Print

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ 14 ನೇ ಕಾರ್ಯಕ್ರಮ “ಕೊಂಕಣಿ ಕಿನಾರೊ” ವನ್ನು ದಿನಾಂಕ 03.12.2017 ರಂದು ಸಾಸ್ತಾನ ಕೋಡಿತಲೆ ಶಾಲಾವಠಾರದಲ್ಲಿ ನಡೆಸಲಾಯಿತು.

 

 

 

 

ಅಜಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀ ಬಿ. ಮಾಧವ ಖಾರ್ವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್. ಪ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಡಿಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕು| ರಂಜನಿ, ಕೋಡಿತಲೆ ಖಾರ್ವಿ ಸಮಾಜದ ಮುಖಂಡರಾದ ಶ್ರೀ ರಾಮ್‍ದಾಸ್ ಪಟೇಲ್, ಕೊಂಕಣಿ ಖಾರ್ವಿ ಕೋಡಿ ಕನ್ಯಾನ ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಖಾರ್ವಿ, ಕೊಂಡಿತಲೆ ಘಟಕದ ಅಧ್ಯಕ್ಷರಾದ ಶ್ರೀ ಕೆ ಬಸವ ಖಾರ್ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೊಂಕಣೀ ಖಾರ್ವಿ ಸಮಾಜ ಕೋಡಿತಲೆ ಮತ್ತು ಕೋಡಿಕನ್ಯಾನ ಘಟಕದ ಸದಸ್ಯರಿಂದ ತೋಕೆಯ ನೃತ್ಯ, ಕಿರು ನಾಟಕ “ಸಿತಾ ಮೆಡ್ಕಿ”, ಹೋಳಿ ನೃತ್ಯ, ಗುಮ್ಟೆ ಮೇಳ, ಹಾಗೂ ಮರೋಲಿ ಕಾರ್ಯಕ್ರಮ ಪ್ರದರ್ಶನ ನಡೆಯಿತು.