Print

ಭಾರತ ಸಂವಿಧಾನದ 8ನೇ ಪರಿಚ್ಛೇದಲ್ಲಿ ಕೊಂಕಣಿ ಭಾಷೆಯು ಸೇರ್ಪಡೆಗೊಂಡು ರಾಷ್ಟ್ರ ಮಾನ್ಯತೆ ಪಡೆದು 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಕಾಡೆಮಿಯು 2017-18 ವರ್ಷವನ್ನು “ಕೊಂಕಣಿ ಮಾನ್ಯತಾ ಬೆಳ್ಳಿ ಹಬ್ಬ ವರ್ಷ” ವೆಂದು ಆಚರಿಸುತ್ತಿದೆ. ಈ ಪ್ರಯುಕ್ತ 25 ಕ್ಷೇತ್ರಗಳಿಗೆ ಸಂಬಂಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಕೊಂಕಣಿ ಕ್ಯಾಂಪಸ್ ಕಾರ್ಯಕ್ರಮದಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನ ಕೊಂಕಣಿ ಸ್ನಾತಕೋತ್ತರ ವಿಭಾಗದ ಸಹಕಾರದೊಂದಿಗೆ ದಿನಾಂಕ 4.11.2017 ರಂದು “ಉಪನ್ಯಾಸ್-ಪ್ರಾತ್ಯಕ್ಷಿಕಾ ಸತ್ರಾಂ” ಕಾರ್ಯಕ್ರಮವನ್ನು ಡಾ ಶಿವರಾಮಕಾರಂತ ಸಭಾಭವನದಲ್ಲಿ ನಡೆಸಲಾಯಿತು.

 

 

 

ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಾಷಿಣಿ ಶ್ರೀವತ್ಸ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್. ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ಟೋಫರ್ ನಿನಾಸಮ್ ಮತ್ತು ತಂಡ, ಪದುವ ರಂಗ ಅಧ್ಯಯನ ಕೇಂದ್ರ ಇವರಿಂದ “ಕೊಂಕಣಿ ರಂಗಭೂಮಿಯಲ್ಲಿನ ಸಾಧ್ಯತೆ” ಕುರಿತು ಪ್ರಾತ್ಯಕ್ಷಿಕೆ, ಶ್ರೀ ಮೂರ್ತಿ ವಿ.ಎಸ್ ಮತ್ತು ತಂಡದವರು “ಕೊಂಕಣಿ ಪಾರಂಪರಿಕ ರಂಗ ಸಂಗೀತ” ಕಾರ್ಯಕ್ರಮ ನಡೆಸಿಕೊಟ್ಟರು. ಕೊಂಕಣಿ ಎಂ.ಎ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಅಕಾಡೆಮಿಯ ರಿಜಿಸ್ಟ್ರಾರ್ ಡಾ.ಬಿ.ದೇವದಾಸ್ ಪೈ, ಸದಸ್ಯರಾದ ಶ್ರೀ ಸಂತೋಷ್ ಮಹಾಲೆ, ಶ್ರೀ ರಾಮನಾಥ ಮೇಸ್ತ, ಎಂ.ಎ ಕೊಂಕಣಿ ವಿಭಾಗದ ಸಂಯೋಜಕರಾದ ಶ್ರೀ ಅರವಿಂದ ಶಾನಭಾಗ್ ಭಾಗವಹಿಸಿದರು.