Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ವಿವೇಚನೆ ಮೇರೆಗೆ ಕಾರ್ಯಕ್ರಮದಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸ್ನಾತಕೋತ್ತರ ಕೊಂಕಣಿ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ “ಕೊಂಕಣಿ ಚಲ್‍ಚಿತ್ರ್ ರಸಗ್ರಹಣ” ಕಾರ್ಯಕ್ರಮ ದಿನಾಂಕ 29.09.2018 ರಂದು ಸಂಜೆ 6.00 ಗಂಟೆಗೆ ಶಿವರಾಮ ಕಾರಂತ ಭವನದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ವಿ.ವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಮಕೃಷ್ಣ ಬಿ.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕರಾದ ಶ್ರೀ ಅರವಿಂದ ಶಾನಭಾಗ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂತು ಕೊಂಕಣಿ ಚಲನಚಿತ್ರದ ನಿರ್ಮಾಪಕ, ನಿರ್ದೇಶಕರಾದ ಶ್ರೀ ಕರೋಪಾಡಿ ಅಕ್ಷಯ ನಾಯಕ್, ಅಭಿನೇತ್ರಿ ಶ್ರೀಮತಿ ಪೂರ್ಣಿಮಾ ಸುರೇಶ್, ಸಂಭಾಷಣೆಗಾರರಾದ ಶ್ರೀ ವೆಂಕಟೇಶ್ ಬಾಳಿಗಾ ಹಾಗೂ ಅಂತು ಕೊಂಕಣಿ ಚಲನಚಿತ್ರ ತಂಡದೊಡನೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ”ಅಂತು” ಕೊಂಕಣಿ ಚಲನಚಿತ್ರದ ಪ್ರದರ್ಶನ ನಡೆಯಿತು.