Print

ಕೊಂಕಣಿ ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ದೊರೆತ 25 ವರ್ಷಗಳ ಸಂಭ್ರಮದ ಸರಣಿ ಕಾರ್ಯಕ್ರಮದ 5 ನೇ ಕಾರ್ಯಕ್ರಮವನ್ನು ದಿನಾಂಕ 15-10-2017 ರಂದು ಸಾಂಸ್ಕೃತಿಕ ಸಮುಚ್ಚಯ ಭವನ, ರಂಗಾಯಣ ಧಾರವಾಡ ಇಲ್ಲಿ ನಡೆಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದಲಿಂಗೇಶ ರಂಗಣ್ಣವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದಿನ ಜನಾಂಗಕ್ಕೆ ಸಂಸ್ಕೃತಿ ಉಳಿಯಲು ಭಾಷೆ ಪ್ರಾಮುಖ್ಯತೆ ಹೊಂದಿದೆ, ಕೊಂಕಣಿ ವೈವಿದ್ಯತೆಯಿಂದ ಕೂಡಿದ ಭಾಷೆಯಾಗಿದೆ ಎಂದರು. ಕಿಟೆಲ್ ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾಪಕ ಡಾ ಎಂ ವೈ ಸಾವಂತ ಮಾತನಾಡಿ, ವಿವಿಯಲ್ಲಿ ಕೊಂಕಣಿ ಅದ್ಯಯನಪೀಠ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಸಾಧನಾ ಮಾನವ ಹಕ್ಕುಗಳ ಸಂಸ್ಥೆಯ ಸಂಸ್ಥಾಪಕಿ ಡಾ ಇಸಬೆಲ್ಲಾ ಝೇವಿಯರ್ ಮಾತನಾಡಿದರು.

ಕೊಂಕಣಿ ಭಾಷಾ ಉಪನ್ಯಾಸ, ಕವನ ವಾಚನ ಮತ್ತು ಪ್ರಶಂಸೆ, ಕೊಂಕಣಿ ಹಾಡು ನೃತ್ಯ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮಲ್ಲಿ ಕೃಷ್ಣಾನಂದ ಮಹಾಲೆ ಉಪಸ್ಥಿತರಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ದೇವದಾಸ್ ಪೈ ಸ್ವಾಗತಿಸಿದರು, ಸದಸ್ಯ ಸಂಚಾಲಕ ಸಂತೋಷ ಮಹಾಲೆ ವಂದಿಸಿದರು.