Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 9.02.2019 ರಂದು ಮಂಗಳೂರಿನ ಸೈಂಟ್ ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುಮಟೆ ವಾದ್ಯ ಹಾಗೂ ಬ್ರಾಸ್ ಬ್ಯಾಂಡ್ ತರಬೇತಿ ಶಿಬಿರ(ಸರ್ಟಿಫಿಕೇಟ್ ಕೋರ್ಸ್-2) ಇದರ ಸಮಾರೋಪ ಸಮಾರಂಭವನ್ನು ನಡೆಸಲಾಯಿತು.  ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೊಂಕಣಿ ಸಂಸ್ಕೃತಿಯನ್ನು ಉಳಿಸುವಲ್ಲಿ ಯುವಪೀಳಿಗೆಯ ವಿದ್ಯಾರ್ಥಿಗಳು ಹೆಚ್ಚೆನ ಪಾತ್ರ ವಹಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ ಫಾ ವಲೇರಿಯನ್ ಫೆರ್ನಾಂಡಿಸ್, ಅಕಾಡೆಮಿ ಸದಸ್ಯರಾದ ಶ್ರೀ ಲಕ್ಷ್ಮಣ ಪ್ರಭು, ಕಿಟಾಳ್ ಪತ್ರಿಕೆಯ  ಸಂಪಾದಕರಾದ ಶ್ರೀ ಎಚ್ಚೆಮ್ ಪೆರ್ನಾಳ್ ಉಪಸ್ಥಿತರಿದ್ದರು. ಗುಮಟ್ ವಾದ್ಯವನ್ನು ಉನ್ನತ ಸಂಗೀತ ಕ್ಷೇತ್ರಕ್ಕೆ ಕೊಂಡೊಯ್ದಾಗ ಇಡೀ ಕೊಂಕಣಿ ಸಂಸ್ಕೃತಿಯನ್ನೆ ಸಂಗೀತ ಕ್ಷೇತ್ರಕ್ಕೆ ಒಯ್ದಂತಾಗುತ್ತದೆ ಎಂದು ಶ್ರೀ ಎಚ್ಚೆಮ್ ಪೆರ್ನಾಳ್ ಅಭಿಪ್ರಾಯ ಪಟ್ಟರು. ಅಕಾಡೆಮಿಯ ಸದಸ್ಯರಾದ ಶ್ರೀ ಮಾಧವ ಶೇಟ್, ಶ್ರೀ ರಾಮ ಮೇಸ್ತ, ಶ್ರೀ ಮಾನ್ಯುವೆಲ್ ಸ್ಟೀಫನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಅಂತಿಮವಾಗಿ ಕಾರ್ಯಕ್ರಮದದ ಸಂಯೋಜಕರಾದ ಶ್ರೀ ಪ್ರೇಮ್ ಮೊರಾಸ್ ವಂದನಾರ್ಪನೆಗೈದರು.