Print

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಆಸ್ನೋಟಿ ಶಿಕ್ಷಣ ಸಂಸ್ಥೆ, ಕಾರವಾರ ಇವರ ಸಹಯೋಗದಲ್ಲಿ ಜಾನಪದ ಕೊಂಕಣಿ ಹಾಡುಗಳ ಸರ್ಟಿಫಿಕೇಟ್ ಕೋರ್ಸನ್ನು ಕಾರವಾರದ ಶಿವಾಜಿ ವಿದ್ಯಾ ಮಂದಿರದಲ್ಲಿ ದಿನಾಂಕ 30.07.2019 ರಂದು ಉದ್ಘಾಟನೆಗೊಂಡಿತು. ಅಸ್ನೋಟಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ರೇಷ್ಮಾ ತಳೇಕರ ಸರ್ಟಿಫಿಕೇಟ್ ಕೋರ್ಸ್‍ನ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್. ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಕಾಡೆಮಿಯಿಂದ ಹಮ್ಮಿಕೊಳ್ಳುವ ಸರ್ಟಿಫಿಕೇಟ್ ಕೋರ್ಸ್‍ನ ಧ್ಯೇಯ ಉದ್ದೇಶವನ್ನು ಕುರಿತ ವಿವರವಾದ ಮಾಹಿತಿ ಹಾಗೂ ಅಕಾಡೆಮಿಯಿಂದ ಕೊಂಕಣಿ ಜಾಗೃತಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಅಸ್ನೋಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಸಂಜಯ ಸಾಳುಂಕೆ, ಅಸ್ನೋಟಿ ಶಿವಾಜಿ ಮಂದಿರದ ಮುಖ್ಯಾದ್ಯಾಪಕರಾದ ಶ್ರೀ ದಿನೇಶ ವಿ ಗಾಂವಕರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ನಾಗೇಶ್ ಅಣ್ವೇಕರ್ ಸದಸ್ಯ ಸಂಚಾಲಕತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.