Print

ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಮಾನ್ಯತಾ ಬೆಳ್ಳಿ ಹಬ್ಬ ಸರಣಿ ಕಾರ್ಯಕ್ರಮದ 4 ನೇ ಕಾರ್ಯಕ್ರಮ “ಕೊಂಕಣಿ ಭಾಷಾ ಕಾರ್ಯಾಗಾರ’ ದಿನಾಂಕ : 24/9/2017 ರಂದು ಸರ್ಕಾರಿ ಪ್ರೌಡಶಾಲಾ ಸಭಾಭವನ, ಗೇರುಸೊಪ್ಪದಲ್ಲಿ ನಡೆಸಲಾಯಿತು. ಹೊನ್ನಾವರ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಉಲ್ಲಾಸ ನಾಯ್ಕರವರು ಕಾರ್ಯಕ್ರಮವಾನು ದೀಪಬೆಳಗಿಸಿ ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಭಾಷೆಯ ಇತಿಹಾಸ, ಕೊಂಕಣಿ ಗದ್ಯ ರಚನೆ, ಕೊಂಕಣಿ ಕಾವ್ಯ ರಚನೆ ಕುರಿತಾದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಕೊಂಕಣಿ ಜಾನಪದ ಕಲೆಗಳಾದ ಗುಮಟಾ ಫಾಂಗ್, ಕಾಡುನೃತ್ಯಗಳನ್ನು ಆಯೋಜಿಸಲಾಗಿತ್ತು.