Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಯ ಕೊಂಕಣಿ ಮಾನ್ಯತಾ ರಜತ ಮಹೋತ್ಸವದ ಸರಣಿ ಕಾರ್ಯಕ್ರಮದ 7 ನೇ ಕಾರ್ಯಕ್ರಮ ಕೊಂಕಣಿ ಸಂಭ್ರಮ್ ದಿನಾಂಕ 29-10-2017ರಂದು ಪುತ್ತೂರಿನ ಶ್ರೀ ಭುವನೇಂದ್ರ ಕಲಾಭವನದಲ್ಲಿ ನಡೆಸಲಾಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಆರ್. ಪಿ ನಾಯಕ್ ಮಾತನಾಡಿ ಕೊಂಕಣಿ ಸಾಹಿತ್ಯ ಭಾಷೆ ಸಂಸ್ಕೃತಿಯ ಅಭಿವೃದ್ದಿಯಲ್ಲಿ ಕೊಂಕಣಿಗರು ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದರು.

 

 

ಅಕಾಡೆಮಿಯ ರಿಜಿಸ್ಟ್ರಾರ್ ಬಿ ದೇವದಾಸ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪುತ್ತೂರು ನಗರ ಸಭೆ ಸದಸ್ಯ ಸುಜೀಂದ್ರ ಪ್ರಭು, ನಗರ ಸಭಾ ಸದಸ್ಯ ಶ್ರೀಮತಿ ಶೈಲಾ ಪೈ, ಕ.ಸಂ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಬಿ ಚಂದ್ರಹಾಸ ರೈ, ವಂ ಫಾ| ರಿತೇಶ್ ರೋಡ್ರಿಗಸ್, ಶ್ರೀ ರಾಧಾಕೃಷ್ಣ ಭಕ್ತಾ, ಶ್ರೀ ಎಚ್ ಎಂ ಮುಬೀನ್, ಶ್ರೀ ಕೊಗ್ಗನಾಯ್ಕ, ಶ್ರೀ ಗಿರಿಧರ ಸಾರಸ್ವತ್, ಶ್ರೀ ಸುನಿಲ್ ಬೋರ್ಕರ್, ಶ್ರೀಮತಿ ಆಶಾ ದಿನೇಶ್ ನಾಯಕ್, ಶ್ರೀಮತಿ ಮಲ್ಲಿಕಾ, ಶ್ರೀ ಉಲ್ಲಾಸ್ ಪೈ, ಶ್ರೀ ದಿನೇಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕವಿತಾ ವಾಚನ ಮತ್ತು ಪ್ರಶಂಸೆ, ಕೊಂಕಣಿ ಸಾಂಪ್ರದಾಯಿಕ ಆಹಾರ ಹಾಗೂ ಉಡುಗೆ ತೊಡುಗೆಗಳ ಪ್ರದರ್ಶನ, ಸಾಂಪ್ರದಾಯಿಕ ತಿಂಡಿತಿನಿಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ವಿನೋದಾವಳಿಗಳು ನಡೆದವು.