Print

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ 15 ನೇ ಕಾರ್ಯಕ್ರಮ “ಕೊಂಕಣಿ ಚಿಂತನಾ” ವನ್ನು ದಿನಾಂಕ 09-12-2017 ರಂದು ಪುತ್ತೂರಿನ ಸುಕೃತೀಂದ್ರ ಕಲಾ ಮಂದಿರದಲ್ಲಿ ನಡೆಸಲಾಯಿತು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ರಾಧಾಕೃಷ್ಟ ಭಕ್ತ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿಕೊಟ್ಟು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 

 

 

 

ಅಕಾಡೆಮಿಯ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂವಿಧಾನದಲ್ಲಿ ಮಾನ್ಯತೆ ಪಡೆದಿರುವ ಕೊಂಕಣಿ ಭಾಷಿಕರಾದ ನಾವು ಹೆಮ್ಮಿಪಡಬೇಕೆಂದರು. ರಂಗ ಕಲಾವಿದರಾದ ಶ್ರೀಮತಿ ಮರೋಳಿ ಸಬಿತಾ ಕಾಮತ್, ಕೊಡಿಯಾಳ್ ಖಬರ್ ಸಂಪಾದಕರಾದ ಶ್ರೀ ವೆಂಕಟೇಶ ಬಾಳಿಗಾ, ಜಿ.ಎಸ್.ಬಿ ಅಭಿವ್ರುದ್ಧಿ ಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಪ್ರಭು, ಹಿರಿಯ ರಂಗ ಕಲಾವಿದೆ ಶ್ರೀಮತಿ ಕುಸುಮ ಸುರೇದ್ರ ಪೈ, ಪುತ್ತೂರ ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸುಮನಾಅ ಪ್ರಭು, ಶ್ರೀ ಉಲ್ಲಾಸ್ ಪೈ, ಕು| ಮಹಾಲಸಾ ಪೈ ಹಾಗೂ ಮಾ| ಸುಪ್ರೀತ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೂಜಾನಾಯಕ್ ತಂಡದವರಿಂದ ಸಮೂಹ ನೃತ್ಯ, ಪೂಜಾ ಪ್ರಭು ತಂಡದವರಿಂದ ಪ್ರಹಸನ, ನಯನಾ ಹೆಗ್ಡೆ ತಂಡದವರಿಂದ ಗೀತಗಾಯನ, ಹರಿಣಿ ಪೈ ತಂಡದವರಿಂದ  ಸಮೂಹ ನೃತ್ಯ, ಹಾಗೂ ಪ್ರೀತೇಶ್ ತಂಡದವರಿಂದ ನೃತ್ಯ ರೂಪಕ ನಡೆಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ದಾಮೋದಾರ್ ಭಂಡಾರ್ಕರ್ ಕಾರ್ಯಕ್ರಮದ ಸಂಚಾಲಕತ್ವ ವಹಿಸಿದ್ದರು.