Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಾಲೇಜುಗಳಲ್ಲಿ ಕೊಂಕಣಿ ಸರ್ಟಿಫಿಕೇಟ್ ಕೋರ್ಸ್ ಯೋಜನೆಯನ್ನು ಹಮ್ಮಿಕೊಂಡಿದ್ದು ಈ ಯೋಜನೆಯ ಪ್ರಥಮ ಕಾರ್ಯಕ್ರಮ ಕೊಂಕಣಿ ಸುಗಮ ಸಂಗೀತ ಕಾರ್ಯಾಗಾರವನ್ನು ದಿನಾಂಕ 11.10.2018 ರಂದು ಮಂಗಳೂರಿನ ಕೆನರಾ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಆರಂಬಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ವಿ ಮಾಲಿನಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆನರಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಅಕಾಡೆಮಿಯ ಸದಸ್ಯರಾದ ಶ್ರೀ ಸಂತೋಷ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ್ ಶೆಣೈ, ಕು ಭಾವನಾ ಶೆಣೈ, ಶ್ರೀ ಸಮರ್ಥ್ ಶೆಣೈ, ಕು ಅಪೂರ್ವಾ ಕಿಣಿ, ಕೊಂಕಣಿ ಭಾಷಾ ವಿದ್ಯಾರ್ಥಿಗಳ ಮಂಡಳದ ಸಂಯೋಜಕರಾದ ಶ್ರೀಮತಿ ಉಷಾನಾಯಕ್, ಬಹುಭಾಷಾ ಸಂಘದ ಸಂಯೋಜಕರಾದ ಶ್ರೀಮತಿ ವಾಣಿ ಯು.ಎಸ್ ಹಾಗೂ ಅಕಾಡೆಮಿಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.