Print

ಕೊಂಕಣಿ ಸಾಹಿತ್ಯ ಅಕಾಡೆಯ ಮಾನ್ಯತಾ ರಜತ ಮಹೋತ್ಸವದ ಸರಣಿ ಕಾರ್ಯಕ್ರಮದ 6ನೇ ಕಾರ್ಯಕ್ರಮ ಕೊಂಕಣಿ ಲೋಕ್‍ವೇದ್ ಸಂಸಾರ್ ದಿನಾಂಕ 27-10-2017ರಂದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕುಣಬಿ ಭವನದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್ ಎಲ್ ಭಟ್ ರವರು ಕಾರ್ಯಕ್ರಮ ಉದ್ಘಾಟಿಸಿ ಭಾಷೆಗಳು ಉಳಿಯಬೇಕು. ಭಾಷೆಗಳಲ್ಲಿರುವ ಸಂಸ್ಕೃತಿ ಸಾಹಿತ್ಯವನ್ನು ಸಂರಕ್ಷಿಸಬೇಕಾಗಿದೆ ಎಂದರು. ಕೊಂಕಣಿ ಸಾಹಿತ್ಯ ಅಕಾಡೆಮಿ ರಾಜ್ಯದಲ್ಲಿ ಸಂಸ್ಕೃತಿ, ಸಾಹಿತ್ಯ ಮತ್ತು ಭಾಷೆಯನ್ನು ಉಳಿಸುವ ಕೆಲಸ ಮಾಡುತ್ತಿದೆ. ಶಾಲಾ ಕಾಲೇಜುಗಳಲ್ಲಿ ಮೂರನೇಯ ವಿಷಯವನ್ನಾಗಿ ಕೊಂಕಣಿ ಕಲಿಸಲು ಅವಕಾಶವಿದ್ದು ಇದರ ಸದುಪಯೋಗ ಪಡೆಯಬೇಕೆಂದು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಆರ್.ಪಿ ನಾಯ್ಕ್ ಹೇಳಿದರು.

 

 

ಕೊಂಕಣಿ ಭಾಷೆ ಜಾನಪದ ಹಾಗೂ ಸಮಾಜದ ಬಗ್ಗೆ ಪಿ.ವಿ ದೇಸಾಯಿ, ಸುಭಾಷ ಗಾವಡ, ಶಿಲ್ಪಾ ವರ್ಣೇಕರ ಉಪನ್ಯಾಸ ನೀಡಿದರು. ಗೋಪಾಲ ಗೌಡ ಜಾನಪದ ಸಾಹಿತ್ಯ ಸಂಸ್ಕೃತಿಯ ಪರಿಚಯ ನೀಡಿದರು. ಕಾರ್ಯಕ್ರಮದಲ್ಲಿ ತಾ. ಪಂ ಅಧ್ಯಕ್ಷೆ ನರ್ಮದಾ ಪಾಟ್ನೆಕರ, ಜಿಪಂ ಸದಸ್ಯ ರಮೇಶ ನಾಯ್ಕ, ಗ್ರಾ ಪಂ ಅಧ್ಯಕ್ಷೆ ಶೈಲಾ ನಾಯ್ಕ, ವಿನೋದ ವಿರಾಶಿ, ಅಕಾಡೆಮಿ ಸದಸ್ಯ ನಾಗೇಶ ಅಣ್ವೇಕರ ಉಪಸ್ಥಿತರಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ದೇವ್‍ದಾಸ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿ ಸದಸ್ಯ ದಯಾನಂದ ಗಾವಡ ಸ್ವಾಗತಿಸಿದರು. ಸಾಲು ಡಯಾಸ್ ನಿರೂಪಿಸಿದರು, ಜಯವಂತ ಗಾವಡ ವಂದಿಸಿದರು. ಕೊಂಕಣಿ ಜನಪದ ಕಲೆಯನ್ನು ಬಿಂಬಿಸುವ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.