Print

ಡಿ. 30, 2017: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯಾತ ರಜತ ವರ್ಷಾಚರಣೆ ಸರಣಿ ಕಾರ್ಯಕ್ರಮದ 22ನೇ “ಕೊಂಕಣಿ ಸೌಹಾರ್ದ್” ಕಾರ್ಯಕ್ರಮವನ್ನು ದಿನಾಂಕ 30.12.2017 ರಂದು ಎಸ್.ವಿ.ಡಿ ಸಭಾಭವನ ಸುಳ್ಯ, ಇಲ್ಲಿ ಆಯೋಜಿಸಲಾಗಿತ್ತು.

 

 

 

 

 

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಕೊಂಡಿದ್ದರು. ಶ್ರೀ ಉಪೇಂದ್ರ ಕಾಮತ್, ಶ್ರೀ ಅಣ್ಣಾ ವಿನಯ್ ಚಂದ್ರ, ಫಾ| ವಿಲ್ಸನ್ ಡಿಸೋಜಾ, ಶ್ರೀ ಬಾಪು ಸಾಹೇಬ್, ಶ್ರೀ ಮಣಿಕಾರ್ ಶಾನ್‍ಭಾಗ್, ಶ್ರೀ ಕೃಷ್ಣ ಕಾಮತ್, ಶ್ರೀಮತಿ ಪ್ರೇಮಲತಾ ಹಾಗೂ ಶ್ರೀ ವೈಕುಂಟ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಪ್ರಾಣೇಶ್ ಭಕ್ತರವರ ಅಧ್ಯಕ್ಷತೆಯಲ್ಲಿ ಕವನ ವಾಚನ ಆಯೋಜಿಸಿದ್ದು ಶ್ರೀಮತಿ ಸಂಧ್ಯಾ ಭಟ್, ಕು| ಕೀರ್ತನ ಭಟ್, ಶ್ರೀಮತಿ ರೇಖಾ ಪ್ರಭು, ಎಸ್.ಎಂ ಬಾಪುಸಾಹೇಬ್, ಪಾರ್ವತಿ ಕಾಮತ್, ಶ್ರೀ ಕೈಲಾಸ್ ಶೆಣೈ, ಶ್ರೀ ಅಶೋಕ್ ಪೈ ಹಾಗೂ ಶ್ರೀ ಪ್ರೀತೇಶ್ ನಾಯಕ್ ಕವನ ವಾಚನ ಮಂಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಪಿ ಚರ್ಡಪ್ಪ ಪೈ, ಆಶಿಕಾ ಪ್ರಭು, ವತ್ಸಲಾ ನಾಯಕ್, ಶಾರುಕ್, ಪೂಜಾಶ್ರೀ ಯವರ ಏಕವ್ಯಕ್ತಿ ಗಾಯನ ವಿವಿಧ ತಂಡಗಳಿಂದ ಸಮೂಹ ಗಾಯನ ಪ್ರದರ್ಶನ ನಡೆಯಿತು. ಭಾರತಿ ನಾಯಕ್, ಆಶಾ ಭಂಡಾರಿ, ಶುಭಾ ಕಾಮತ್, ಜಯಂತಿ ಪ್ರಭು, ಶ್ರಿಲ್ಪಾ ಪೈ ಹಾಗೂ ವಸಂತಿ ಮತ್ತು ತಂಡದವರು ಕೊಂಕಣಿಗರ ಸಾಂಪ್ರದಾಯಿಕ ತಿಂಡಿತಿನಿಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.  ಅಕಾಡೆಮಿಯ ಸದಸ್ಯರಾದ ಶ್ರೀ ಲಕ್ಷ್ಮಣ ಪ್ರಭು ಕಾರ್ಯಕ್ರಮದ ಸಂಚಾಲಕತ್ವ ವಹಿಸಿಕೊಂಡಿದ್ದರು.