Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿವತಿಯಿಂದ ಕೊಂಕಣಿ ನಾಟಕ ಸಂವಾದ್ ಆನಿ ಪ್ರಾತ್ಯಕ್ಷಿತಾ ಮೂರನೇ ಕಾರ್ಯಕ್ರಮ ದಿನಾಂಕ24.2.2019 ರಂದು  ಹೊನ್ನಾವರದ ಶರಾವತಿ ಸರ್ಕಲ್‍ನ ನ್ಯೂ ಇಂಗ್ಲಿಷ್ ಶಾಳಾ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹೊನ್ನಾವರ ನ್ಯೂ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜೆ.ಟಿ.ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹೊನ್ನಾವರ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷರಾದ ಶ್ರೀ ಶಿವರಾಜ್ ಮೇಸ್ತ, ಕರ್ನಾಟಕ ನವಾಯತ್ ಸಂಘದ ಜನರಲ್ ಸೆಕ್ರೆಟರಿ ಶ್ರೀ ನಸ್ರುಲ್ಲಾ ಸಿದ್ಧಿ ಮಹಮ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರಂಗಕರ್ಮಿ ಹಾಗೂ ನಿನಾಸಂ ಪದವೀದರರಾದ ಶ್ರೀ ವಿ ಎಸ್ ಗುರುಮೂರ್ತಿ "ಕೊಂಕಣಿ ರಂಗಭೂಮಿ ಮತ್ತುಪ್ರಸಾಧನ ಕೆಲೆ' ಕುರಿತು ಹಾಗೂ ಕೊಂಕಣಿ ರಂಗಭೂಮಿ ನಡೆದು ಬಂದ ದಾರಿ ಕುರಿತು ಶ್ರೀ ಪೌಲ್ ಎಸ್ ಗೊನ್ಸಾಲ್ವಿಸ್ ಸಂವಾದ ನಡೆಸಿಕೊಟ್ಟರು. ಸಂವಾದದಲ್ಲಿ ಶ್ರೀ ಜಾಕೋಬ್ ಫೆರ್ನಾಂಡಿಸ್, ಶ್ರೀ ನಂದು ಭಟ್, ಶ್ರೀ ಜೇಮ್ಸ್ ಲೋಪೆಸ್, ಶ್ರೀ ಸ್ಯಾಮ್ಸನ್ ಲೋಪೆಸ್ ಉಪಸ್ಥಿತರಿದ್ದರು. ನಾಟಕ ಪ್ರಾತ್ಯಕ್ಷಿತೆ ಅಂಗವಾಗಿ ಪ್ರಾನ್ನಿಸ್ ಅಸ್ಸಿಸಿ ಕಲಾ ಮೇಳ, ಹಡಿನಬಾಳ ಇವರಿಂದ "ಪೆಟ್ಲೆಲಿ ದಿವ್ಲಿ ವಾರ್ಯಾಕ್ ಸಾಂಪ್ಡಾತಾನಾ" ನಾಟಕ ಪ್ರದರ್ಶನ ನಡೆಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ಮ್ಯಾನುವೆಲ್ ಸ್ಟೀಫನ್ ರೋಡ್ರಿಗಸ್ ಕಾರ್ಯಕ್ರಮದ ಸಂಚಾಲಕತ್ವ ವಹಿಸಿಕೊಂಡಿದ್ದರು.