Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಸಹಯೋಗದಲ್ಲಿ ದಿನಾಂಕ 25.07.2018 ರಂದು ಸಿರಿ ಚಾವಡಿ, ತುಳು ಭವನ ಇಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಡಾ. ಜಯಮಾಲಾ ಭಾಗವಹಿಸಿ ಅಕಾಡೆಮಿ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಪ್ರಸ್ತುತ  ಅಕಾಡೆಮಿಯ ಅಧ್ಯಕ್ಷರುಗಳು ಒಳ್ಳೆಯ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿರುವ ನಾನಾ ಅಕಾಡೆಮಿಗಳು ತಮ್ಮ ಕಾರ್ಯಚಟುವಟಿಕೆಗಳ ಸ್ತಿರ, ದೃಶ್ಯ ಮತ್ತು ಡಿಚಲೀಕರಣ ಮೂಲಕ ದಾಖಲೀಕರಣ ಮಾಡಬೇಕು. ಕಲಾವಿದರನ್ನು ಗುರುತಿಸುವ, ಮಾಸಾಶನ ವಂಚಿತರಿಗೆ ಸಹಕರಿಸುವ, ಕಲಾತಂಡಗಳನ್ನು ಪೆÇ್ರೀತ್ಸಾಹಿಸಿ ಬೆಳೆಸುವ ಕೆಲಸಗಳನ್ನು ಅಕಾಡೆಮಿಗಳು ಮಾಡಬೇಕು ಎಂದು ಡಾ ಜಯಮಾಲರವರು ತಿಳಿಸಿದರು.

 

 

 

 

 

 

ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ್, ರಿಜಿಸ್ಟ್ರಾರ ಚಂದ್ರಹಾಸ ರೈ ಬಿ, ಸಹಾಯಕ ನಿರ್ದೇಶಕರಾದಾ ಶ್ರೀ ರಾಜೇಶ್ ಜಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ತುಳು ಅಕಾಡೆಮಿ ಅಧ್ಯಕ್ಷರಾದ ಎ.ಸಿ ಭಂಡಾರಿ, ಬ್ಯಾರಿ ಅಕಾಡೆಮಿ ಅಧ್ಯಕ್ಷರಾದ ಶ್ರೀ ಕರಂಬಾರ್ ಮೊಹಮ್ಮದ್, ಅರೆಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ ಜಯರಾಮ್, ಹಾಗೂ ಅಕಾಡೆಮಿ ಮಾಜಿ ಅಧ್ಯಕ್ಷರುಗಳು, ಪ್ರಸಕ್ತ ಸಾಲಿನ ಸದಸ್ಯರು, ಹಾಗೂ ಅನೇಕ ಕೊಂಕಣಿ ಬಾಂಧವರು ಉಪಸ್ಥಿತರಿದ್ದರು. ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಸ್ವಾಗತಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹುಸೈನ್ ಕಾಟಿಪಳ್ಳ ವಂದಿಸಿದರು. ತುಳು ಅಕಾಡೆಮಿ ಸದಸ್ಯ ತಾರಾನಾಥ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.