ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯುವ ಸಾಂಪ್ರದಾಯಿಕ ಕೊಂಕಣಿ ಹಾಡುಗಳ ಸರ್ಟಿಫಿಕೇಟ್ ಕೋರ್ಸ್ ಇದರ ಉದ್ಘಾಟನಾ ಸಮಾರಂಭ ಶಕ್ತಿನಗರದ ಕಲಾಂಗಣದಲ್ಲಿ 02.06.2019 ರಂದು ಅಪರಾಹ್ನ 3.00 ಗಂಟೆಗೆ ನಡೆಯಿತು. ಪ್ರಖ್ಯಾತ ಕೊಂಕಣಿಗರ ಅನನ್ಯ ಸಂಗೀತ ಉಪಕರಣ ಗುಮಟ್ಗೆ ಮಲ್ಲಿಗೆ ಹಾಗೂ ಅಬ್ಬಲಿಗೆ ಹೂವುಗಳ ಹಾರ ಹಾಕಿ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ‘ ಸಾಂಪ್ರದಾಯಿಕ ಹಾಡುಗಳು ಪ್ರತಿಯೊಂದು ಸಂಸ್ಕೃತಿಯ ಶ್ರೀಮಂತ ಹಾಗೂ ಅವಿಬಾಜ್ಯ ಅಂಗ. ಅದನ್ನು ಉಳಿಸಿ ಬೆಳೆಸುವಲ್ಲಿ ಮಾತೆಯರ ಪಾತ್ರ ಮಹತ್ವದ್ದು, ಈ ಹಾಡುಗಳಲ್ಲಿ ಜನಾಂಗದ ಕಥೆ ವ್ಯಥೆ, ಬೆಳವಣಿಗೆ ಅಡಗಿದೆ. ಇವನ್ನು ಸ್ವರ ಸಂಯೋಜನೆಯೊಡನೆ ಕಲಿತು, ಮುಂದಿನ ಪೀಳಿಗೆಗೆ ಕಲಿಸುವ ಜವಾಬ್ದಾರಿಯಿಂದ ಈ ಕೋರ್ಸ್ ಆಯೋಜಿಸಲಾಗಿದೆ. ಇಲ್ಲಿ ಮಾಂಡೊ, ದುಲ್ಪದಾಂ, ದೆಕ್ಣಿ, ಗುಮಟೆ ಹಾಡುಗಳು, ಮದುವೆ ಸೊಭಾಣೆ ಹಾಡುಗಳು, ಹಾಗೂ ಹಿರಿಯ ಸಂಗೀತಗಾರರ ಹಾಡುಗಳು ಹೀಗೆ 40 ಹಾಡುಗಳನ್ನು ಕಲಿಸಲಾಗುತ್ತದೆ. ಎಲ್ಲಾ ತರಗತಿಗಳಿಗೆ ಹಾಜರಾಗಿ ಕಲಿತವರಿಗೆ ಅಕಾಡೆಮಿಯಿಂದ ಸರ್ಟಿಫಿಕೇಟ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮಾಂಡ್‍ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್, ಹಾಗೂ ಸುಮೇಳ್ ಸಮನ್ವಯಿ ಸುನಿಲ್ ಮೊಂತೆರೊ ಉಪಸ್ಥಿತರಿದ್ದರು. ವಿತೋರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]