Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 1994 ರಲ್ಲಿ ಸ್ಥಾಪನೆಗೊಂಡು, ಕೊಂಕಣಿಗರ ಕೇಂದ್ರವೆನಿಸಿದ್ದ ಮಂಗಳೂರು ನಗರದಲ್ಲಿ ಕೇಂದ್ರಸ್ಥಾನ ಹೊಂದಿ, ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಆದರೆ ಅಕಾಡೆಮಿಗೆ ಈ ವರೆಗೆ ಸ್ವಂತ ಕಟ್ಟಡವಿರುವುದಿಲ್ಲ, ಬಾಡಿಗೆ ವ್ಯವಸ್ಥೆಯಲ್ಲಿಯೇ ಮುಂದುವರಿಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕೊಂಕಣಿ ಜನರು ಮಂಗಳೂರು-ಉಡುಪಿ-ಭಟ್ಕಳ-ಹೊನ್ನಾವರ-ಕುಮಟಾ-ಅಂಕೋಲಾ-ಕಾರವಾರದಂತಹ ಕರಾವಳಿ ಪಟ್ಟಣಗಳಲ್ಲಿ ಹಾಗೂ ಸಮಾಂತರವಾಗಿ ಧಾರವಾಡ-ದಾಂಡೇಲಿ-ಯಲ್ಲಾಪುರ-ಶಿರಸಿ-ಸಿದ್ಧಾಪುರ-ಶಿವಮೊಗ್ಗದಂತಹ ಸನಿಹದ ಪ್ರದೇಶಗಳಲ್ಲಿ ವಾಸಿಸುತ್ತಾರೆ.

 

 

ಈ ಕೊಂಕಣಿ ವಲಯವು ಸುಮಾರು 500 ಕಿ.ಮೀ ನಷ್ಟು ದೀರ್ಘವಿದ್ದು, ಹೊನ್ನಾವರ-ಕುಮಟಾ ಪ್ರದೇಶವು ಸರಿಸುಮಾರಾಗಿ ಭೌಗೋಳಿಕ ಕೇಂದ್ರವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿಯ ಸೇವಾವಲಯಕ್ಕನುಗುಣವಾಗಿ, ಸಭಾಭವನ-ಮಾಹಿತಿಕೇಂದ್ರ-ವಾಚನಾಲಯ-ಸಂಶೋಧನಾ ತರಬೇತಿ ಕೇಂದ್ರ ಇವುಗಳನ್ನೊಳಗೊಂಡ ಒಂದು ಸುಸಜ್ಜಿತ ಕೊಂಕಣಿ ಭವನದ ನಿರ್ಮಾಣ ತುರ್ತಾಗಿ ಆಗಬೇಕಿದೆ.ಈ ಬಗ್ಗೆ ಕರಾವಳಿ ಕೊಂಕಣಿಗರ ಭೌಗೋಳಿಕ ಕೇಂದ್ರವೆನಿಸುವ ಸೂಕ್ತ ಪಶ್ಬಿಮ ಕರಾವಳಿ ಪಟ್ಟಣದಲ್ಲಿ ಒಂದು ನಿವೇಶನವನ್ನು ಮಂಜೂರು ಮಾಡಿಕೊಡುವ ಬಗ್ಗೆ ಮಾನ್ಯ ಶ್ರೀ ರಮಾನಾಥ ರೈ, ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಮತ್ತು ಪರಿಸರ ಜೀವಿ ಶಾಸ್ತ್ರ ಇಲಾಖೆ, ಕರ್ನಾಟಕ ಸರಕಾರ ಇವರಿಗೆ ದಿನಾಂಕ 30.10.2017 ರಂದು ಮನನಿಯನ್ನು ಸಲ್ಲಿಸಲಾಯಿತು.