Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಪರಿಷತ್ ಕುಮಟಾ ಇವರ ಸಹಯೋಗದಲ್ಲಿ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮನ್ನಣೆ ದೊರೆತ 25 ವರ್ಷಗಳ ಸಂಭ್ರಮದಲ್ಲಿ “ಕೊಂಕಣಿ ಮಾನ್ಯತಾ ದಿಸಾಚೆ ರುಪ್ಯೋತ್ಸವ್” ಕಾರ್ಯಕ್ರಮವನ್ನು ದಿನಾಂಕ 20/8/2017 ರಂದು ಡಾ ರಾಜೇಂದ್ರ ಪ್ರಸಾದ ಸಭಾಭವನ, ಕುಮಟಾ ಇಲ್ಲಿ ವಿಜ್ರಂಭನೆಯಿಂದ ನಡೆಸಲಾಯಿತು. ಬೃಹತ್ ಹಾಗೂ ಮದ್ಯಮ ಕೈಗಾಗಿಕೆ ಮತ್ತು ಉ.ಕ ಜಿಲ್ಲ ಸ್ತುವಾರಿ ಸಚಿವರಾದ ಶ್ರೀ ಆರ್.ವಿ ದೇಶ್‍ಪಾಂಡೆಯವರು ಕಾರ್ಯಕ್ರಮವಾನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್. ಪಿ. ನಾಯಕ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ ಹೇಮಂತ್ ಹೆಚ್ ಭಟ್ ಅಧ್ಯಕ್ಷತೆಯಲ್ಲಿ ಕೊಂಕಣಿ ಭಾಷೆಗೆ ರಾಷ್ಟ್ರೀಯ ಮಾನ್ಯತೆ ಕುರಿತ ವಿಚಾರಗೋಷ್ಠಿ, ಶ್ರೀ ವಿಠಲದಾಸ ಕಾಮತ್ ಆಧ್ಯಕ್ಷತೆಯಲ್ಲಿ ಕೊಂಕಣಿ ಭಾಷಾಭಿವೃದ್ಧಿಯಲ್ಲಿ ಯುವಜನರ ಪಾತ್ರ ಚರ್ಚಾಗೋಷ್ಠಿ, ಕೊಂಕಣಿ ಕವಿತಾ ವಾಚನ ಹಾಗೂ ಮಹಿಳಾಗೋಷ್ಠಿ ಕಾರ್ಯಕ್ರಮಗಳು ಜರುಗಿದವು.