Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯತಾ ಬೆಳ್ಳಿ ಹಬ್ಬ ಸರಣಿ ಕಾರ್ಯಕ್ರಮದ 3 ನೇ ಕಾರ್ಯಕ್ರಮ “ಕೊಂಕಣಿ ಜಾನಪದ ಕಲಾ ಸಾಹಿತ್ಯೋತ್ಸವ್” ಕಾರ್ಯಕ್ರಮವನ್ನು ದಿನಾಂಕ 23/9/2017 ರಂದು ಮೈತ್ರಿ ಸಭಾಭವನ, ತೇಲಂಗಾರ, ಯಲ್ಲಾಪುರ ಇಲ್ಲಿ ನಡೆಸಿತು. ವಜ್ರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೀಪಾ ಕುರ್ಡೇಕರ್ ಕಾರ್ಯಕ್ರಮ್ ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್ ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಹಿರಿಯ ಜಾನಪದ ಕಲಾವಿದರೊಂದಿಗೆ ಸಂವಾದ, ಕವಿತಾ ವಾಚನ ಹಾಗೂ ಪ್ರಶಂಸೆ, ಕೊಂಕಣಿ ಜಾನಪದ ವಿಚಾರಗೋಷ್ಠಿ, ಕೊಂಕಣಿ ಜಾನಪದ ಪ್ರಾತ್ಯಕ್ಷಿಕೆಗಳು ನಡೆದವು, ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಸದಸ್ಯರು ಭಾಗವಹಿಸಿದ್ದರು.