ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 9ನೇ ಅಧ್ಯಕ್ಷರಾಗಿ ತಾನು ಅಧಿಕಾರ ವಹಿಸಿಕೊಂಡ ಕೇವಲ 7 ತಿಂಗಳಲ್ಲಿ 36 ಕಾರ್ಯಕ್ರಮಗಳನ್ನು ರಾಜ್ಯದ ವಿವಿದೆಡೆ ಏರ್ಪಡಿಸಿ ದಾಖಲೆ ಮಾಡಿದ ಅಕಾಡೆಮಿಯಿಂದ ಈ ವರ್ಷ ‘ಹಳ್ಳಿಯಿಂದ ದಿಲ್ಲಿಗೆ, ದಿಲ್ಲಿಯಿಂದ ದುಬೈಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ‘ಕೊಂಕಣಿ ಜಾಗೃತಿ ಅಭಿಯಾನ’ದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕ ಹೇಳಿದರು. ಅವರು ಇತ್ತೀಚೆಗೆ ಶಿರಸಿಯಲ್ಲಿ ದಿನಾಂಕ 4.11.2018 ರಂದು ನಡೆದ ‘ಕೊಂಕಣಿ ನಾಟಕ ಸಂವಾದ ಹಾಗೂ ಪ್ರಾತ್ಯಕ್ಷಿತಾ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಿದ್ದರು. ಈ ಅಭಿಯಾನ ಕುಮಟಾ, ಶಿರಸಿ ಸಿದ್ದಾಪುರ ತಾಲೂಕುಗಳಲ್ಲಿ ನಡೆಯಲಿದೆ. ಹಳ್ಳಿಗಳಲ್ಲಿ ನಡೆಯುವ ಇಂಥ ಕಾರ್ಯಕ್ರಮದಲ್ಲಿ ‘ಕೊಂಕಣಿ ಭಾಷೆÉಯ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸಲಾಗುವದು. ಕೊಂಕಣಿ ಭಾಷೆಯ ಬಗ್ಗೆ ಪ್ರಮಾಣವಚನ ಬೋಧಿಸಲಾಗುವದು. ಇದರಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರಮಾಣಪತ್ರ ನೀಡಲಾಗುವದು. ಹೀಗೆ ಹಳ್ಳಿಗಳಿಂದ ಶಹರಕ್ಕೆ ಅಲ್ಲಿಂದ ದಿಲ್ಲಿಯ ವರೆಗೆ ಈ ಅಭಿಯಾನವನ್ನು ಕೊಂಡೊಯ್ಯುವ ಗುರಿ ಹೊಂದಿದ್ದು ಇದೇ ಬರುವ ಮಾರ್ಚ ತಿಂಗಳಲ್ಲಿ ಈ ಅಭಿಯಾನದ ಸಮಾರೋಪವನ್ನು ದುಬೈ ಶಹರದಲ್ಲಿ ನಡೆಸುವ ಚಿಂತನೆ ನಡೆದಿದೆ ಎಂದರು. ಅಲ್ಲದೇ ಸುಮಾರು 150 ಕೊಂಕಣಿ ಲೇಖಕರಿಂದ ಸಣ್ಣ ಸಣ್ಣ 150 ಪುಸ್ತಕಗಳನ್ನು ರಚಿಸಿ ಬರುವ ಡಿಸೆಂಬರ ತಿಂಗಳಲ್ಲಿ 100 ಪುಸ್ತಿಕೆಗಳನ್ನು ಅಕಾಡೆಮಿಯಿಂದ ಪ್ರಕಟಿಸುವ ಯೋಜನೆಯನ್ನೂ ಹಮ್ಮಿಕೊಂಡು ಈಗಾಗಲೆ 100 ಪುಸ್ತಿಕೆಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರ ನೀಡಿದರು. ಬೆಂಗಳೂರು ದೂರದರ್ಶನದಲ್ಲಿ ‘ಕೊಂಕಣಿ ಖಾಣ-ಜೆವಣ’ಕಾರ್ಯಕ್ರಮದಲ್ಲಿ ಕೊಂಕಣಿ ಖಾದ್ಯಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಪ್ರಾಯೋಜಕರ ನೆರವಿನಿಂದ ಏರ್ಪಡಿಸಲಾದೆ ಎಂದು ಹೇಳಿದರು.

 

 

 

 

 

ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾದ ನಿತಿನ್ ಕಾಸರಕೋಡರವರು ಚಂಡೆ ಬಾರಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಕೊಂಕಣಿ ಪರಿಷತ್ತು ಕಳೆದ 28 ವರ್ಷಗಳಿಂದ ಜಿಲ್ಲೆಯಲ್ಲಿ ಕೊಂಕಣಿ ಬಾಷಾಭಿವೃದ್ಧಿಯ ಅನೇಕ ಕಾರ್ಯಗಳನ್ನು ಹಮ್ಮಿಕೊಂಡು ಸಕ್ರಿಯವಾಗಿದೆ ಎಂದು ಹೇಳಿ ಬರುವ ಜನವರಿ ತಿಂಗಳ ಮೊದಲ ವಾರದಲ್ಲಿ ರಾಜ್ಯಮಟ್ಟದ ಕೊಂಕಣಿ ಏಕಾಂಕ ನಾಟಕ ಸ್ಪರ್ಧೆಯನ್ನು ಶಿರಸಿಯಲ್ಲಿ ಆಯೋಜಿಸಲಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಂಕಣಿ ಸಾಹಿತಿ ಕೂಡ್ಲು ಆನಂದ್ ಶಾನಭಾಗರು ‘ರಾಜ್ಯದ ಶಾಲೆಗಳಲ್ಲಿ 6ನೇ ತರಗತಿಯಿಂದ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಾಗಿ ಅಭ್ಯಾಸ ಮಾಡಲು ಅವಕಾಶವಿದ್ದು ಅದನ್ನು ಪ್ರೋತ್ಸಾಹಿಸಲು ಕೊಂಕಣಿ ಅಕಾಡೆಮಿ ಯೋಜನೆ ಹಾಕಿಕೊಳ್ಳಬೇಕೆಂದು’ ಕರೆ ನೀಡಿದರು. ಇನ್ನೋರ್ವ ಅತಿಥಿ ದ್ವಿಭಾಷಾ ಸಾಹಿತಿ ಜಗದೀಶ ನಾ. ಕಾರ್ಯಕ್ರಮಕ್ಕೆ ಶುಭ ಕೋರಿದರು. ಗುರುಮೂರ್ತಿ ವಿ.ಎಸ್. ಪ್ರಾರ್ಥಿಸಿದರು. ಕೊಂಕಣಿ ಸಾಹಿತಿ ವಾಸುದೇವ ಶಾನಭಾಗ ನಿರೂಪಿಸಿದರು. ಕೊಂಕಣಿ ಅಕಾಡೆಮಿ ಸದಸ್ಯ ನಾಗೇಶ ಅಣ್ವೇಕರ ವಂದನಾರ್ಪಣೆಗೈದರು. ಇನ್ನೋರ್ವ ಸದಸ್ಯ ಸಂತೋಷ ಶೆಣೈ ಉಪಸ್ಥಿತರಿದ್ದರು. ಪ್ರಮೋದ ಕಾಮತ, ರಾಮಚಂದ್ರ ಪೈ, ರಾಮದಾಸ ರಾಂಪೈ, ಪ್ರಕಾಶ ಶೆಣೈ, ಪ್ರಕಾಶ ನೇತ್ರಾವಳಿ ಸಹಕರಿಸಿದರು.

ಅಪರಾಹ್ನ ನಡೆದ ನಾಟಕ ಸಂವಾದ ಕಾರ್ಯಕ್ರಮದಲ್ಲಿ ಗುರುಮೂರ್ತಿ ವಿ.ಎಸ್.ರವರು ಕೊಂಕಣಿ ನಾಟಕಗಳು ನಡೆದು ಬಂದ ದಾರಿಯ ಬಗ್ಗೆ ಉಪನ್ಯಾಸಗೈದರು. ಸಂವಾದದಲ್ಲಿ ವಾಸುದೇವ ಶಾನಭಾಗ, ರಾಮಚಂದ್ರ ಪೈ, ವಿಶ್ವನಾಥ ಶೇಟ, ಪ್ರಕಾಶ ಶೆಣೈ, ಸಂತೋಷ ಶೆಣೈ ಪಾಲ್ಗೊಂಡರು. ಸಂಜೆ ನಡೆದ ಸಭಾ ಕಾರ್ಯಕ್ರಮದ ನಂತರ ಸಾಧನಾ ಬÀಳಗ ಮಂಗಳೂರು ಇವರಿಂದ ಪ್ರಕಾಶ ಶೆಣೈ ವಿರಚಿತ ‘ಘೊಟಾಳೊ’ ಎಂಬ ಹಾಸ್ಯಪ್ರಧಾನ ಕೊಂಕಣಿ ನಾಟಕದ ಪ್ರದರ್ಶನ ನಡೆದು ಜನಮನರಂಜಿಸಿತು.

                               

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]