Print

ಡಿ. 17, 2017: ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ 17ನೇ ಕಾರ್ಯಕ್ರಮ “ಗಡಿನಾಡು ಕೊಂಕಣಿ ಸಂಬ್ರಮ”ವನ್ನು ದಿನಾಂಕ 17-12-2017 ರಂದು ಕುಂಬಳೆಯ ಸಂತ ಮೋನಿಕಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಸಲಾಯಿತು.

 

 

 

 

 

ಶ್ರೀಮದ್ ಅನಂತೇಶ್ವರ ದೇವಸ್ಥಾನದ ಅಧ್ಯಕ್ಷರಾದ ಡಾ ಅನಂತ ಕಾಮತ್ ಉದ್ಘಾಟಿಸಿದರು. ಸಂತ ಮೋನಿಕಾ ದೇವಾಲಯದ ಗುರುಗಳಾದ ರೆ.ಫಾ. ಮಾರ್ಷಲ್ ಸಲ್ಡಾನ ಕ್ರಿಸ್‍ಮಸ್ ಕೇಕ್ ಕತ್ತರಿಸುರ್ವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಯಿ ಮಂದಿರದ ಅಧ್ಯಕ್ಷರಾದ ಶ್ರೀ ಅಂಪಾ ನಾಯಕ್, ಸಂತ ಮೋನಿಕಾ ದೇವಾಲಯದ ಉಪಾಧ್ಯಕ್ಷರಾದ ಶ್ರೀ ಥೋಮಸ್ ಕ್ರಾಸ್ತಾ, ವೀರವಿಠಲ ದೇವಸ್ಥಾನದ ಮೊಕ್ತೇಸರರಾದ ಶ್ರೀ ನಾರಾಯಣ ಪ್ರಭು, ಶ್ರೀ ಫೆಲಿಕ್ಸ್ ಕ್ರಾಸ್ತಾ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಟಲತಾ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರದಲ್ಲಿ ಮಕ್ಕಳ ಕವಿತಾ ವಾಚನ, ಸಮೂಹಗಾಯನ, ಏಕವ್ಯಕ್ತಿ ನೃತ್ಯ,ಗಾಯನ, ಸಮೂಹ ನೃತ್ಯ ಹಾಗೂ ಕೊಂಕಣಿಗರ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅಕಾಡೆಮಿಯ ಸದಸ್ಯರಾದ ಶ್ರೀ ಲಕ್ಷ್ಮಣ ಪ್ರಭು ಕಾರ್ಯಕ್ರಮದ ಸಂಚಾಲಕತ್ವ ವಹಿಸಿಕೊಂಡಿದ್ದರು.