ಕಾರ್ಯ ಚಟುವಟಿಕೆಗಳ ಸೊಬಗನ್ನು ನಾವು ಕಾಣಬಹುದಾಗಿತ್ತು. ಈ ಮೂರು ದಿನಗಳ ಕಾಲ ಹಲವು ಸ್ಫರ್ಧೆಗಳು, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು, ಪುಸ್ತಕ ಬಿಡುಗಡೆ, ಮೆರವಣಿಗೆ, ಜನಪದ ನೃತ್ಯ-ವಾದನಗಳು, ಹಾಸ್ಯ ಸಂಗಮ, ಸನ್ಮಾನಗಳು, ಸಾಹಿತ್ಯ ಸಂವಾದ, ಊಟ ಉಪಚಾರ, ಇವುಗಳೆಲ್ಲವುಗಳ ನಡುವೆ ಎದ್ದು ಕಾಣುತ್ತಿದ್ದ ಅಚ್ಚರಿಯ ಮತ್ತು ಬಹುವಾಗಿ ಮೆಚ್ಚಿಕೊಂಡ ಅಂಶವೆಂದರೆ ಕಟ್ಟುನಿಟ್ಟಾಗಿ ಸಮಯ ಪಾಲನೆ, ಎಲ್ಲಾ ಅಚ್ಚುಕಟ್ಟು, ಯಾವುದೇ ಗೊಂದಲವಿಲ್ಲ ಗಡಿಬಿಡಿಯಿಲ್ಲ.

 

 

 

 

 

ಕೊಂಕಣಿ ವಿಕಿಪೀಡಿಯಾ- ಹ್ಯಾರಿಯೆಟ್ ವಿಧ್ಯಾಸಾಗರ್ ಶ್ರಮ:

ಈ ಲೋಕೋತ್ಸವದ ಇನ್ನೊಂದು ವಿಶೇಷ ಮತ್ತು ಅಚ್ಚರಿಯ ವಿಷಯವೆಂದರೆ ಕೊಂಕಣಿ ವಿಕಿಪೀಡಿಯಾದ ಒಂದು ಕಕ್ಷಾವನ್ನು ಲೋಕೋತ್ಸವದ ಸಂತೆಯಲ್ಲಿ ಕಾಣಬಹುದಾಗಿತ್ತು. ಕೊಂಕಣಿ ಭಾಷೆಯ ಅಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನದ ನಿರಂತರ ಬಳಕೆಯಾಗಬೇಕೆಂಬ ಉದ್ದೇಶದಿಂದ ದುಡಿಯುತ್ತಿರುವ ಹ್ಯಾರಿಯೆಟ್ ವಿದ್ಯಾಸಾಗರ್ ಮೂರುದಿನಗಳ ಕಾಲವೂ ಜನರ ನಡುವೆ ಕೊಂಕಣಿ ಅಭಿವೃದ್ಧಿಯ ಕಾರ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಮಹತ್ವವನ್ನು ಸಾರುತ್ತಾ ಸುತ್ತಾಡುತ್ತಿದ್ದರು.

 

ಲೋಕೋತ್ಸವದ ಭೋಜನಶಾಲೆಯಲ್ಲಿ ಬಗೆಬಗೆಯ ಭಕ್ಷ್ಯಗಳ ಸ್ವಾದ:

ಕೊಂಕಣಿ ಲೋಕೋತ್ಸವದ ಅಡುಗೆ ಮನೆಯ ಕೀಲಿಕೈಯನ್ನು ‘ವಾಸರಿಂತು ಹಾಂವುಂ’ ಖ್ಯಾತಿಯ ಗೀತಾ ಸಿ ಕಿಣಿಯವರ ಕೈಗೆ ನೀಡಿ ಸಂಘಟಕರು ಯಶಸ್ವಿಯಾಗಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾಥ್ರಿ ಹೀಗೆ ಬಗೆಬಗೆಯ ರುಚಿಕಟ್ಟಾದ ಭೋಜನ, ಭಕ್ಷ್ಯಗಳು ನೆರೆದ ಸಾವಿರಾರು ಜನರ ನಾಲಗೆ ರುಚಿ ತಣಿಸುವಲ್ಲಿ ಗೆದ್ದಿವೆ. ಎರಡನೇ ದಿನ ಬೆಳಿಗ್ಗೆ ಶ್ಯಾವಿಗೆ ಹಾಗೂ ತೆಂಗು ಹಾಲಿನ ರಸಾಯನ, ಮಾವಿನ ಉಪ್ಪಿನಕಾಯಿ ಹಾಗೂ ತೆಂಗಿನೆಣ್ಣೆಯೊಡನೆ ಸೇರಿಸಿ ಶ್ಯಾವಿಗೆ ಚಪ್ಪರಿಸಲು ಅವಕಾಶವನ್ನೂ ಮಾಡಲಾಗಿತ್ತು ಪಕ್ಕದಲ್ಲಿಯೇ ‘ಕೊಂಲ್ಬೊ’ ಹೀಗೆ ಮೂರು ಸಾಂಪ್ರದಾಯಿಕ ಕಾಂಬಿನೇಷನ್‍ಗಳೊಂದಿಗೆ ಶ್ಯಾವಿಗೆ ಸೇರಿಸಿ ಸೇವಿಸುವ ಅವಕಾಶ ಅತಿಥಿಗಳಿಗಿತ್ತು. ಅಪರಾಹ್ನ ಪೂರಿ ಚಣಾ ಮಟರ್, ಬಿಳಿ ತೊಗರಿ ಗುಜ್ಜೆಕಾಯಿ ಗಸಿ, ಬೀನ್ಸ್ ಉಪ್ಕರಿ, ಹುರುಳಿ ಬೆಳ್ಳುಳಿ ಹುಳಿಕಟ್ಟು ಸಾರು, ಬಟಾಟೆ ಹಪ್ಪಳ, ಬಿಂಬುಳಿ ಕೆಂಪು ಉಪ್ಪಿನಕಾಯಿ, ಕೋಕಮ್ ಸಾರು ಹಾಗೂ ಖರ್ಜೂರ ಪಾಯಸ ಎಲ್ಲರ ನಾಲಗೆ ಸಂತೃಪ್ತಿಪಡಿಸಿತು. ಸಾಯಂಕಾಲ ದಿಬ್ಬಣದಲ್ಲಿ ಸಾಗಿ ಬಂದ ಸಾವಿರ ಸಾವಿರ ಮಂದಿಗೆ ಅನಾನಸು ಪುಡ್ಡಿಂಗ್, ಚಟ್ಟಂಬಡೆ, ಉಪಮ ಹಾಗೂ ಚಹಾ ಕಾಪಿ ಒದಗಿಸಿದ್ದು ದೊಡ್ಡ ಸಾಧನೆಯೇ ಸರಿ. ಎರಡನೇ ಸಂಜೆ ಊಟಕ್ಕೆ ಚಪಾತಿ ಸುವರ್ಣಗೆಡ್ಡೆ ಕೂಟು, ಅಲಸಂಡೆ ನೆಲಗಡಲೆ ಉಪ್ಕರಿ, ಬೆಳ್ಳುಳಿ ಹಾಕಿ ಪಂಚರಂಗಿ ಧಾನ್ಯದ ಸಾರು ಉಪ್ಕರಿ, ಮೈಸೂರು ಪಾಕ್ ಸೇರಿದ ರುಚಿಕಟ್ಟು ಭೋಜನ ಒದಗಿಸಲಾಯ್ತು. ಮೂರನೆಯ ದಿನ ಬೆಳಿಗ್ಗೆ ಸೆಟ್ಟ್ ದೋಸೆ, ಕೆಂಪು ಮೆಣಸಿನ ಚಟ್ನಿ, ತರಕಾರಿ ಕೂರ್ಮ ಹಾಗೂ ಚಿಕ್ಕು ಪುಡ್ಡಿಂಗ್ ದಿನದ ಕಾರ್ಯಕ್ರಮಗಳಿಗೆ ಸುಂzರÀ ನಾಂದಿ ಹಾಡಿತು. ಮಧ್ಯಾಹ್ನದ ಊಟಕ್ಕೆ ಚಪಾತಿ, ಕುಂಬಳ ಕಾಯಿ ಸಿಪ್ಪೆ ಮತ್ತು ಬಟಾಟೆ ಉಪ್ಕರಿ, ಪುಳಿ ಕೊದ್ದೆಲ್, ಹಾಗಲಕಾಯಿ ಉಪ್ಪಿನಕಾಯಿ, ಹಲಸಿನಗುಜ್ಜೆ ಸುಕ್ಕ, ಜೀರಿಗೆ ಒಳ್ಳೆ ಮೆಣಸು ಗಟ್ಟಿಸಾರು (ಕಡಿ), ಪಪ್ಪಡ (ಖಾರ ಚಪ್ಪೆ ಮಿಶ್ರಣದ ಹಪ್ಪಳ), ಗೋದಿಕಣ ಪಾಯಸ, ಎಲ್ಲರ ಮನಸೂರೈಗೈದಿತು. ಸಂಜೆಯ ಚಹಾದೊಡನೆ ಬಿಸಿಬಿಸಿ ಬಿಸ್ಕುಟ್‍ರೊಟ್ಟಿ ನೀಡಲಾಗಿತ್ತು. ರಾತ್ರಿ ಊಟಕ್ಕೆ ನೀರುದೋಸೆ, ಅಣಬೆ ಘೀರೋಸ್ಟ್, ಗೋಬಿ ಮಂಚೂರಿ, ಗುಳ್ಳಾ ರವಾಫ್ರೈ, ಅನಾನಾಸು ಮಾವಿನ ಹಣ್ಣಿನ ಸಾಸಿವೆ, ರಸಮ್, ತರಕಾರಿ ಉಪ್ಪಿನಕಾಯಿ ಅಡಗೈ, ಜಿಲೇಬಿ ಎಲ್ಲರ ನೆನಪಿನಲ್ಲಿ ಲೋಕೋತ್ಸವ ಅಚ್ಚೊತ್ತಿ ನಿಲ್ಲ್ಲುವಂತೆ ಮಾಡಿತು.

 

 

 

 

 

More Photos...

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]