Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಶಾಲೆಗಳಲ್ಲಿ ಕೊಂಕಣಿ ಕ್ಲಬ್ ಯೋಜನೆಯನ್ನು ರೂಪಿಸಿಕೊಂಡಿದ್ದು. ಈ ಯೋಜನೆಯ ಎರಡನೇ ಕೊಂಕಣಿ ಕ್ಲಬ್ ಉದ್ಘಾಟನಾ ಕಾರ್ಯಕ್ರಮ ಮಂಗಳೂರಿನ ಉರ್ವಾದ ಕೆನರಾ ಹೈಸ್ಕೂಲಿನಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕೊಂಕಣಿ ಭಾಷೆಗಳ ಮಹತ್ವ ಹಾಗೂ ಇತಿಹಾಸವನ್ನು ಮೆಲುಕು ಹಾಕಿದರು. ಮಕ್ಕಳಲ್ಲಿ ಕೊಂಕಣಿ ಜಾಗೃತಿ ಉಂಟಾದಲ್ಲಿ ಮುಂದಿನ ಪೀಳಿಗೆಗೆ ನಾವು ನೀಡುವ ಉತ್ತಮ ಉಡುಗೊರೆ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯೋಪಾದ್ಯಾಯಿನಿ ಶ್ರೀಮತಿ ಅರುಣಾ ಕುಮಾರಿ ಹೂವು ನೀಡಿ ಸ್ವಾಗತಿಸಿದರು. ಕೆನರಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರಾದ ಶ್ರೀಮತಿ ಲಲನಾ ಜೆ ಶೆಣೈ ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನವನ್ನು ಬೆಳೆಸಲು ಉತ್ತೇಜನವನ್ನು ನೀಡಿದರು. ಅಕಾಡೆಮಿಯ ಸದಸ್ಯ ಶ್ರೀ ಸಂತೋಷ್ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎಂ ಅಣ್ಣಪ್ಪ ಪೈ, ಸಂಚಾಲಕರಾದ ಶ್ರೀ ಪಂಚಮಹಲ್ ಗೋಪಾಲ ಕೃಷ್ಣ ಶೆಣೈ, ಸಂಚಾಲಕರಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ ಉಪಸ್ಥಿತರಿದ್ದರು. ಕೊಂಕಣಿ ಸಂಘದ ಸಂಯೋಜಕಿಯಾದ ಶ್ರೀಮತಿ ನಮಿತಾ ಪ್ರಕಾಶ್, ಶಿಕ್ಷಕರಾದ ಶ್ರೀಮತಿ ಸುಧಾ ಶೆಣೈ, ಕುಮಾರಿ ಪೂಜಾ ಭಟ್, ಶ್ರೀಮತಿ ರಚನಾ ಕಾಮತ್, ಶ್ರೀ ರಾಜಾರಾಮ್ ನಾಯಕ್, ಶ್ರೀ ಎಡ್ರಿಯನ್ ಡಾಂಟಿಸ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಕುಮಾರಿ ಕೃಪಾ ಕೆ ಅತಿಥಿಗಳನ್ನು ಸ್ವಾಗತಿಸಿದರು. ಮಾಸ್ಟರ್ ಆದೀಶ್ ಶೆಣೈ ವಂದಿಸಿದರು. ಕು. ಮೇದಾ ಕಾರ್ಯಕ್ರಮ ನಿರೂಪಿಸಿದರು.