Print

 

ಫೆ.10, 2018: ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25 ಮೂರು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ದಿನಾಂಕ 10,11,12 ನೇ ಫೆಬ್ರವರಿ 2018 ರಂದು ದಾಂಡೇಲಿಯ ರಂಗನಾಥ ಆಡಿಟೋರಿಯಂ ನಲ್ಲಿ ಆಚರಿಸಲಾಯಿತು.

 

 

 

 

 

ದಿನಾಂಕ : 10.02.2018
ಅಕಾಡೆಮಿ ವಾರ್ಷಿಕೋತ್ಸವ : ಕೊಂಕಣಿ ಸಾಂಸ್ಕೃತಿಕ ಜಾನಪದ ಮೇಳ

   ಮೊದಲದಿನದ ಕಾರ್ಯಕ್ರಮವು ಶ್ರೀ ಜೂಲಿಯಾನ ಸಿದ್ಧಿ ಮತ್ತು ತಂಡದ ಸಿದ್ಧಿ ಜಾನಪದ ನೃತ್ಯ ಪ್ರದರ್ಶನದೊಂದಿಗೆ ಪ್ರಾರಂಭಗೊಂಡಿತು.

ಪೂ 10 ಕ್ಕೆ ಸರಿಯಾಗಿ ದಾಂಡೇಲಿ ನಗರ ಸಭೆ ಅಧ್ಯಕ್ಷರಾದ ಶ್ರೀ ಎನ್.ಜೆ ಸಾಳೊಂಕೆ ಕಾರ್ಯಕ್ರಮದ ಉದ್ಥಾಟನೆಯನ್ನು ನೆರವೇರಿಸಿಕೊಟ್ಟರು. ರೆ.ಫಾ. ಗ್ರೆಗರಿ ಯವರು ಮಳಿಗೆಗಳ ಉದ್ಘಾಟನೆಯನ್ನು ನಡೆಸಿಕೊಟ್ಟರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಮಾಜಿಕ ಧುರೀಣರಾದ ಶ್ರೀ ಸೈಯದ್ ಕ್ ತಂಗಳ್, ಗೌಡ ಸಾರಸ್ವತ ಭ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಹೆಗಡೆ, ಶ್ರೀ ಹರೀಶ್ ನಾಯ್ಕ್, ಶ್ರೀ ಗಿರಿರಾಜ್, ಡಾ ವಿದ್ಯಾಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. “ಕೊಂಕಣಿ ಭಾಷೆಯ ರಾಷ್ಟ್ರೀಯ ಸ್ಥಾನಮಾನ” ಕುರಿತಾಗಿ ವಿಶೇಷ ಉಪನ್ಯಾಸ ಹಮ್ಮಿಕೊಂಡಿದ್ದು, ಶ್ರೀ ಗೋಕುಲ್‍ದಾಸ್ ಪ್ರಭು, ಶ್ರೀ ವಲ್ಲಿ ಕ್ವಾಡ್ರಸ್, ಶ್ರೀ ಪೂರ್ಣಾನಂದಾಚಾರಿ ಉಪನ್ಯಾಸ ನೀಡಿದರು.

ಸಾಂಸ್ಕ್ರೃತಿಕ ಕಾರ್ಯಕ್ರದ ಅಂಗವಾಗಿ ಕೊಂಕಣಿ ಹಾಡುಗಳು, ಬೆಸ್ತರ ನೃತ್ಯ, ಗುಮಟಾಪಾಂಗ್, ಧಪ್ ನೃತ್ಯ, ತಾಳಮದ್ಧಳೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.