Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿವತಿಯಿಂದ ದಿನಾಂಕ 25.08.2018 ರಂದು ಡೀಲಕ್ಸ್ ಆಡಿಟೋರಿಯಂ ದಾಂಡೇಲಿ ಇಲ್ಲಿ ಕೊಂಕಣಿ ಕೃತಿ ವಿಮರ್ಸೊ-ಸಂವಾದ್ ಕಾರ್ಯಕ್ರಮವನ್ನು ನಡೆಸಲಾಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ. ಎಸ್.ಬಿ ಸಮಾಜದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಹೆಗಡೆ, ಪೌರಕಾರ್ಮಿಕ ಸಂಘದ ಅಧ್ಯಕ್ಷರಾದ ಶ್ರೀ ಹರೀಶ ನಾಯ್ಕ್, ಅವೇಡಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ನಾರಾಯಣರಾವ್, ದೈವಜ್ಞ ಸಮಾಜದ ಅಧ್ಯಕ್ಷರಾದ ಶ್ರೀ ಎಸ್.ಎಸ್.ಕುರ್ಡೇಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಸುರೇಶ್ ಕಾಮತ್‍ರವರು ಶ್ರೀ ಪಮೋದ ಡಿ ನಾಯ್ಕ್ ರವರ ಗಾಂವ್ಚೊ ಮೋಗ್ ಪುಸ್ತಕದ ವಿಮರ್ಶೆಯನ್ನು ನಡೆಸಿಕೊಟ್ಟರು. ಶ್ರೀ ಗಿರೀಶ್ ಶಿರೀಡ್ಕರ, ಶ್ರೀ ಪ್ರಮೋದ ಡಿ ನಾಯ್ಕ, ಶ್ರೀಮತಿ ಮಂಗಳಾ ಕುರ್ಡೇಕರ ಪಾಲ್ಗೊಳ್ಳುವಿಕೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ವಿವಿಧ ಕಲಾವಿದರು ಹಾಗು ಸಂಘಟನೆಗಳಿಂದ ಕೊಂಕಣಿ ಸಾಂಸ್ಕೃತಿಕ ವೈವಿದ್ಯದ ಪ್ರದರ್ಶನ ನಡೆಯಿತು.