Print

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ ಹನ್ನೊಂದನೇ ಕಾರ್ಯಕ್ರಮವನ್ನು ದಿನಾಂಕ 26.11.2017 ರಂದು “ಕೊಂಕಣಿ ತರಂಗ್”ಯನ್ನಾಗಿ ಶಿರೂರಿನ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಆಚರಿಸಲಾಯಿತು. ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಕೆ ಗೋಪಾಲ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿರೂರು ಗ್ರಾಮ ಪಂಚಾಯ ಅಧ್ಯಕ್ಷರಾದ ಶ್ರೀಮತಿ ದಿಲ್‍ಶಾದ್ ಬೇಗಂ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕಾಪ್ಸಿನೂರ್ ಮಹಮ್ಮದ್, ಶ್ರೀ ನಾಗೇಶ್ ಮೇಸ್ತ, ಶ್ರೀ ಬಾಬುರಾಮ ಕಾಮತ್, ಶ್ರೀ ಮೋಹನ್ ರೇವಣ್ಕರ್, ಶ್ರೀ ನಾಗಪ್ಪ ಮರಾಠಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಶ್ರೀಕಾಂತ್ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ರಾಮನಾಥ ಎ ಮೇಸ್ತ ಕಾರ್ಯಕ್ರಮದ ಸಂಚಾಲಕತ್ವ ವಹಿಸಿದ್ದರು.