Print

ಡಿ. 19, 2017: ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ 18ನೇ ಕಾರ್ಯಕ್ರಮ “ಕೊಂಕಣಿ ಸುರಭಿ ಕಾರ್ಯಕ್ರಮ” ವನ್ನು ದಿನಾಂಕ 19-12-2017 ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ಕೊಂಕಣಿ ಸಂಸಾರ ಪ್ರತಿಷ್ಠಾನ(ರಿ) ಮಣಿಪಾಲ ಇವರ ಸಹಯೋಗದಲ್ಲಿ ನಡೆಸಲಾಯಿತು.

 

 

 

 

 

ಕೊಂಕಣಿ ಸಂಸಾರ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ. ಹೆಚ್ ಶಾಂತಾರಾಂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರದಲ್ಲಿ ಶ್ರೀ ವಿದ್ಯಾವಂತ ಆಚಾರ್ಯ-ಕೊಂಕಣಿ ಮಾತೃಭಾಷೆಯ ಉಗಮ ಮತ್ತು ಸಂಪನ್ನತೆ ಕುರಿತು ಹಾಗೂ ಶ್ರೀ ಯು.ಎಸ್ ಶೆಣೈಯವರು ಕೊಂಕಣಿ ಭಾಷೆ ಮತ್ತು ಭಾಷಾ ಅಭಿವೃದ್ಧಿ ಕುರಿತಂತೆ ಉಪನ್ಯಾಸ ನಡೆಸಿಕೊಟ್ಟರು. ಕೆ. ಶಾರದಾ ಭಟ್ ಅಧ್ಯಕ್ಷತೆಯಲ್ಲಿ ಕವಿತ ವಾಚನ ಮತ್ತು ವಿಮರ್ಶೆ ನಡೆಯಿತು. ಕೆ ತಾರಾ ಭಟ್ ಅಧ್ಯಕ್ಷತೆಯಲ್ಲಿ ಬಾಲ ಕವಿತಾ ವಾಚನ ಮತ್ತು ಕಥಾ ವಾಚನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಂಕಣಿ ಭಜನೆ, ಗೊಂದೊಳ ನೃತ್ಯ, ಹೋಳಿ ನೃತ್ಯ, ಸಿದ್ದಿ ಜಾನಪದ ನೃತ್ಯ ಆಯೋಜಿಸಲಾಗಿತ್ತು.