Print

ಡಿ.29, 2017: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯಾತ ರಜತ ವರ್ಷಾಚರಣೆ ಸರಣಿ ಕಾರ್ಯಕ್ರಮದ 21 ನೇ ಕಾರ್ಯಕ್ರಮ “ಕೊಂಕಣಿ ಸಾಹಿತ್ಯ ಸಮ್ಮೇಳನ” ವನ್ನು ದಿನಾಂಕ 29/12/2017 ರಂದು ಕೊಡಿಯಾಲ ಖಬರ ಇವರ ಸಹಯೋಗದಲ್ಲಿ ಮಂಗಳೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಸಲಾಯಿತು.

 

 

 

ಸಿ.ಎ. ನಂದಗೋಪಾಲ ಶೆಣೈ, ಮಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶ್ರೀ ವಿಶ್ವನಾಥ ಶ್ರೆಣೈ, ಶ್ರೀ ಬಸ್ತಿವಾಮನ್ ಶೆಣೈ, ಡಾ| ಕೆ. ಮೋಹನ್ ಪೈ, ಶ್ರೀ ಪೌಲ್ ಮೊರಾಸ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

‘ಕೊಂಕಣಿ ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿ’ ಕುರಿತ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೀಮತಿ ಶಂಕುಂತಲಾ ಆರ್ ಕಿಣಿ, ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀ ವೆಂಕಟೇಶ ನಾಯಕ, ಶ್ರೀ ರಾಮನಾಥ ಶ್ಯಾನಭಾಗ, ಶ್ರೀ ಎಂ ಆರ್ ಕಾಮತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅದೇ ದಿನ ಸಂಜೆ ಕಾರ್ಯಕ್ರಮದ ಸಮಾರೋಪ ಹಮ್ಮಿಕೊಂಡಿದ್ದು ಶ್ರೀ ಜಿ.ಜಿ. ಶೆಣೈ, ಶ್ರೀ ಕೆ.ಸಿ. ಪ್ರಭು, ಶ್ರೀ ಪ್ರಶಾಂತ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.