Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕಾಲೇಜುಗಳಲ್ಲಿ ಕೊಂಕಣಿ ಸರ್ಟಿಫಿಕೇಟ್ ಕೋರ್ಸ್ ಯೋಜನೆಯಡಿಯಲ್ಲಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಆರಂಭಿಸಲಾದ ‘ಕೊಂಕಣಿ ಸುಗಮ ಸಂಗೀತ’ ತರಭೇತಿ ಸರ್ಟಿಫಿಕೇಟ್ ಕೋರ್ಸ್‍ನ ಸಮಾರೋಪ ಸಮಾರಂಭವು ದಿನಾಂಕ 15.03.2019 ರಂದು ಕೆನರಾ ಕಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕೆನರಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭಾ ಕಾಮತ್ ಎಚ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ ಮಾಲಿನಿ, ಅಕಾಡೆಮಿಯ ಸದಸ್ಯರಾದ ಶ್ರೀ ಸಂತೋಷ್ ಶೆಣೈ, ಗೌರವ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯರು ಶ್ರೀ ಲಕ್ಶ್ಮಣ ಪ್ರಭು, ಶ್ರೀ ನಾಗೇಶ್ ಅಣ್ವೇಕರ್, ಶ್ರೀ ರಾಮಮೇಸ್ತ ಹಾಗೂ ಶ್ರೀ ಮ್ಯಾನುವೆ ಸ್ಟೀಪನ್ ರೋಡ್ರಿಗಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತರಬೇತಿ ಶಿಬಿರಾರ್ಥಿಗಳಿಂಸ ಕೊಂಕಣಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.