Print

ದಿನಾಂಕ 8.7.2018 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಗೌಡ ಸಾರಸ್ವತ ಸಮಾಜ ಹೈದರಾಬಾದ್ ಇವರ ಸಹಯೋಗದೊಂದಿಗೆ ಶ್ರೀ ಸುಧೀಂದ್ರ ಸಭಾಭವನ ಹೈದರಾಬಾದ್ ಇಲ್ಲಿ ಹೊರರಾಜ್ಯದಲ್ಲಿರುವ ಕೊಂಕಣಿ ಭಾಷಿಕರ ನಡುವೆ ಕೊಂಕಣಿ ಅಕಾಡೆಮಿ ಸಂವಾದ   ಕಾರ್ಯಕ್ರಮವನ್ನು ನಡೆಸಲಾಯಿತು. ಗೌಡ ಸಾರಸ್ವತ ಸಮಾಜದ ಅಧ್ಯಕ್ಷ ಕೇಶವ ನಾಯಕ್ ಸ್ವಾಗತಿಸಿದರು. ಕೊಂಕಣಿ ಅಕಾಡೆಮಿಯ ಸದಸ್ಯ ಶ್ರೀ ಸಂತೋಷ ಶೆಣೈ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್. ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೊಂಕಣಿ ಮಾತೃಭಾಷೆಯನ್ನು ಮನೆ ಮನೆಯಲ್ಲಿಯೂ ಮಾತನಾಡಿ ಕೊಂಕಣಿ ಭಾಷೆಯನ್ನು ಉಳಿಸಬೇಕೆಂದು ತಮ್ಮಭಾಷಣದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಪುಸುಲೋನ ಸಂಸ್ಥೆಯ ಚೇರ್‍ಮ್ಯಾನ್ ಶ್ರೀ ಅಚ್ಚುತ ಪೈ ಅವರು ಕೊಂಕಣಿ ಸಿರಿಸಂಪದ ಪುಸ್ತಕವನ್ನು ಬಿಡುಗಡೆಗೊಳಿಸಿದರು, ಉಪಧ್ಯಕ್ಷರಾದ ಶ್ರೀ ಹರೀಶ್ ಪ್ರಭು, ಶ್ರೀಮತಿ ಜ್ಯೋತಿ ನಾಯಕ್, ಶ್ರೀ ವಸಂತ ಪೈ ಕೊಂಕಣಿ ಭಾಷೆಯ ಅಳಿವು ಉಳಿವಿನ ವಿಚಾರದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಶ್ರೀ ಜನಾರ್ಧನ ಕಾಮತ್ ವಂದಿಸಿದರು.