Print

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ ಹನ್ನೆರಡನೇ ಕಾರ್ಯಕ್ರಮವನ್ನು ದಿನಾಂಕ 02.12.2017 ರಂದು “ಕೊಂಕಣಿ ಸಾಂಸ್ಕೃತಿಕ ಸಾಂಜ್“ ನ್ನು ಸರಸ್ವತಿ ಸದನ, ಜಿ.ಎಸ್.ಬಿ ಸಮಾಜ ಮಂದಿರ, ಜೆ.ಸಿ.ನಗರ ಹುಬ್ಬಳ್ಳಿ ಇಲ್ಲಿ ಆಚರಿಸಲಾಯಿತು.

 

 

 

ಉದ್ಯಮಿಗಳಾದ ಶ್ರೀ ರವಿಕಾಂತ ಶೇಜವಾಡಕರ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದಯವಾಣಿ ಹುಬ್ಬಳ್ಳಿಯ ಶ್ರೀ ವೆಂಕಟೇಶ ಹುಬ್ಬಳ್ಳಿ, ಡಾನ್‍ಬೋಸ್ಕೊ ಅಕಾಡೆಮಿಯ ನಿರ್ದೇಶಕರಾದ ಫಾ| ಪ್ರಾನ್ಸಿಸ್ ಸಿಲ್ವೆರಾ, ಹುಬ್ಬಳ್ಳಿ ಜಿ.ಎಸ್.ಬಿ ಸಮಾಜದ ಮಾಜಿ ಕಾರ್ಯದರ್ಶಿಗಳಾದ ಶ್ರೀ ಯು.ಜಿ ಶಾನಭಾಗ, ಹುಬ್ಬಳ್ಳಿ ದೈವಜ್ಞ ಸಮಾಜದ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ವರ್ಣೇಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕು ದೀಪಾಲಿ ಶೆಣೈ ಮತ್ತು ತಂಡದವರು ಯೋಗಾಸನ ಪ್ರದರ್ಶನ ನಡೆಸಿಕೊಟ್ಟರು, ಶ್ರೀ ವಿಠ್ಠಲದಾಸ ಕಾಮತರ ಅಧ್ಯಕ್ಷತೆಯಲ್ಲಿ ನಡೆದ ಕೊಂಕಣಿ ಭಾಷೆ, ಸಾಹಿತ್ಯ ಜಾನಪದ, ಸಂಸ್ಕೃತಿಗಳ ಅಭಿವೃದ್ಧಿ ಕುರಿತಾದ ವಿಚಾರಗೋಷ್ಠಿ ನಡೆಯಿತು, ಶ್ರೀ ಅರುಣ ನಾಯಕ ಇವರ ಅಧ್ಯಕ್ಷತೆಯಲ್ಲಿ ಕಾವ್ಯಸಂಭ್ರಮು ಕವಿತಾ ವಾಚನ ನಡೆಯಿತು. ಕಾರ್ಯಕ್ರಮದಲ್ಲಿ ಅಂತಿಮವಗಿ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನಡೆಯಿತು. ಶ್ರೀ ಆರ್ಗೋಡು ಸುರೇಶ್ ಶೆಣೈ ರವರು ಕಾರ್ಯಕ್ರಮ ನಿರೂಪಿಸಿದರು.