Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯತಾ ವರ್ಷಾಚರಣೆಯ ಬೆಳ್ಳಿ ಹಬ್ಬ ಸರಣಿ ಕಾರ್ಯಕ್ರಮದ 2 ನೇ ಕಾರ್ಯಕ್ರಮ “ಕೊಂಕಣಿ ಭಾಷಾ-ವಿಚಾರದಾರೆ” ಕಾರ್ಯಕ್ರಮವನ್ನು ದಿನಾಂಕ : 22/9/2017 ರಂದು ಲೋಯಲಾ ಸಭಾಂಗಣ ಮುಂಡಗೋಡು ಇಲ್ಲೆ ನಡೆಸಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್ ಪಿ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ನಾಗೇಶ್ ಅಣ್ವೇಕರ್ ಕಾರ್ಯಕ್ರಮದ ಸಂಚಾಲಕತ್ವ ವಹಿಸಿದ್ದರು. “ಕೊಂಕಣಿ ಆಮ್ಚಿ ಭಾಸ್” ಮುಕ್ತ ವಿಚಾರಗೋಷ್ಠಿ, ಕವಿತಾ ವಾಚನ ಮತ್ತು ಪ್ರಶಂಸೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿದ್ಧಿ ಜನಪದ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಸದಸ್ಯರು ಭಾಗವಹಿಸಿದ್ದರು.