Print

ಡಿ. 15, 2017: ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ 9 ನೇ ಕಾರ್ಯಕ್ರಮ “ಕೊಂಕಣಿ ಭಾಷಾ ವಿಚಾರಧಾರ” ವನ್ನು ದಿನಾಂಕ 15.12.2017 ರಂದು ಮಳಗಿಯ ಕೆ ಹನುಮಂತ ಪಾಟೀಲ ಸಭಾಭವನದಲ್ಲಿ ನಡೆಸಲಾಯಿತು. ಶ್ರೀ ಅರವಿಂದ ಗುಡವಿ, ನಿವೃತ್ತ ಶಿಕ್ಷಕರು ಕಾಯಕ್ರಮವನ್ನು ಉದ್ಘಾಟಿಸಿ ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲಾ ಕೊಂಕಣಿಗರು ಒಂದಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಳಗಿ ಗ್ರಾಮ ಪಂಚಾಯತ ಅಧ್ಯಕ್ಷರಾ ಶ್ರೀಮತಿ ರೇಖಾ ಅಡಂಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

 

 

 

 

 

ಕಾರ್ಯಕ್ರಮದ ಅಂಗವಾಗಿ ಶ್ರೀ ಮಧುಕರ ಶೇಟ್ ಅಧ್ಯಕ್ಷರು ವಿ.ಎಸ್.ಎಸ್. ಇವರ ಅಧ್ಯಕ್ಷತೆಯಲ್ಲಿ ಕೊಂಕಣಿ ಭಾಷಾ ಸಾಹಿತ್ಯ ವಿಕಸನ ಕುರಿತಾದ ವಿಚಾರಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಶ್ರೀ ಕೃಷ್ಣಮೂರ್ತಿ ನಾಡಿಗ, ಶ್ರೀ ನಾಗರಾಜ ಅಡಂಗಿ, ಶ್ರೀಮತಿ ಅಣುಪಮಾ ಹೊನ್ನಾವರ, ಪಿ.ಟಿ ಪಟ್ಟಣ ಸೆಟ್ಟಿ, ಶ್ರೀ ರಂಗನಾಥ ನಾಡಿಗ,ಶ್ರೀಮತಿ ಪದ್ಮಾ ವಿ ಶೇಟ ಸಾಥ್ ನೀಡಿದರು. ಆರ್. ಎಂ ಶೇಟ್ ಇವರ ಅಧ್ಯಕ್ಷತೆಯಲ್ಲಿಕವಿತಾ ವಾಚನ ಹಮ್ಮಿಕೊಂಡಿದ್ದು ಶ್ರ್ರೀಮತಿ ಜಯಶ್ರೀ ನಾಯಕ್, ಶ್ರೀ ರಾಘವೇಂದ್ರ ಗುಡು, ಶ್ರೀ ವಾಸುದೇವ ಶಾನಭಾಗ, ಶ್ರೀಮತಿ ರೀಟಾ ಅಂತೋನಿ, ಶ್ರೀ ಜಾಹ್ನವಿ ಶೇಟ್, ಶ್ರೀ ದಿನೇಶ್ ವರ್ಣೇಕರ್ ಹಾಗೂ ಆದಿತ್ಯ ಚೇತನ ಗುಡುವಿ ಕವಿತಾ ವಾಚನ ಮಾಡಿದರು. ಸಾಂಸ್ಕ್ರೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಂಜುನಾಥ ಹೆಗಡೆ ಪಂಗಡದವರಿಂದ ಯಕ್ಷಗಾನ ತಾಳಮದ್ದಲೆ ಏರ್ಪಡಿಸಲಾಗಿತ್ತು.