Print

ಕೊಂಕಣಿ ಶಿಕ್ಷಣವನ್ನು ಅಭಿವೃದ್ದಿಪಡಿಸುವ ಹಾಗೂ ಇನ್ನೂ ಹೆಚ್ಚೆನ ಶಾಲೆಗಳಲ್ಲಿ ಕೊಂಕಣಿ ಶಿಕ್ಷಣವನ್ನು ಪಸರಿಸುವ ಉದ್ದೇಶದಿಂದ ಅಕಾಡೆಮಿ ಹಾಗೂ ಶಾಲಾ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ದಿನಾಂಕ 26.09.2018 ರಂದು ಅಕಾಡೆಮಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್, ಸದಸ್ಯರಾದ ಶ್ರೀ ಸಂತೋಷ್ ಶೆಣೈ, ಶ್ರೀ ಲಕ್ಷ್ಮಣ ಪ್ರಭು, ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಹಾಗೂ ಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾದ್ಯಾಯರುಗಳು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕೊಂಕಣಿ ಶಿಕ್ಷಣವನ್ನು ಅಭಿವೃದ್ಧಿ ಹಾಗೂ ಇನ್ನೂ ಹೆಚ್ಚಿನ ಶಾಲೆಗಳಲ್ಲಿ ವಿಸ್ತರಿಸಲು ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಅಕಾಡೆಮಿ ಹಾಗೂ ಶಾಲಾ ಶಿಕ್ಷರ ನಡುವೆ ಮುಕ್ತ ಸಂವಾದ ನಡೆಯಿತು.