Print

ಡಿ. 22, 2017: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾನ್ಯತಾ ರಜತ ಮಹೋತ್ಸವದ ಸರಣಿ ಕಾರ್ಯಕ್ರಮದ 19 ನೇ “ಜಿಲ್ಲಾ ಕೊಂಕಣಿ ಭಾಷಾ ಸಮಾವೇಶ” ಕಾರ್ಯಕ್ರಮವನ್ನು ದಿನಾಂಕ 22/12/2017 ರಂದು ಗದಗ, ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಚರಿಸಲಾಯಿತು.

 

 

 

 

 

 

ತ್ರಿವಿಧ ದಾಸೋಹಿ ಮೂರ್ತಿ ಪರಮಪೂಜ್ಯ ಯಡಿಯೂರ ಶ್ರೀ ಜ. ಡಾ|| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಸಲಾಯಿತು. ಗೌಡ ಸಾರಸ್ವತ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಕರಾದ ಶ್ರೀ ಎಸ್.ವ್ಹಿ ಸಂಕನೂರು, ಗದಗ ಬೆಟಗೇರಿ ನಗರಸಭಾ ಅಧ್ಯಕ್ಷರಾದ ಶ್ರೀ ಬಿ.ಬಿ. ಅಸೂಟಿ, ಡಾ ದಿಲೀಪ್ ಡಿ ಹೆಮ್ಮಾಡಿ, ಸೈಂಟ್ ಜಾನ್ ಸ್ಕೂಲ್ ಗದಗ ಇದರ ಮುಖ್ಯೋಪಾದ್ಯಾಯರಾದ ಶ್ರೀಮತಿ ಮೇರಿ ಮಸ್ಕರೇನಸ್, ಉದ್ಯಮಿಗಳಾದ ಶ್ರೀ ಗಣಪತಿ ಪಾಲನಕರ, ಶ್ರೀ ಸಂತೋಷ ನಾರಾಯಣ ಕುಡತಕರ, ದೈವಜ್ಞ ಸಮಾಜ ಮಹಿಳಾ ಮಂಡಲ ಇದರ ಅದ್ಯಕ್ಷರಾದ ಶ್ರೀಮತಿ ಸಂಧ್ಯಾ ವರ್ಣೇಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀ ಅರುಣ ನಾಯ್ಕ, ಆಕಾಶವಾಣಿ, ಹೊಸಪೇಟೆ ಇವರ ಅಧ್ಯಕ್ಷತೆಯಲ್ಲಿ ‘ವಿದ್ಯಾರ್ಥಿಗಳಲ್ಲಿನ ಕೊಂಕಣಿ ಸಾಹಿತ್ಯ’ ಕುರಿತಾದ ವಿಚಾರಗೋಷ್ಠಿ ನಡೆಯಿತು. ವಿಚಾರಗೋಷ್ಠಿಯಲ್ಲಿ ಡಾ| ಉದಯ ರಾಯ್ಕರ್, ಶ್ರೀ ದೇವದಾಸ ಕಾಮತ್, ಶ್ರೀ ಯು.ಎಸ್.ನಾಗರಾಜರಾವ, ಡಾ| ಶ್ರೀಮತಿ ರಾಧಿಕಾ ಕುಲಕರ್ಣಿ ಭಾಗವಹಿಸಿದ್ದರು. ಶ್ರೀಮತಿ ಮರಿಯ ಮಸ್ಕರೇನಸ್ ಅಧ್ಯಕ್ಷತೆಯಲ್ಲಿ ಕವಿತಾ ವಾಚನ ಹಮ್ಮಿಕೊಂಡಿದ್ದು, ಶ್ರೀ ವಿನಾಯಕ ಶೇಟ್, ಶ್ರೀ ಚೇತನ ಗುಡವಿ, ಶ್ರೀ ಅರುಣ ತುಕರಾಮ ವೆರ್ಣೇಕರ ಕವಿತಾ ವಾಚನ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ನಯನಾ ಗಣೇಶ ರೇವಣಕರವರ ಭಕ್ತಿಗೀತೆ, ಶ್ರೀಮತಿ ಐಶ್ವರ್ಯ ಎನ್ ಕುಡತಕರ ರವರ ಭರತನಾಟ್ಯ, ಸೌಮ್ಯ ಕಾಮತ್ ಮತ್ತು ಪಂಗಡದವರಿಂದ ಸಮೂಹ ಗಾಯನ, ಜೂಲಿ ಮತ್ತು ಪಂಗಡದ ಜನಪದ ನೃತ್ಯ, ಶ್ರೀಮತಿ ಅನ್ನಾ ಆನಿ ಪಂಗಡ, ಶ್ರೀ ರಾಜೇಶ್ವರಿ ಕಲಾ ಕುಟೀರದ ತಾಂಡವ ನೃತ್ಯ, ನಮಿತಾ ಕಾಮತ್ ಬಳಗದಿಂದ ನೃತ್ಯ ರೂಪಕ, ರಾಮಚಂದ್ರ ಭಟ್ ಪಂಗಡದ ತಾಳ ಮದ್ದಲೆ, ನಿತೀಶ ಪ್ರಕಾಶ ಶೇಟರವರ ಯಕ್ಷಗಾನ ಹಾಗೂ ಪರಶುರಾಮ ಶಿವರಾಮರವರ ಮಿಮಿಕ್ರಿ ನಡೆಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ನಾಗೇಶ ಅಣ್ವೇಕರ ಕಾರ್ಯಕ್ರಮದ ಸಂಚಾಲಕತ್ವ ವಹಿಸಿಕೊಂಡಿದ್ದರು.