Print

ಡಿ. 23, 2017: ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತು 25 ವರ್ಷ ಸಂದ ಸಲುವಾಗಿ 2017-18 ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ರಜತ ಮಹೋತ್ಸವ ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತ ಬರುತ್ತಿದ್ದು. ಸರಣಿಯ 20ನೇ ಕಾರ್ಯಕ್ರಮ “ಕೊಂಕಣಿ ಮಾತೃಭಾಷಿಕಾ ಸಮಾವೇಶವನ್ನು” ವನ್ನು ದಿನಾಂಕ 23/12/2017 ರಂದು ಸಿದ್ದಾಪುರ ತಾಲೂಕು ಕೊಂಕಣಿ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಸಿದ್ಧಾಪುರದ ಶ್ರೀ ವಿದ್ಯಾಧಿರಾಜ ಕಲಾಮಂದಿರದಲ್ಲಿ ನಡೆಸಲಾಯಿತು.

 

 

 

 

 

ಸಿದ್ಧಾಪುರ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ಎ.ಎಂ ನಾಯಕ ಬೆಂಗ್ರೆ ಕಾರ್ಯಕ್ರಮ ಉದ್ಘಾಟಿಸಿ, ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಕೊಂಕಣಿಗರೆಲ್ಲರೂ ಒಂದಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೋಲಿ ರೋಜರಿ ಚರ್ಚ್‍ನ ಧರ್ಮಗುರುಗಳಾದಾ ಫಾ ಅನಾಕ್ಲಟೀಸ್ ಡಿ’ಮೆಲ್ಲೊ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮನಾ ಸತೀಶ ಕಾಮತ್, ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಮೀರಾ ಸಾಬ ಇಬ್ರಾಹಿಂ ಸಾಬ, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ಶಂಕರ ಶೇಟ, ಖಾರ್ವಿ ಸಮಾಜದ ಶ್ರೀ ಪಾಂಡುರಂಗ ಕೃಷ್ಣ ಮೇಸ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.