Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಜಾಗೃತಿ ಅಭಿಯಾನ ಯೋಜನೆಯ 2019-20 ನೇ ಸಾಲಿನ ಪ್ರಥಮ ಕಾರ್ಯಕ್ರಮ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲಿನಲ್ಲಿ ದಿನಾಂಕ 15.07.2019 ರಂದು ನಡೆಸಲಾಯಿತು.

ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ. ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಶ್ರೀ ಸಂತೋಷ್ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿಯ ಅಧ್ಯಕ್ಷರು ಮಕ್ಕಳಲ್ಲಿ ಕೊಂಕಣಿ ಭಾಷಾಭಿಮಾನ ಬೆಳೆಯಲು ಪೂರಕವಾಗುವಂತೆ ಫ್ರೋತ್ಸಾಹಕ ಮಾತುಗಳನ್ನಾಡಿದರು. ಭಾರತದ ಸಂವಿಧಾನದಲ್ಲಿ ಮಾನ್ಯತೆಪಡೆದ ಭಾಷೆ ಕೊಂಕಣಿಯಾಗಿದ್ದು, ನಾವೆಲ್ಲಾ ಕೊಂಕಣಿಗರು ಹೆಮ್ಮೆಪಡಬೇಕಾದ ವಿಷಯ ಎಂದು ತಿಳಿಸಿದರು.

ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಲಜಾಕ್ಷಿ, ಶಾಲಾ ಕೊಂಕಣಿ ಸಂಘದ ಸಂಚಾಲಕಿಯಾದ ಶ್ರೀಮತಿ ಶಾರದಾ ಕಾಮತ್, ಕೊಂಕಣಿ ಶಿಕ್ಷಕಿ ಪೂರ್ಣಿಮಾ ಕಾಮತ್, ಶ್ರೀಮತಿ ರಚನಾ ಕಾಮತ್, ಕೊಂಕಣಿ ಸಂಘದ ಅಧ್ಯಕ್ಷ ನಮನ್ ಶೆಣೈ, ಕು| ಪೂರ್ವಿ ಪ್ರಭು ಉಪಸ್ಥಿತರಿದ್ದರು. ಕಾರ್ಯದರ್ಶಿ ತ್ರಿವಿಕ್ರಮ್ ಶೆಣೈ ವಂದನಾರ್ಪಣೆ ಗೈದರು. ಕಾರ್ಯಕ್ರಮವನ್ನು ಕು| ಜ್ಞಾನೇಶ್ವರಿ ಜೋಷಿ ನಿರೂಪಿಸಿದರು, ಕು| ಸ್ವಾತಿ ಕಿಣಿ ಸ್ವಾಗತಿಸಿದರು.