Print

ಜ.02, 2018: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯಾತ ರಜತ ವರ್ಷಾಚರಣೆ ಸರಣಿ ಕಾರ್ಯಕ್ರಮದ 23 ನೇ ಕಾರ್ಯಕ್ರಮ ”ಕೊಂಕಣಿ ಲಹರ್” ದಿನಾಂಕ 02-01-2018 ರಂದು ಬ್ರಹ್ಮಾವರದ ಶ್ರೀ ಲಕ್ಷ್ಮಿ ವೆಂಕಟರಮಣ ಕಲಾಮಂದಿರದಲ್ಲಿ ಆಚರಿಸಲಾಯಿತು. ಬ್ರಹ್ಮಾವರದ ಉಧ್ಯಮಿಗಳಾದ ಶ್ರೀ ಬಿ ಸದಾನಂದ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

 

 

 

 

 

ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಚಾಂತಾರು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ನಾಯಕ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಶೋಕ ಕಾಮತ್, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅರ್ಚಕರಾದ ಶ್ರೀ ಚೇಂಪಿ ಪ್ರಕಾಶ್ ಭಟ್, ಶ್ರೀ ತೋನ್ಸೆ ವಾಮನ ನಾಯಕ್, ಶ್ರೀ ಬಿ.ಕೆ ಪುರುಷೋತ್ತಮ ನಾಯಕ್, ಶ್ರೀ ಕೆ ರಾಘವೇಂದ್ರ ಕಾಮತ್ ಬ್ರಹ್ಮಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಶಾಂತೇರಿ ಮಹಾಲಸಾ ನಾಗೇಶ್ ಪೈ ಮತ್ತು ತಂಡದಿಂದ ಭರತ ನಾಟ್ಯ, ತೋನ್ಸೇ ವಿಶ್ವನಾಥ ತಂಡದಿಂದ ಭಕ್ತಿತರಂಗ, ಕುಮಾರಿ ಎûಚ್ ದಿಶಾ ಭಟ್ ಮತ್ತು ತಂಡದಿಂದ ಮಜಾ ಬ್ರಹ್ಮಾವರ, ಶ್ರೀಮತಿ ಬಿ ಪ್ರಜ್ಯೋತಿ ಭಟ್ ನಿರ್ದೇಶನದ ಚಿನ್ನರ ಕಲರವ, ಶ್ರೀಮತಿ ಬಿ ರಾಧಾ ಶಣೈ ತಂಡದಿಂದ ರೂಪಕ ಹಾಗೂ ಬಿ ಗೀತಾ ಪೈ ಮತ್ತು ತಂಡದಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ರಾಮನಾಥ ಮೇಸ್ತ ಕಾರ್ಯಕ್ರಮದ ಸಂಚಾಲತಕತ್ವ ವಹಿಸಿಕೊಂಡಿದ್ದರು.