Print

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ ಹತ್ತನೇ ಕಾರ್ಯಕ್ರಮವನ್ನು ದಿನಾಂಕ 25/11/2017 “ಕೊಂಕಣಿ ವಿದ್ಯಾರ್ಥಿ ಪ್ರತಿಭಾ ಸಮ್ಮಿಲನ್”ಯನ್ನಾಗಿ ಉಳಗಾದ ಮಹಾಸತಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು. ಶ್ರೀ ಸುನಿಲ್ ದತ್ತ ಗಾಂವಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾಂತಾ ಬಾಂದೇಕರ, ಶ್ರೀಮತಿ ಪ್ರಮೀಳ ಸುರೇಶ ನಾಯ್ಕ, ಶ್ರೀಮತಿ ಅಂಜನಾ ಉದಯ ಉಳಗೇಕರ, ಶ್ರೀ ರಾಮಕೃಷ್ಣ್ ಯು, ಅಕಾಡೆಮಿಯ ಸದಸ್ಯರಾದ ಶ್ರೀ ನಾಗೇಶ ಅಣ್ವೇಕರ್, ಶ್ರೀ ಸುಮಂಗಲ ಸದಾನಂದ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.