Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಜಾಗೃತಿ ಅಭಿಯಾನ ಯೋಜನೆಯ 2019-20 ನೇ ಸಾಲಿನ ದ್ವಿತೀಯ ಕಾರ್ಯಕ್ರಮ ಮಂಗಳೂರಿನ ಶ್ರೀ ಕೃಷ್ಣ ಮಂದಿರದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ದಿನಾಂಕ 15.07.2019 ರಂದು ನಡೆಸಲಾಯಿತು.

ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.¥ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸದಸ್ಯ ಹಾಗೂ ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಅಕಾಡೆಮಿಯ ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ನಾವು ಕೈಗೊಳ್ಳಬೇಕಾದ ಜವಾಬ್ದರಿಗಳ ಕುರಿತು ಮಾಹಿತಿ ನೀಡಿದರು ಹಾಗೂ ಕೊಂಕಣಿ ಅಕಾಡೆಮಿಯಿಂದ ಹಮ್ಮಿಕೊಂಡಿರು ವಿವಿಧ ಯೋಜನೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊಂಕಣಿ ಭಾಷಾಭಿಮಾನಿಗಳು ಅಕಾಡೆಮಿಯ ಅಧ್ಯಕ್ಷರೊಂದಿಗೆ ಕೊಂಕಣಿ ಶಿಕ್ಷಣ, ಕೊಂಕಣಿ ಸರ್ಟಿಫಿಕೇಟ್ ಕೋರ್ಸ್ ಮುಂತಾದ ವಿಚಾರಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಶ್ರೀಮತಿ ಮಾಲತಿ ಹೆಗಡೆ ಪ್ರಾರ್ಥನೆಗೈದರು. ಶ್ರೀಮತಿ ಪ್ರಭಾ ಭಟ್ ವಂದನಾರ್ಪಣೆ ಗೈದರು.

ಈ ಸಂದರ್ಭದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘ ಮಾಜಿ ಅಧ್ಯಕ್ಷರಾದ ಶ್ರೀ ಎಂ ವಿಠ್ಠಲ್ ಕುಡ್ವ, ಶ್ರೀ ಎಂ ವೆಂಕಟೇಶ್ ಎನ್ ಬಾಳಿಗಾ, ಶ್ರೀ ಗೋವಿಂದರಾಯ ಪ್ರಭು, ಶ್ರೀಮತಿ ಗೀತಾ ಸಿ ಕಿಣಿ ಹಾಗೂ ಸಂಘದ ಇತರ ಸದಸ್ಯರು, ಕೊಂಕಣಿ ಎಂ.ಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.